ಪುತ್ತೂರು: ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಹೇಳಿಕೆಯೊಂದನ್ನು ವೆಬ್ ನ್ಯೂಸ್ ಚಾನಲ್ ತಿರುಚಿ ಪ್ರಸಾರ ಮಾಡಿ ನನ್ನ ಮೇಲೆ ಅಪಪ್ರಚಾರ ಮಾಡಿದೆ ಎಂದು ಕೆ.ಪಿ.ಸಿ.ಸಿ ಸಂಯೋಜಕ ಖಾಸಗಿ ಮಾಧ್ಯಮವೊಂದರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿ ವಿರುದ್ಧ ಮಾತನಾಡಿದ್ದೇನೆ ಎಂಬ ನನ್ನ ವಿಡಿಯೋ ಸಂಪೂರ್ಣ ತಿರುಚಿದ ವೀಡಿಯೋ ಆಗಿದ್ದು ನನ್ನ ಪತ್ರಿಕಾ ಗೋಷ್ಠಿಯ ಹೇಳಿಕೆಯನ್ನು ತಿರುಚಿ ಚಾನಲ್ ವೊಂದು ನನ್ನ ಮೇಲೆ ಆರೋಪ ನಡೆಸಿದೆ ಇದೀಗ ಆ ಚಾನಲ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಕಾವು ಹೇಮನಾಥ ಶೆಟ್ಟಿ ರವರು ಡಿ.ಟಿವಿ ಗೆ ತಿಳಿಸಿದರು.

ಡಿ.ಕೆ.ಶಿ ವಿರುದ್ಧ ಮಾತನಾಡಿದ್ದಾರೆ ಎಂದು ಹೇಳಿ ಅವರನ್ನು ಕೆ.ಪಿ.ಸಿ.ಸಿ ಸಂಯೋಜಕ ಹುದ್ದೆಯಿಂದ ವಜಾಗೊಳಿಸಿದ ಬಗ್ಗೆ ವಿವರಣೆ ನೀಡಿದ ಹೇಮನಾಥ ಶೆಟ್ಟಿ ರವರು ಇದೊಂದು ನನ್ನ ಮೇಲೆ ವೆಬ್ ಚಾನಲ್ ವೊಂದು ನಡೆಸಿದ ಹುನ್ನಾರವಾಗಿದೆ.

ಡಿ.ಕೆ.ಶಿ ವಿರುದ್ಧ ಅಂತಹ ಯಾವುದೇ ಹೇಳಿಕೆಯನ್ನು ಈ ವರೆಗೆ ಕೊಟ್ಟಿಲ್ಲ ಅವರು ನನ್ನ ನಾಯಕರು ನನ್ನನ್ನು ಈ ಮಟ್ಟಿಗೆ ಬೆಳೆಸಿದವರೇ ಅವರು ಅವರನ್ನು ಹಿಮ್ಮೆಟ್ಟಿ ನಾನು ಬೆಳೆಯಲು ಸಾಧ್ಯವೇ ಅವರು ಎಂದೆಂದೂ ನಮ್ಮ ನಾಯಕರು ಎಂದು ಹೇಮನಾಥ ಶೆಟ್ಟಿ ಹೇಳಿದರು.
ಕೆ.ಪಿ.ಸಿ.ಸಿ ಹುದ್ದೆಯಿಂದ ವಜಾಗೊಳಿಸಿದ ಬಗ್ಗೆ ಮಾಧ್ಯಮಗಳಲ್ಲಿ ಕಂಡು ಮಾತ್ರ ಗೊತ್ತು ನನಗೆ ಈ ವರೆಗೆ ಯಾವುದೇ ಅಧಿಕೃತ ಮಾಹಿತಿ ದೊರಕಿಲ್ಲ ಪತ್ರ ಸಿಕ್ಕಿದರೆ ಡಿ.ಕೆ.ಶಿ ವಿರುದ್ಧ ಮಾತಾಡಿಲ್ಲ ಎಂಬುವುದಕ್ಕೆ ಸಂಪೂರ್ಣ ಪುರಾವೆ ನನ್ನಲಿದೆ ಎಂದು ಅವರು ಡಿ.ಟಿವಿ ಗೆ ತಿಳಿಸಿದರು.

ಈಗಾಗಲೇ ಹೇಮನಾಥ್ ಶೆಟ್ಟಿಯವರು ಈ ಬಗ್ಗೆ ಕಾರ್ಯಾಧ್ಯಕ್ಷರಲ್ಲಿ ಮಾತಾಡಿದ್ದು ಯಾವುದೇ ಕಾರಣಕ್ಕೂ ಅವಸರ ಪಡಬೇಕಾದ ಅವಶ್ಯಕತೆ ಇಲ್ಲ ಅಧ್ಯಕ್ಷರಲ್ಲಿ ನೀವು ನೇರವಾಗಿ ಮಾತಾಡಿ ಈ ಸಮಸ್ಯೆಯನ್ನು ಬಗೆಹರಿಸೋಣ ಎಂದು ತಿಳಿಸಿದ್ದಾರೆಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.