ಅವರು ಮೊಯಿದೀನ್ ಹಳೆಯಂಗಡಿ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ ನಿಷೇಧವಾಗುವ ಮುಂಚೆ ಹಲವು ಕಡೆಗಳಲ್ಲಿ ನಡೆದ ದಾಳಿಗಳಲ್ಲಿ ಇವರನ್ನೂ ಕೂಡ ಬಂಧಿಸಲಾಗಿತ್ತು ಇಲ್ಲಿಯವರೆಗೂ ಅವರು ಜೈಲುವಾಸದಲ್ಲೇ ಇದ್ದಾರೆ.
ಇಂದು ಅವರ ಪ್ರಿಯ ಪತ್ನಿ ಸೌದ ಇಹಲೋಕ ತ್ಯಜಿಸಿದರು.
ತನ್ನ ಪ್ರೀತಿಯ ಪತ್ನಿಯ ಮೃತದೇಹವನ್ನು ನೋಡಲು ವಿಶೇಷ ಪೆರೋಲ್ ಮೂಲಕ ಅವರು ಮನೆಗೆ ತಲುಪಿದರು.
ಮನೆ ಸಂಪೂರ್ಣ ನಿಶ್ಯಬ್ದಗೊಂಡಿದೆ, ಮನೆಯಾಕೆ ಬಿಳಿ ವಸ್ತ್ರದೊಂದಿಗೆ ಮಂಚದಲ್ಲಿ ಮಲಗಿದ್ದಾಳೆ ಅವಳ ಸುತ್ತಮುತ್ತ ಎಲ್ಲರೂ ಕುರಾನ್ ಜಪಗಳ ಮಾಡುತ್ತಿದ್ದಾರೆ.

ಪೊಲೀಸ್ ಗಾಡಿಯಿಂದ ಇಳಿದು ಬಂದ ಮೊಯಿದೀನ್ ಗೆ ಇದೆಲ್ಲವೂ ಅರಗಿಸಿಕೊಳ್ಳಲಾಗುತ್ತಿಲ್ಲ ಅದಾಗಲೇ ಅಪ್ಪನನ್ನು ಕಂಡ ಮಕ್ಕಳಿಗೆ ಪಾರವೇ ಇಲ್ಲ.
ತನ್ನ ತಂದೆ ಬಂದರೆಂದು ಸಂತೋಷದಿಂದ ಆ ಮಗು ತಂದೆಯ ಮೇಲೇರಿತು.
ಅತ್ತಾಗಳೆಲ್ಲಾ ಸಾಂತ್ವನವಾಗುತ್ತಿದ್ದ ಅಮ್ಮ ನಿಶ್ಚಲವಾಗಿ ಮಲಗಿದನ್ನು ಕಂಡ ಮಕ್ಕಳಿಗೆ ಅಪ್ಪ ಬಂದ ಸಂತೋಷ ಬೇರೇನೇ.
ಆದರೆ ಮಕ್ಕಳಿಗೇನು ಗೊತ್ತು? ಅಪ್ಪನು ಕೂಡ ನಮ್ಮನ್ನು ಬಿಟ್ಟು ಮತ್ತೆ ಜೈಲು ಕಡೆ ಹೋಗುತ್ತಾರೆ ಎಂದು.
ಮಯ್ಯತ್ ಮಸೀದಿಯತ್ತ ತೆರಳಿತು.
“ಲಾಯಿಲಾಹ ಇಲ್ಲಲ್ಲಾಹ್”
ಶಬ್ದಗಳು ಜೋರಾಗಿ ಬಾಯಿಯಿಂದ ಹೊರ ಬರುತ್ತಲೇ ಇದೆ.
ಮಗುವೊಂದು ಅಪ್ಪನ ತೋಳಿನಲ್ಲೇ ಪ್ರೀತಿಯ ಮಧುರವನ್ನು ಸವಿಯುತ್ತಿದೆ.
ಕಣ್ಣೀರು ತುಂಬಿದ ಆ ಅಪ್ಪನಿಗೆ ತನ್ನ ಮಕ್ಕಳ ನಡುವೆ ಏನೂ ಮಾಡಲು ಅಸಾಧ್ಯವಾದ ಪರಿಸ್ಥಿತಿ.
ಮಯ್ಯತ್ ಕಬರಿಗಿರಿಸಲಾಯಿತು.
ತಾಯಿಯಿಲ್ಲದ ನಾಲ್ಕು ಮಕ್ಕಳು ಅಪ್ಪನ ಕೈ ಹಿಡಿದು ಮನೆಯತ್ತ ಹೆಜ್ಜೆ ಹಾಕಿದರು.
ಕಣ್ಣೀರು ತುಂಬಿದ ಅಪ್ಪ ಎಂಬ ಅಮೃತ ದುಃಖವ ತೋರಿಸಲಾಗದೇ ಮಕ್ಕಳ ಬಳಿ ಚಿಕ್ಕ ಮಗುವಾಗಿ ಬಿಟ್ಟರು.
ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗುತ್ತಿರುವ ಅಪ್ಪ ಮಕ್ಕಳ ಆ ಆಟ ಎಂತಹ ಕಲ್ಲು ಮನಸ್ಸುಗಳನ್ನೂ ಕೂಡ ಕರಗಿಸದೇ ಇರಲಾರದು.
ಮಕ್ಕಳಿಗೆ ಗೊತ್ತಿಲ್ಲ ಅಮ್ಮ ಇನ್ನು ಬರಲ್ಲ, ಅಪ್ಪ ನಮ್ಮ ಬಿಟ್ಟು ಮತ್ತೆ ಜೈಲು ವಾಸದತ್ತ ಹೋಗುತ್ತಾರೆ ಎಂದು.
ಮರಣ ಮತ್ತು ಬದುಕನ್ನು ಅರ್ಥಮಾಡಿಕೊಳ್ಳುವ ಪ್ರಾಯ ಈ ಮಗುವಿನದಲ್ಲ. ಅಮ್ಮ ಮತ್ತು ಅಪ್ಪ ಜೊತೆಗಿರಬೇಕು ಎಂಬುವುದಷ್ಟೇ ಪುಟ್ಟ ಮಕ್ಕಳ ಆಗ್ರಹ. ಅಂಥದ್ದೊಂದು ಆಗ್ರಹ ಈ ಪುಟ್ಟಿಯಲ್ಲೂ ಇದ್ದೀತು. ಆದರೆ ಅಮ್ಮ ಬದುಕು ಮುಗಿಸಿ ಹೊರಟಿದ್ದಾರೆ. ಜೊತೆಗೆ ಇರಬೇಕಾದ ಅಪ್ಪನೋ ಜೈಲುಪಾಲಾಗಿದ್ದಾರೆ. ಅಪ್ಪನ ತಪ್ಪು-ಒಪ್ಪುಗಳು, ಸಂಘಟನೆ, ಕಾರ್ಯಚಟುವಟಿಕೆಗಳ ಆಚೆಗೆ ಮಗುವಿಗೆ ಅವರು ಅಪ್ಪ ಮಾತ್ರ.
ಅಮ್ಮ ಯಾಕೆ ಮಾತಾಡಲ್ಲ ಮತ್ತು ಅಪ್ಪ ಯಾಕೆ ಜೊತೆ ನಿಲ್ಲಲ್ಲ ಎಂಬ ಪ್ರಶ್ನೆಯೊಂದನ್ನು ಜೊತೆಗಿಟ್ಟುಕೊಂಡು ಉತ್ತರಕ್ಕಾಗಿ ತಡಕಾಡುವ ಈ ಮಗುವಿಗೆ ಉತ್ತರ ಕೊಡುವುದು ಸುಲಭವೂ ಅಲ್ಲ.
ಪ್ರಾರ್ಥನೆಯಷ್ಟೇ ಉಳಿದ ಆಯುಧ
ಆ ಕಂದಮ್ಮಗಳಿಗಾಗಿ ಪ್ರಾರ್ಥಿಸಿ.