ಬೆಂಗಳೂರು: ಸಪ್ತ ಪದಿ ತುಳಿದು ತನ್ನೊಂದಿಗೆ ಬಂದ ತನ್ನನ್ನು ನಂಬಿ ಬಂದ ಪತ್ನಿಯನ್ನೇ ಪರ ಪುರುಷರೊಂದಿಗೆ ಮಲಗಿಸಿ ಅದನ್ನು ವಿಡಯೋ ರೆಕಾರ್ಡ್ ಮಾಡಿ ವಿಕೃತಿ ಮೆರೆಯುತ್ತಿದ್ದ ಸೈಕೋ ಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ರೀತಿ ವರ್ತಿಸಿದ ವಿಕೃತ ಕಾಮಿ ಬೆಂಗಳೂರಿನ ಸಂಪಿಗೆಹಳ್ಳಿ ನಿವಾಸಿ ಜಾನ್ ಪಾಲ್ ಬಂಧಿತ
ಆರೋಪಿಯಾಗಿದ್ದಾನೆ.
ತನ್ನ ಜೊತೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದ ಪತ್ನಿಯನ್ನು ಸ್ನೇಹಿತರೊಂದಿಗೆ ಮಲಗಿಸಿ ವಿಡಿಯೋ ಮಾಡಿ ಈ ಪಾಪಿ ವಿಕೃತಿ ಮೆರೆಯುತ್ತಿದ್ದನೆಂದು ವರದಿಯಾಗಿದೆ.
ವಿಕೃತ ಮನಸ್ಸಿನ ಗಂಡನ ಈ ಹಿಂಸೆ ತಾಳಲಾರದೇ ಗಂಡನ ವಿರುದ್ಧ ಪತ್ನಿ ದೂರು ನೀಡಿದ್ದು, ತನ್ನ ಗಂಡ ಇನ್ನೂ ಹಲವು ವಿಕೃತಕಾಮಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಬಗ್ಗೆ ಪೊಲೀಸರ ಮುಂದೆ ಪತ್ನಿ ಹೇಳಿಕೊಂಡಿದ್ದಾಳೆ.
ಇವರು 2011 ರ ಏಪ್ರಿಲ್ ನಲ್ಲಿ ಜಾನ್ ಪಾಲ್ ಅವರನ್ನು ಮಹಿಳಾ ಟೆಕ್ಕಿ ವಿವಾಹವಾಗಿದ್ದು ಮೊದಲ ನಾಲ್ಕು ವರ್ಷಗಳವರೆಗೆ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದು, ನಂತರ 2015 ರಿಂದ ಆರೋಪಿ ಪತಿ ಜಾನ್ ಪಾಲ್ ತನ್ನ ವಿಕೃತಿ ಶುರು ಮಾಡಿದ್ದನು ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ.

ಮನೆಗೆ ತನ್ನ ಗೆಳೆಯರನ್ನು ಕರೆದು ಪಾರ್ಟಿ ಮಾಡಿ ಬಂದ ಗೆಳೆಯರೊಂದಿಗೆ ಬೆಡ್ ಶೇರ್ ಮಾಡುವಂತೆ ಹಿಂಸೆ ನೀಡುತ್ತಿದ್ದನೆಂದು ತಿಳಿದು ಬಂದಿದೆ.
ತನ್ನ ಪತಿಯ ಹಿಂಸೆ ತಾಳಲಾರದೆ ಗೆಳೆಯರೊಂದಿಗೆ ದೈಹಿಕ ಸಂಪರ್ಕಕ್ಕೆ ಒಪ್ಪಿಕೊಂಡಿದ್ದು ಆರೋಪಿಯು ತನ್ನ ಸ್ನೇಹಿತರಾದ ಸಜೀಶ್ ಹಾಗೂ ನಾಜಿ ಎಂಬುವವರ ಜೊತೆ ಪತ್ನಿಯನ್ನು ಮಲಗಿಸಿದ್ದನು.
ಸ್ವಂತ ಪತ್ನಿಯನ್ನು ಗೆಳೆಯರೊಂದಿಗೆ ಮಲಗಿಸಿ ಫೋಟೋ, ವಿಡಿಯೋ ಚಿತ್ರೀಕರಣವನ್ನೂ ಮಾಡುವ ಮೂಲಕ ವಿಕೃತಿ ಮೆರೆಯುತ್ತಿದ್ದನು.
ಪ್ರತಿ ವಾರ ಇದೇ ರೀತಿ ನಡೆಯುತ್ತಿದ್ದು, ಈ ಘಟನೆಗಳಿಂದ ಬೇಸತ್ತು ಗಲಾಟೆ ಮಾಡಿದರೂ ತನ್ನನ್ನು ಗಂಡ ಬಿಡುತ್ತಿರಲಿಲ್ಲ ಎಂದು ದೂರಿನಲ್ಲಿ ಆಕೆ ತಿಳಿಸಿದ್ದಾಳೆ.
ಆರೋಪಿ ಪತಿ ತನ್ನ ಪತ್ನಿಯ ಮೇಲೆ ವಿಕೃತಿ ಮೆರೆದಿದ್ದಲ್ಲದೆ ಪತ್ನಿಯ ತಂಗಿಯನ್ನು ತನ್ನೊಡನೆ ಮಲಗುವಂತೆ ಕಿರುಕುಳ ನೀಡುತ್ತಿದ್ದನೆಂದು ದೂರಿನಲ್ಲಿ ತಿಳಿಸಿದ್ದಾರೆ.
ಇದರಿಂದ ಬೇಸತ್ತ ಪತ್ನಿ ಗಂಡನಿಗೆ ವಿಚ್ಛೇದನ ನೀಡಲು ಮುಂದಾಗಿದ್ದು ಈ ವೇಳೆ ಆತ ತನ್ನ ಗೆಳೆಯರೊಂದಿಗೆ ಪತ್ನಿ ಮಲಗಿದ್ದ ವಿಡಿಯೋ, ಹಾಗೂ ಅಶ್ಲೀಲ ಪೋಟೊ ವೈರಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.
ಇಷ್ಟಕ್ಕೆ ಮುಗಿಯದೆ ತನ್ನ ಮಧ್ಯವ್ಯಸನದ ಪ್ರಭಾವ ಹೆಚ್ಚಿಸಿಕೊಳ್ಳಲೆಂದು ಗಾಂಜಾ ಸೇವನೆಯನ್ನೂ ಕೂಡ ಮಾಡುತ್ತಿದ್ದು ಮನೆಯಲ್ಲಿಯೇ ಗಾಂಜಾ ಸಸಿಗಳನ್ನು ನೆಟ್ಟು ಬೆಳೆಸಿ ಗಾಂಜಾ ವ್ಯಸನ ಕೂಡ ಮಾಡುತ್ತಿದ್ದನ್ನಲಾಗಿದೆ.
ಈ ಎಲ್ಲಾ ವಿಕೃತಿಗಳನ್ನು ಸಹಿಸಲಾರದೆ ನೊಂದ ಪತ್ನಿ ಸಂಪಿಗೆ ಹಳ್ಳಿ ಠಾಣಾ ಪೊಲೀಸರಿಗೆ ದೂರು ನೀಡಿದ್ದಾಳೆ.
ದೂರಿನ ಅನ್ವಯ ಲೈಂಗಿಕ ಕಿರುಕುಳ, ಎನ್.ಡಿ.ಪಿ.ಎಸ್ ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತಿಯನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.