ಬೆಂಗಳೂರು: ಕಾಲೇಜ್ ಹೈಸ್ಕೂಲ್ ಯುವತಿಯರ ಪಿಜಿಯಲ್ಲಿ ಆಶ್ರಯ ಪಡೆಯುತ್ತಿದ್ದ ಯುವತಿಯರ ಸ್ನಾನ ಮಾಡುವ ದೃಶ್ಯಗಳನ್ನು ಬಾತ್ರೂಂನ ಕಿಟಕಿಯಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಸೆರೆಹಿಡಿದು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದ ವಿಕೃತ ಕಾಮಿಯನ್ನು ಬೆಂಗಳೂರು ಆಗ್ನೆಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.

ಯುವತಿಯ ಹೆಸರಿನಲ್ಲಿ ಪೊಲೀಸರೇ ಸೆಕ್ಸ್ ನಡೆಸಲು ಆಫರ್ ಕೊಟ್ಟು ಸಿನಿಮೀಯ ರೀತಿಯಲ್ಲಿ ಖತರ್ನಾಕ್ ಕಾಮುಕನನ್ನು ಅರೆಸ್ಟ್ ಮಾಡಿದ್ದಾರೆ.
ಆರೋಪಿಯನ್ನು ಪಾಂಡಿಚೇರಿ ಮೂಲದ ಕಾಮುಕ ನಿರಂಜನ್ ಎಂದು ತಿಳಿದು ಬಂದಿದೆ.
ಹತ್ತನೇ ತರಗತಿ ಪಾಸು ಮಾಡಿಕೊಂಡಿದ್ದ ಈತ ಪಾಂಡಿಚೆರಿ ಮೂಲದವನಾಗಿದ್ದು ಕಳೆದ 4 ವರ್ಷಗಳಿಂದ ಬೊಮ್ಮನಹಳ್ಳಿಯ ಪಿಜಿಯಲ್ಲೇ ನೆಲೆಸಿದ್ದ ಈತ ತನ್ನ ಹತ್ತಿರವಿರುವ ಯುವತಿಯರ ಪಿಜಿ ಮಾಲೀಕನೊಂದಿಗೆ ಆತ್ಮೀಯ ಒಡನಾಟ ಬೆಳೆಸಿಕೊಂಡಿದ್ದ. ಈತ ಇರುವ ಕಟ್ಟಡಕ್ಕೆ ಮಹಿಳೆಯರ ಪಿಜಿ ಹೊಂದಿಕೊಂಡೆ ಇದ್ದು ಎರಡು ಪಿಜಿಗಳಿಗೆ ಮಾಲಿಕ ಒಬ್ಬನೇ ಎಂದು ತಿಳಿದು ಬಂದಿದೆ.
ಹೀಗಾಗಿ ಮಹಿಳೆಯರ ಪಿಜಿಯಲ್ಲಿ ಏನಾದರೂ ಕೆಲಸಗಳಿದ್ದರೆ ತಾನೇ ಮುಂದೆ ನಿಂತು ಮಾಡಿಸುತ್ತಿದ್ದು ಇದರಿಂದ ಲೇಡಿಸ್ ಪಿಜಿಯಲ್ಲಿ ಕೂಡಾ ನಿರಾತಂಕವಾಗಿ ಆರೋಪಿ ಕಾಮುಕನಿಗೆ ಓಡಾಡಲು ಮಾಲೀಕನೇ ಅವಕಾಶ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೇ ದುರ್ಬಳಕೆ ಮಾಡಿಕೊಂಡ ಕಾಮುಕ ನಿರಂಜನ್ ಮಹಿಳೆಯರಿಲ್ಲದ ಹೊತ್ತಿನಲ್ಲಿ ಪಿಜಿಗೆ ತೆರಳಿ ಸ್ನಾನ ಗೃಹ, ಬೆಡ್ ರೂಂ ಹಾಗೂ ಇತರೆ ಸ್ಥಳಗಳನ್ನು ಪರಿಶೀಲಿಸಿಕೊಂಡು ತನ್ನ ಚಪಲ ತೀರಿಸಿಕೊಳ್ಳಲು ಮಾಸ್ಟರ್ ಪ್ಲಾನ್ ತಯಾರಿ ಮಾಡಿಯೇ ಬಿಟ್ಟಿದ್ದ.
ಇದಾದ ಬಳಿಕ ಯುವತಿಯರು ಸ್ನಾನ ಮಾಡುವಾಗ ಎಲ್ಲಿಂದ ವಿಡಿಯೋ ರೆಕಾರ್ಡ್ ಮಾಡಿದ್ರೆ ಯಾರಿಗೂ ತಿಳಿಯುವುದಿಲ್ಲವೆಂದು ಸಂಚು ರೂಪಿಸಿ ತಾನು ವಾಸವಿದ್ದ ಪಿಜಿಯ ಟೆರೇಸ್ ಮೇಲಿಂದ ಪಕ್ಕದ ಲೇಡಿಸ್ ಪಿಜಿಯಲ್ಲಿದ್ದ ಯುವತಿಯರ ಚಲನವಲನದ ಮೇಲೆ ಒಂದು ಕಣ್ಣಿಟ್ಟುಕೊಳ್ಳುತ್ತಾನೆ.
ಆಗ ಯಾರಾದರೂ ಯುವತಿ ಸ್ನಾನ ಮಾಡಲು ಪಿಜಿಯ ಹೊರಗೆ ಒಣ ಹಾಕಿದ್ದ ಟವಲನ್ನು ತೆಗೆದುಕೊಂಡ ಕೂಡಲೇ ಆರೋಪಿ ಅಲರ್ಟ್ ಆಗಿ ಕೂಡಲೇ ತನ್ನ ಪಿಜಿಯ ಮಹಡಿಯಿಂದ ಲೇಡಿಸ್ ಪಿಜಿಯ ಮಹಡಿಗೆ ಜಿಗಿದು ನೀರಿನ ಪೈಪನ್ನು ಹಿಡಿದುಕೊಂಡು ಸ್ನಾನ ಗೃಹದ ಕಿಟಕಿಯ 1.5ಡಿ ಎತ್ತರದ ಚಜ್ಜಾ ಅಂದರೆ ಸನ್ಶೇಡ್ ಮೇಲೆ ಕುಳಿತುಕೊಳ್ಳುತ್ತಿದ್ದ.

ಅಲ್ಲಿಂದ ಮೊಬೈಲನ್ನು ತೂಗು ಬಿಟ್ಟು ಕಿಟಕಿ ಮೂಲಕ ಸ್ನಾನ ಮಾಡುತ್ತಿದ್ದ ಯುವತಿಯರ ನಗ್ನ ದೃಶ್ಯವನ್ನು ಚಿತ್ರೀಕರಿಸಿಕೊಳ್ಳುತ್ತಿದಲ್ಲದೆ ಆಕೆಯ ಫೋಟೋ ಸಹ ತೆಗೆದು ಬಳಿಕ ಲೇಡಿಸ್ ಪಿಜಿ ರಿಜಿಸ್ಟರ್ ನಲ್ಲಿ ಆ ಯುವತಿಯರ ಮೊಬೈಲ್ ನಂಬರ್ ತೆಗೆದುಕೊಂಡು ಚಾಟಿಂಗ್ ಆರಂಭಿಸುತ್ತಿದ್ದನ್ನೆಲಾಗಿದೆ.

ಬಹು ಕಿಲಾಡಿಯಂತೆ ಯೋಚಿಸುತ್ತಿದ್ದ ನಿರಂಜನ್ ತನ್ನ ಬಗ್ಗೆ ಯಾರಿಗೂ ತಿಳಿಯಬಾರದೆಂದು ತನ್ನ ಮೊಬೈಲ್ನಲ್ಲಿ ಒಂದು ಆ್ಯಪನ್ನು ಇನ್ಸ್ಟಾಲ್ ಮಾಡಿಕೊಂಡು ಆ್ಯಪ್ಗೆ ತನ್ನ ಇಮೇಲ್ ಐಡಿ ಮೂಲಕ ನೋಂದಾಯಿಸಿಕೊಂಡಿದ್ದ. ಆಗ ಸ್ಥಳೀಯ ಮೊಬೈಲ್ ಸಂಖ್ಯೆಯನ್ನು ವಿದೇಶಿ ಸಂಖ್ಯೆಯಾಗಿ ಪರಿವರ್ತಿಸಿ +1(747)222- 8960 ಎಂಬ ನಂಬರನ್ನು ಪಡೆದು ಆ ನಂಬರ್ನಿಂದ ಯುವತಿಯರನ್ನು ಸಂಪರ್ಕಿಸುತ್ತಿದ್ದ.
ತಾನು ಸೆರೆ ಹಿಡಿದ ನಗ್ನ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುವುದಾಗಿ ಯುವತಿಯರಿಗೆ ಬೆದರಿಕೆ ಹಾಕುತ್ತಿದ್ದನ್ನೆಲಾಗಿದೆ.
ಇದಕ್ಕೆ ಬೆದರಿದ ಯುವತಿಯರನ್ನು ರೂಂ,ಲಾಡ್ಜ್ ಅಥವಾ ಇತರೆ ಸ್ಥಳಗಳಿಗೆ ಕರೆಸಿ ಲೈಂಗಿಕವಾಗಿ ಬಳಕೆ ಮಾಡಿ ತನ್ನ ತೃಷಯನ್ನಕ ತಿರಿಸಿಕೊಳ್ಳುತ್ತಿದ್ದ ಎಂದು ತನಿಖೆಯಿಂದ ದೃಢಪಟ್ಟಿದೆ.
ಇತ್ತೀಚೆಗೆ ತಾನು ನೆಲೆಸಿದ್ದ ಪಿಜಿಯಲ್ಲಿ ಯುವತಿಯರು ಸ್ನಾನಕ್ಕೆ ಹೋದಾಗ ಅಲ್ಲಿ ಮೊಬೈಲ್ ಇಟ್ಟು ವೀಡಿಯೋ ರೆಕಾರ್ಡ್ ಮಾಡಿಕೊಂಡು ಬಳಿಕ ಮೊಬೈಲ್ಗೆ ಅನಾಮಧೇಯ ಸಂದೇಶ ಕಳುಹಿಸಿ ಲೈಂಗಿಕತೆಗೆ ಒತ್ತಾಯಿಸಿದ್ದನ್ನಲಾಗಿದೆ.
ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಇನ್ಸ್ಪೆಕ್ಟರ್ ಎಸ್.ಟಿ ಯೋಗೇಶ್ ನೇತೃತ್ವದ ತಂಡವು, ಯುವತಿ ಹೆಸರಿನಲ್ಲಿ ತಾವೇ ಯುವಕನಿಗೆ ಚಾಟಿಂಗ್ ಮಾಡಿದ್ದು ಬಳಿಕ ಸೆಕ್ಸ್ ಮಾಡಲು ಬಾ ಎಂದು ಒಪ್ಪಿಕೊಂಡಿರುವುದಾಗಿ ಆಫರ್ ಕೊಟ್ಟು ಕಾಮುಕನನ್ನ ಖೆಡ್ಡಕ್ಕೆ ಕೆಡವುವದರಲ್ಲಿ ಖಾಕಿ ಪಡೆ ಯಶಸ್ವಿಯಾಗಿದ್ದಾರೆ.