ದಾವಣಗೆರೆ: ವಿವಾಹ ನಿಶ್ಚಿಯವಾಗಿದ್ದ ಯುವತಿಯೋರ್ವಳನ್ನು ದುಷ್ಕರ್ಮಿಯೋರ್ವ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಇಂದು ದಾವಣಗೆರೆಯಲ್ಲಿ ನಡೆದಿದೆ.
ಮೃತಪಟ್ಟ ಯುವತಿಯನ್ನು ದಾವಣಗೆರೆ ವಿನೋಬ ನಗರ ನಿವಾಸಿ ಚಾಂದ್ ಸುಲ್ತಾನ್(24) ಎಂದು ಗುರುತಿಸಲಾಗಿದೆ.

ತನ್ನ ಮನೆಯಿಂದ ತನ್ನ ಸ್ಕೂಟರ್ ನಲ್ಲಿ ಹೊರಟು ದಾವಣಗೆರೆ ಪಿಜೆ ಬಡಾವಣೆಯ ಚರ್ಚ್ ಎದುರು ಹೋಗುತ್ತಿದ್ದಾಗ ದುಷ್ಕರ್ಮಿಯೋರ್ವ ಸ್ಕೂಟರ್ ಅಡ್ಡಗಟ್ಟಿ ಯುವತಿಯನ್ನು ಕೆಳಗೆ ಬೀಳಿಸಿದ್ದಾನೆ.
ಆಗಲೇ ಚಾಕು ತೆಗೆದು ಯುವತಿಗೆ ಇರಿದಿದ್ದಾನೆ.
ತಕ್ಷಣವೇ ದುಷ್ಕರ್ಮಿ ಪರಾರಿಯಾಗಿದ್ದು ರಕ್ತದ ಮಡುವಿನಲ್ಲಿ ಬಿದ್ದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿದ್ದರು ಚಿಕಿತ್ಸೆಗೆ ಸ್ಪಂದಿಸದೇ ಯುವತಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಕೊಲೆಗಡುಕನಿಗೆ ಪೊಲೀಸರು ಶೋಧ ನಡೆಸುತ್ತಿದ್ದು ಸುತ್ತಮುತ್ತಲಿನ ಸಿಸಿ ಕ್ಯಾಮರಾ ಫೋಟೆಜ್ ಸಂಗ್ರಹಿಸುತ್ತಿದ್ದಾರೆ.ಕೊಲೆಗೆ ನಿಖರ ಮಾಹಿತಿ ಕಂಡು ಬಂದಿಲ್ಲ .
ಎಂಟು ತಿಂಗಳ ಹಿಂದೆ ಯುವತಿಗೆ ಹರಿಹರದ ಯುವಕನ ಜೊತೆ ವಿವಾಹ ನಿಶ್ಚಯವಾಗಿತ್ತು ಇದನ್ನು ವಿರೋಧಿಸಿ ದುಷ್ಕರ್ಮಿ ಈ ಕೃತ್ಯ ನಡೆಸಿರಬಹುದೇ ಎಂದು ಸಂಶಯಿಸಲಾಗಿದೆ.ದಾವಣಗೆರೆ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.