ಗೂನಡ್ಕ: ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೊಂ)ಇದರ ವತಿಯಿಂದ ಪ್ರತಿವರ್ಷ ಕೊಡಮಾಡಲ್ಪಡುವ ಪ್ರತಿಷ್ಠಿತ ಕರ್ನಾಟಕ ರಾಜ್ಯ ಮಟ್ಟದ ಸಜ್ಜನ ಸಿರಿ ಪುರಸ್ಕಾರ ಕಾರ್ಯಕ್ರಮ, ಸಜ್ಜನೋತ್ಸವ ಹಾಗೂ 26 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶ್ವಸಿನ ಹಿಂದೆ ದುಡಿದವರಿಗೆ ಅಭಿನಂದನಾ ಕಾರ್ಯಕ್ರಮ ಡಿ.31 ರಂದು ಸಜ್ಜನ ಸಭಾಂಗಣದಲ್ಲಿ ನಡೆಯಲಿದೆ.
ಈ ಹಿಂದೆ ಸುಳ್ಯ ತಾಲೂಕಿನಲ್ಲಿ ತಹಶಿಲ್ದಾರ್ ಆಗಿ ಬಹಳ ಹೆಸರು ಗಳಿಸಿ ಸಾರ್ವಜನಿಕರ ಪ್ರೀತಿಪಾತ್ರರಾಗಿರುವ ಪ್ರಸ್ತುತ ಮಂಡ್ಯ ತಹಶಿಲ್ದಾರ್ ಆಗಿರುವ ಶ್ರೀ ಕುಂಞಿಅಹ್ಮದ್ ಕೆ ಎ ಎಸ್ ಹಾಗೂ ಸರಳ ಸಜ್ಜನ ವ್ಯಕ್ತಿತ್ವದಿಂದ ಜನರ ಪ್ರೀತಿ ಗಳಿಸಿದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕರಾದ ದಾಮೋದರ್ ಮಾಸ್ಟರ್ ರವರಿಗೆ ಸಜ್ಜನ ಸಿರಿ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮದ ನಂತರ ರಂಗಪಯಣ ಬೆಂಗಳೂರು ರಾಜ್ ಗುರು ನಿರ್ದೇಶನದ ‘ಏಕತಾರಿ ಹಿಡಿದು ಏಕತೆ ಸಾರಿದಾತ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ತಿಳಿಸಿದ್ದಾರೆ