ಹುಬ್ಬಳ್ಳಿ: ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಮಧ್ಯೆ ಇದ್ದ ದರ್ಗಾವೊಂದನ್ನು ತೆರವುಗೊಳಿಸಿದ ಘಟನೆ ದೇವರಬೈರಿಕೊಪ್ಪ ಹುಬ್ಬಳ್ಳಿಯಲ್ಲಿ ನಡೆದಿದೆ.

ಮುನ್ನೂರು ವರ್ಷ ಇತಿಹಾಸವಿರುವ ಹುಬ್ಬಳ್ಳಿ ಮೆಹಮೂದ್ ಶಾ ವಲಿಯ್ಯ್ ಇವರ ಮೃತದೇಹ ವನ್ನು ರಸ್ತೆ ಅಗಲೀಕಾರಣಕ್ಕಾಗಿ ದರ್ಗಾದ ಬೇರೊಂದು ಕಡೆಗೆ ಸ್ಥಳಾಂತರಿಸಿದ್ದು ಈ ವೇಳೆ ಅಲ್ಲಿದ್ದ ಜನತೆಗೆ ಪವಾಡ ಪುರುಷನ ಪಾವಡವು ನೋಡಿ ಅಚ್ಚರಿಗೊಂಡಿದ್ದಾರೆ.
ಮುನ್ನೂರು ವರುಷಗಳ ಹಿಂದೆ ಮರಣ ಹೊಂದಿದ ಮ್ಹಮೂದ್ ಶಾ ವಲಿಯ್ಯ್ ರವರ ಪುಣ್ಯ ಶರೀರವನ್ನು ಮೊನ್ನೆ ಸ್ಥಳಾಂತರಿಸಲಾದಾಗ ಮುನ್ನೂರು ವರುಷಗಳ ಹಿಂದೆ ಯಾವರೀತಿ ಇತ್ತೋ ಅದೇ ಯತಾಸ್ಥಿತಿಯಲ್ಲಿ ಮೃತ ಶರೀರ ಮತ್ತು ಅವರ ದೇಹದ ಮೇಲೆ ಹಾಕಲಾಗಿದ್ದ ಕಫನ್ ಬಟ್ಟೆ ಕೂಡ ಅದೇ ಸ್ಥಿತಿಯಲ್ಲಿ ಇತ್ತು ಎಂದು ಸಾರ್ವಜನಿಕರು ಹೇಳಿದ್ದಾರೆ.

ಇದೇ ವೇಳೆ ಅವರ ಪುಣ್ಯ ಶರೀರವನ್ನು ಸ್ಥಳಾಂತರಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗುತ್ತಿದ್ದು ಪಾವಡ ಪುರುಷನ ಪವಾಡಕ್ಕೆ ಜನರು ಆಶ್ಚರ್ಯಗೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರೋರ್ವ ಮಾಹಿತಿ ಹಂಚಿಕೊಂಡಿದ್ದು ಹುಬ್ಬಳ್ಳಿ, ಧಾರವಾಡ ಜನತೆಯ ಆಶ್ರಯ ಕೇಂದ್ರವಾಗಿದ್ದಾರೆ ಬಾಬಾ ರವರು ಅವರ ಪವಾಡ ಮಹಿಮೆ ನಾವು ಅರಿತವರು ಇಂದು ಅವರ ಪುಣ್ಯ ಶರೀರವ ಸ್ಥಳಾಂತರಿಸುವ ವೇಳೆ ಅವರ ಕಫನ್ ಬಟ್ಟೆ ಸಹಿತ ಯತಾ ಸ್ಥಿತಿಯಲ್ಲಿರುವುದು ಅವರ ಪವಾಡವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.