dtvkannada

'; } else { echo "Sorry! You are Blocked from seeing the Ads"; } ?>

ಬಂಟ್ವಾಳ,ಡಿಸೆಂಬರ್ 25 : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ,ನೂರಾನಿಯಾ ಎಸೋಶಿಯೇಶನ್ (ರಿ)ಮತ್ತು ಖಿದ್ಮತುಲ್ ಇಸ್ಲಾಂ ಕಮಿಟಿ (ರಿ) ಪರ್ಲಿಯಾ ಇದರ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಕ್ತನಿಧಿ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 25 ಡಿಸೆಂಬರ್ 2022 ನೇ ಆದಿತ್ಯವಾರದಂದು ಖಿದ್ಮತುಲ್ ಇಸ್ಲಾಂ ಸಭಾಂಗಣ ಪರ್ಲಿಯಾ ಇದರ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು.

ಜನಾಬ್ : ಅನ್ವರ್ ಪರ್ಲೀಯಾ (ಅಧ್ಯಕ್ಷರು, ನೂರಾನಿಯಾ ಅಸೋಸಿಯೇಶನ್ ಪರ್ಲೀಯಾ) ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಡಾ!ಇಮ್ರಾನ್ ಪಾಷಾ (ದಂತ ವೈದ್ಯರು,ಯೇನೆಪೋಯ ದೇರಳಕಟ್ಟೆ)ಕಾರ್ಯಕ್ರಮವನ್ನು ಉದ್ಘಾಟಿಸಿದರು.

'; } else { echo "Sorry! You are Blocked from seeing the Ads"; } ?>

ಬಹು: ಮುಹ್’ಸಿನ್ ಫೈಝಿ (ಗೌರವ ಸದಸ್ಯರು, ನೂರಾನಿಯಾ ಅಸೋಸಿಯೇಶನ್ ಪರ್ಲಿಯಾ)ದುವಾಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಬಹು: ದಾವೂದ್ ಹನೀಫಿ,ಮಹಮ್ಮದ್ ಡಿ, ಮಹಮ್ಮದ್ ಸಾಗರ್, ಪ್ರವೀಣ್ ರೆಡ್ ಕ್ರಾಸ್, ಬಶೀರ್ ವಿಟ್ಲ,ರಿಯಾಝ್ ಬಂಟ್ವಾಳ, ಇಕ್ಬಾಲ್ ಎ.ಕೆ, ನಝೀರ್ ಸಕಬ್, ಫಾರೂಕ್ ಕೆ.ಎಂ,ಅಕ್ಬರ್ ಸಿದ್ದೀಕ್,ಝಿಯಾದ್ ಪರ್ಲಿಯಾ, ಹನೀಫ್ ಬಿ.ಎಚ್, ಜುನೈದ್ ಬಂಟ್ವಾಳ (ಕಾರ್ಯನಿರ್ವಾಹಕರು ಬ್ಲಡ್ ಹೆಲ್ಪ್ ಕರ್ನಾಟಕ (ರಿ) ಹಾಗೂ ನೂರಾನಿಯಾ ಎಸೋಶಿಯೇಶನ್ (ರಿ)ಮತ್ತು ಖಿದ್ಮತುಲ್ ಇಸ್ಲಾಂ ಕಮಿಟಿ (ರಿ) ಪರ್ಲಿಯಾ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

'; } else { echo "Sorry! You are Blocked from seeing the Ads"; } ?>

ಕಾರ್ಯಕ್ರಮವನ್ನು ಹಕೀಂ ಸ್ವಾಗತಿಸಿ ಇಬ್ರಾಯಿಂ ಪರ್ಲಿಯಾ ವಂದಿಸಿದರು

ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ಒಟ್ಟು 78 ಮಂದಿ ರಕ್ತದಾನ ಮಾಡಿ ಜೀವದಾನಿಯಾದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಕ್ತನಿಧಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪರ್ಲಿಯಾ ಪರಿಸರದ ಜನಸ್ನೇಹಿ ನಾಗರಿಕರಿಗೂ ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ದುಡಿದ ಎಲ್ಲಾ ಕಾರ್ಯಕರ್ತರಿಗೂ, ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!