ಮಂಗಳೂರು: ಕೃಷ್ಣಾಪುರದ ಕಾಟಿಪಳ್ಳ ನಿವಾಸಿ ಜಲೀಲ್ ಎಂಬ ಮುಸ್ಲಿಂ ವ್ಯಕ್ತಿಯ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಈ ಒಂದು ಘಟನೆಯ ಆರೋಪಿಗಳಾದ ಸುವಿನ್ ಕಾಂಚನ್ ಯಾನೆ ಮುನ್ನಾ (25) ಮತ್ತು ಶೈಲೇಶ್ ಪೂಜಾರಿ (20), ಪವನ್ ಎಂದು ತಿಳಿದುಬಂದಿದೆ.
ಜಲೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸೋಮವಾರ ತಿಳಿಸಿದ್ದು, ಹೆಸರು ಬಹಿರಂಗಪಡಿಸಲು ಅವರು ನಿರಾಕರಿಸಿದ್ದರು.
ಕೃಷ್ಣಾಪುರ 4ನೆ ಬ್ಲಾಕ್ ನೈತಂಗಡಿ ಬಳಿ ಶನಿವಾರ ರಾತ್ರಿ ಅಂಗಡಿಯ ಮುಂದೆ ಅಬ್ದುಲ್ ಜಲೀಲ್ ಅವರಿಗೆ ಚೂರಿಯಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು.
ಈ ಒಂದು ಪ್ರಕರಣದ ಆರೋಪಿಗಳಾದ ಶೈಲೇಶ್ ಪೂಜಾರಿ ಸುರತ್ಕಲ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು ಹಲವು ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ.
ಸುವಿನ್ ಕಾಂಚನ್ ಮೂಲ್ಕಿ ಮತ್ತು ಸುರತ್ಕಲ್ ಠಾಣೆಯಲ್ಲಿ ರೌಡಿ ಶೀಟರ್, ಈತನ ವಿರುದ್ಧ ಮೂಲ್ಕಿ ಮೈಸೂರು, ಪಡುಬಿದ್ರೆ, ಸುರತ್ಕಲ್ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ. ಆರೋಪಿಗಳು ಕೃತ್ಯವೆಸಗಿ ಮುಂಬೈಗೆ ಪರಾರಿಯಾಗಲು ಸಂಚು ಹೂಡಿದ್ದರು. ಈ ವೇಳೆ, ಕಾಪು ಬಳಿಯ ಲಾಡ್ಜ್ ನಲ್ಲಿದ್ದಾಗಲೇ ಪೊಲೀಸರು ಬಂಧಿಸಿದ್ದು ಇನ್ನೊಬ್ಬ ಪ್ರಮುಖ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ.