dtvkannada

'; } else { echo "Sorry! You are Blocked from seeing the Ads"; } ?>

ಕೋಲಾರ: ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ನಡೆದಿದೆ.

ಪೋಷಕರು ಬುದ್ದಿವಾದ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ಉದಯ್ ಕುಮಾರ್ ಸೋಮವಾರ ವಿಷ ಸೇವಿಸಿದ್ದ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಜನವರಿ 05ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

'; } else { echo "Sorry! You are Blocked from seeing the Ads"; } ?>

ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ತಾತಿಕಲ್ ಗ್ರಾಮದ ಸರ್ಕಾರಿ ಆದರ್ಶ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಉದಯ್ ಕುಮಾರ್ , ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಸೋಮವಾರ ವಿಷಸೇವಿಸಿದ್ದ, ಕೂಡಲೇ ಉದಯ್ ಕುಮಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'; } else { echo "Sorry! You are Blocked from seeing the Ads"; } ?>

ಮಕ್ಕಳು ಈ ರೀತಿ ಮಾಡಿಕೊಳ್ಳುವುದಕ್ಕೆ ಅನೇಕ ಬಾರಿ ಪೋಷಕರೂ ಸಹ ಕಾರಣರಾಗಿರುತ್ತಾರೆ. ಅತಿಯಾದ ಕಾಳಜಿ ಅತಿಯಾದ ಬೇಜವಾಬ್ದಾರಿ ಮಕ್ಕಳನ್ನು ಕೈತಪ್ಪಿಹೋಗುವಂತೆ ಮಾಡುತ್ತವೆ. ಅತಿಯಾದ ಬಿಗಿ ಹಿಡಿತ ಅಥವಾ ಅತಿಯಾದ ಸಡಿಲತೆ ನಮ್ಮ ಕೈಯಿಂದ ಎಲ್ಲವನ್ನೂ ಜಾರಿಹೋಗುವಂತೆ ಮಾಡುತ್ತವೆ.

ಇನ್ನು ಪೋಷಕರು ಅಂದ ಮೇಲೆ ತಮ್ಮ ಮಕ್ಕಳು ತಪ್ಪು ಮಾಡಿದಾಗ ಬೈಯುವುದು ಸಾಲದಕ್ಕೆ ಒಂದು ಹೆಜ್ಜೆ ಮುಂದೆ ಹೋಗಿ ಎರಡು ಏಟು ಹೊಡೆಯುತ್ತಾರೆ. ನಮ್ಮನ್ನು ಹೊತ್ತು ಹೆತ್ತ ಪೋಷಕರಿಗೆ ಅಷ್ಟು ಅಧಿಕಾರ ಇಲ್ಲವಾದರೆ ಹೇಗೆ ಅಲ್ವಾ? ಆದ್ರೆ, ಪಾಲಕರು ಬೈದ್ರು, ಹೊಡೆದ್ರು ಅಂತ ಮಕ್ಕಳು ಈ ರೀತಿ ದುಡುಕಿನ ನಿರ್ಧಾರ ಕೈಗೊಳ್ಳುವುದು ಬೇಡ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!