';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಳ್ತಂಗಡಿ: ಮನೆಯೊಳಗಿನ ಟೇಬಲ್ ಫ್ಯಾನ್ ಪಕ್ಕದಲ್ಲಿ ಕಾಳಿಂಗ ಸರ್ಪವೊಂದು ಪತ್ತೆಯಾಗಿದ್ದು, ಉರಗ ತಜ್ಞರೊಬ್ಬರು ಅದನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಹತ್ಯಡ್ಕ ಎಂಬಲ್ಲಿ ನಡೆದಿದೆ.
ಇಲ್ಲಿನ ಹತ್ಯಡ್ಕ ನಿವಾಸಿಯಾಗಿರುವ ಉಮೇಶ್ ಎಂಬವರ ಮನೆಯ ರೂಂ ನ ಟೇಬಲ್ ಫ್ಯಾನ್ ಪಕ್ಕದಲ್ಲಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವೊಂದು ಮಲಗಿರುವುದನ್ನು ಕಂಡಿದೆ.
ಮನೆಯ ಸದಸ್ಯರು ಕ್ಷಣ ಕಾಲ ಗಾಬರಿಗೊಂಡು, ಸ್ಥಳೀಯ ಉರಗ ತಜ್ಞರಾದ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಉಮೇಶ್ ಮನೆಗೆ ಆಗಮಿಸಿದ ಸ್ನೇಕ್ ಅಶೋಕ್ ಲಾಯಿಲ ಅವರು ಕಾಳಿಂಗವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.