ಪುತ್ತೂರು: ಮುಂಡೂರು ನಿವಾಸಿ ಜಯಶ್ರೀ ಹತ್ಯೆಗೆ ಕಾರಣ ಬಯಲಾಗಿದ್ದು ಪ್ರೀತಿಯನ್ನು ನಿರಾಕರಿಸಿದ್ದೇ ಬರ್ಬರ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ.

ಮಂಗಳವಾರ ಹಾಡುಹಗಲೇ ಮನೆಗೆ ನುಗ್ಗಿ ಜಯಶ್ರೀ ಎಂಬ ಯುವತಿಯನ್ನು ಬರ್ಬರವಾಗಿ ಇರಿದು ಕೊಲೆ ಮಾಡಲಾಗಿತ್ತು.
ಕೊಲೆಯ ಬೆನ್ನಲ್ಲೇ ಆರೋಪಿಯನ್ನು ಬೆನ್ನಟ್ಟಿದ ಪೊಲೀಸರು ಬೆಳ್ಳಾರೆ ಸಮೀಪದ ಕನಕಮಜಲು ನಿವಾಸಿ ಉಮೇಶ ಎಂಬಾತನನ್ನು ಸಂಪ್ಯ ಪೊಲೀಸರು ಕೊಲೆ ನಡೆದು ೧೨ ಗಂಟೆಯ ಒಳಗಾಗಿ ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.
ಆರೋಪಿ ಉಮೇಶ ಮತ್ತು ಜಯಶ್ರೀ ಪ್ರೀತಿಯಲ್ಲಿದ್ದು ಆತ ಆಗಾಗ ಮನೆಗೆ ಬಂದು ಹೋಗುತ್ತಿದ್ದು ಕೆಲ ದಿನಗಳಿಂದ ಉಮೇಶನ ಗುಣ ನಡತೆ ಸರಿಯಿಲ್ಲ ಎಂದು ಹೇಳಿ ಜಯಶ್ರೀ ಅವನ ಬಳಿ ಮಾತನಾಡುವುದನ್ನು ಕೂಡ ನಿಲ್ಲಿಸಿದ್ದು ಮತ್ತು ಆತನ ಪ್ರೀತಿಯನ್ನು ಕೂಡ ನಿರಾಕರಿಸಿದ್ದಳು. ಇದರಿಂದ ಕೆರಳಿದ ಉಮೇಶ ಜಯಶ್ರೀಯ ಮನೆಗೆ ನುಗ್ಗಿ ಹಾಡು ಹಗಲೇ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಯುವಕನೋರ್ವನ ಭಗ್ನ ಪ್ರೇಮಕ್ಕೆ ಮನೆಯ ಆಧಾರ ಸ್ತಂಭವಾಗಿದ್ದ ಜಯಶ್ರೀಯನ್ನು ಆ ಕುಟುಂಬ ಕಳೆದುಕೊಂಡಿದ್ದು ಕುಟುಂಬಸ್ತರ ರೋಧನೆ ನೋಡಲಾಗುತ್ತಿಲ್ಲ…