ಮುಂಬೈ: ಕಳೆದ ಎರಡು ವರ್ಷಗಳಲ್ಲಿ ದೇಶಾದ್ಯಂತ ಒಂದು ಶತಕೋಟಿ ಭಾರತೀಯರಿಗೆ ನೀಡಲಾದ ಕೋವಿಡ್ 19 ಲಸಿಕೆಗಳಿಂದ “ಹಲವು ಅಡ್ಡ ಪರಿಣಾಮ”ಗಳು ಬೀರುತ್ತಿರುವುದು ಸತ್ಯ ಎಂಬುದಾಗಿ ಸರ್ಕಾರದ ಎರಡು ಉನ್ನತ ಸಂಸ್ಥೆಗಳು ಒಪ್ಪಿಕೊಂಡಿದೆ.
ಪುಣೆಯ ಉದ್ಯಮಿ ಪ್ರಫುಲ್ ಸರ್ದಾ ಅವರು ಸಲ್ಲಿಸಿದ ಆರ್ ಟಿಐಗೆ ಪ್ರತ್ಯುತ್ತರ ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ICMR ಮತ್ತು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಶೇಷನ್ CDSCO ಕೋವಿಡ್ 19 ಲಸಿಕೆಯ ಅಡ್ಡ ಪರಿಣಾಮ ಕುರಿತು ಕೇಳಿದ ಪ್ರಶ್ನೆಗೆ ಆರ್ ಟಿಐನಲ್ಲಿ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿರುವುದಾಗಿ ವರದಿ ವಿವರಿಸಿದೆ.
ಕೇಂದ್ರ ಸರ್ಕಾರ ಭಾರತದಲ್ಲಿ ಆಸ್ಟ್ರಾಜೆನಿಕಾ, ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ, ಪುಣೆಯ ಕೋವಿಶೀಲ್ಡ್, ಕೋವ್ಯಾಕ್ಸ್, ಸರ್ಕಾರಿ ಸ್ವಾಮಿತ್ವದ ಭಾರತ್ ಬಯೋ ಟೆಕ್ ಲಿಮಿಟೆಡ್, ಕೋವ್ಯಾಕ್ಸಿನ್, ಡಾ.ರೆಡ್ಡೀಸ್ ಲ್ಯಾಬೋರೇಟರಿ ಆಮದು ಮಾಡಿಕೊಂಡ ಸ್ಪುಟ್ನಿಕ್ ವಿ, ಬಯೋಲಾಜಿಕಲ್ ಇ.ಲಿಮಿಟೆಡ್ ನ ಕಾರ್ಬೆವ್ಯಾಕ್ಸ್ ನಂತರ ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್, ಅಹಮದಾಬಾದ್ ನ ಝೈಕೋ-ಡಿ (12ರಿಂದ 17 ವರ್ಷದೊಳಗಿನ ಮಕ್ಕಳಿಗೆ) ಲಸಿಕೆ ನೀಡಲು ಅನುಮತಿ ನೀಡಿರುವುದಾಗಿ ಐಎಎನ್ ಎಸ್ ವರದಿ ಮಾಡಿದೆ.
ಕೋವಿಶೀಲ್ಡ್ ನಿಂದ ಸಂಭವಿಸುವ ಅಡ್ಡ ಪರಿಣಾಮ :
ಐಎಎನ್ ಎಸ್ ವರದಿ ಪ್ರಕಾರ, ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ನಂತರ ಇಂಜೆಕ್ಷನ್ ಚುಚ್ಚಿಸಿಕೊಂಡ ಭಾಗದಲ್ಲಿ ವಿಪರೀತ ನೋವು, ವಿವಿಧ ಕೆಂಪು ಕಲೆಗಳು, ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ರಕ್ತ ಹೆಪ್ಪುಗಟ್ಟುವುದು, ನಿರಂತರ ವಾಂತಿ, ನಿರಂತರ ಕಿಬ್ಬೊಟ್ಟೆ ನೋವು ಅಥವಾ ವಾಂತಿ ಅಥವಾ ವಾಂತಿ ಇಲ್ಲದೇ ವಿಪರೀತ ತಲೆನೋವು, ಉಸಿರಾಟ ತೊಂದರೆ, ಎದೆ ನೋವು, ಕೈಕಾಲುಗಳಲ್ಲಿ ನೋವು, ನರಗಳ ಊತ, ಕಣ್ಣುಗಳಲ್ಲಿ ನೋವು, ದೃಷ್ಟಿ ಮಸುಕಾಗುವುದು, ನಿಶ್ಯಕ್ತಿ, ಕಾಲುಗಳಿಗೆ ಪಾರ್ಶ್ವವಾಯು ಸಾಧ್ಯತೆ ಕಂಡುಬರುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿದೆ.
ಕೋವ್ಯಾಕ್ಸ್ ಲಸಿಕೆಯ ಅಡ್ಡಪರಿಣಾಮ:
ಕೋವ್ಯಾಕ್ಸ್ ಲಸಿಕೆ ಕೂಡಾ ಕೋವಿಶೀಲ್ಡ್ ನಂತೆಯೇ ಅಡ್ಡ ಪರಿಣಾಮ ಬೀರುತ್ತದೆ. ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ವಿಪರೀತ ನೋವು, ಆಯಾಸ, ತಲೆನೋವು, ಜ್ವರ, ಸ್ನಾಯುಗಳ ನೋವು, ಕೀಲು ನೋವು, ವಾಂತಿ, ಶೀತ, ನಿಶ್ಯಕ್ತಿ, ತುರಿಕೆ, ಬೆನ್ನುನೋವು, ತಲೆಸುತ್ತು ಅಥವಾ ಅರೆ ಮಂಪರು ಪರಿಣಾಮ ಕಂಡುಬರಲಿದೆ ಎಂದು ಐಎಎನ್ ಎಸ್ ವರದಿ ಮಾಡಿದೆ.
Sputnik V, CorBEvax side affacts :
ಚಳಿ, ಜ್ವರ, ಆರ್ತ್ರಾಲ್ಜಿಯಾ, ಮೈಯಾಲ್ಜಿಯಾ, ಅಸ್ತೇನಿಯಾ, ತಲೆನೋವು, ಸಾಮಾನ್ಯ ಅಸ್ವಸ್ಥತೆ, ಇಂಜೆಕ್ಷನ್ ಸೈಟ್ ನೋವು/ಊತ/ಹೈಪರೇಮಿಯಾ, ಅಥವಾ ವಾಕರಿಕೆ, ಡಿಸ್ಪೆಪ್ಸಿಯಾ, ಹಸಿವಿನ ಕೊರತೆ ಸ್ಪುಟ್ನಿಕ್ ಲಸಿಕೆಯಿಂದ ಪ್ರಕಟವಾಗುತ್ತದೆ.
CorBEvax ಜ್ವರ/ಪೈರೆಕ್ಸಿಯಾ, ತಲೆನೋವು, ಆಯಾಸ, ದೇಹದ ನೋವು, ಮೈಯಾಲ್ಜಿಯಾ, ವಾಕರಿಕೆ, ಅಥವಾ ಆರ್ಥ್ರಾಲ್ಜಿಯಾ, ಉರ್ಟೇರಿಯಾ, ಶೀತ, ಆಲಸ್ಯ, ಜೊತೆಗೆ ಇಂಜೆಕ್ಷನ್ ಸೈಟ್ ನೋವು / ಎರಿಥೆಮಾ, ಊತ, ದದ್ದು, ಪ್ರುರಿಟಿಸ್ ಅಥವಾ ಕಿರಿಕಿರಿಯಂತಹ ಪರಿಣಾಮಗಳನ್ನು ತೋರಿಸುತ್ತದೆ.
“ICMR-CDSCO ದ ಉತ್ತರಗಳು ಸ್ಪಷ್ಟವಾಗಿ ಆಘಾತಕಾರಿಯಾಗಿದೆ.
ಲಸಿಕೆ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ ಎಂದು ಸರ್ಕಾರ ಘೋಷಿಸಿದ್ದರೂ, ಬಸ್ಸುಗಳು, ರೈಲುಗಳು, ವಿಮಾನಗಳು, ಅಂತರರಾಜ್ಯ ಸಂಚಾರಗಳಲ್ಲಿ ಪ್ರಯಾಣಿಸುವುದನ್ನು ನಿರ್ಬಂಧಿಸುವ ಮೂಲಕ ಪರೋಕ್ಷವಾಗಿ ಲಸಿಕೆ ಹಾಕಿಸಲು ಬಲವಂತ ಮಾಡಲಾಗಿದೆ. ಹೋಟೆಲ್‌ಗಳು, ರೆಸ್ಟೊರೆಂಟ್‌ಗಳು, ಮಲ್ಟಿಪ್ಲೆಕ್ಸ್‌ಗಳು, ಮಾಲ್‌ಗಳು, ಇತ್ಯಾದಿಗಳಿಗೂ ಇದು ಹೊರತಾಗಿಲ್ಲ. ಲಸಿಕೆಯ ಅಡ್ಡ ಪರಿಣಾಮಗಳು ತಿಳಿಯದ ಜನ ತಂಡೋಪ ತಂಡವಾಗಿ ಧಾವಿಸಿ ಲಸಿಕೆ ಹಾಕಿಸಿದ್ದಾರೆ ಎಂದು ಸರ್ದಾ ತಿಳಿಸಿದ್ದಾರೆ.