ಪುತ್ತೂರು: ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಇದೀಗಾಗಲೇ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗುತ್ತಿದ್ದು ವಿವಿಧ ಕ್ಷೇತ್ರಗಳಲ್ಲಿ ವಿವಿಧ ಅಭ್ಯರ್ಥಿಗಳ ಹೆಸರು ಕೇಳಿ ಬರುತ್ತಿದೆ.

ರಾಜ್ಯದಲ್ಲೇ ಕುತೂಹಲ ಮೂಡಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಗಳನ್ನೇ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಕಣಕ್ಕಿಳಿಸಲು ತಯಾರಿ ನಡೆಸಿದ್ದು.
ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಲಗ್ಗೆ ಇಟ್ಟ ಅಶೋಕ್ ಕುಮಾರ್ ಕೋಡಿಂಬಾಡಿ ರವರಿಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು.ಇನ್ನು ಆರ್.ಎಸ್.ಎಸ್ ತಂಡದಲ್ಲಿ ಪಳಗಿದ ಅಶೋಕ್ ಕುಮಾರ್ ರವರಿಗೆ ತನ್ನದೇ ಆದ ಅಪಾರ ಅಭಿಮಾನಿ ಬಳಗವಿದ್ದು ಪುತ್ತೂರಿನಲ್ಲಿ ಐತಿಹಾಸಿಕ ಗೆಲುವು ತಮ್ಮದಾಗಬಹುದು ಎಂಬ ಕನಸನ್ನು ಕಾಂಗ್ರೆಸ್ ನಾಯಕರು ಇಟ್ಟುಕೊಂಡಿದ್ದಾರೆ.


ಬಿಜೆಪಿ ಅಭ್ಯರ್ಥಿಯಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಅಶೋಕ್ ಕುಮಾರ್ ರವರಿಗೆ ತೀವೃ ಪೈಪೋಟಿ ನೀಡುವ ನಿಟ್ಟಿನಲ್ಲಿ ಬಿಜೆಪಿ ಮಹತ್ವದ ಹೆಜ್ಜೆ ಹಾಕಿದ್ದು ಅಶೋಕ್ ಕುಮಾರ್ ರವರಿಗೆ ಪಾಠ ಕಲ್ಪಿಸಲು ಪ್ರಬಲ ಅಭ್ಯರ್ಥಿಯನ್ನೇ ಬಿಜೆಪಿ ಪುತ್ತೂರಿನಲ್ಲಿ ಕಣಕ್ಕಿಳಿಸುತ್ತಿದೆ.
ಹೆಚ್ಚಿನ ಮಾಹಿತಿ ಪ್ರಕಾರ ಶೋಭಾ ಕರಂದ್ಲಾಜೆ ರವರನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ದೃಢವಾಗಿದೆ.ಆದರೆ ಇವೆಲ್ಲದರ ಮದ್ಯೆ ಈ ಬಾರಿ ಪುತ್ತೂರು ಕ್ಷೇತ್ರದ ಜನತೆ ಯಾರಿಗೆ ಮಣೆ ಹಾಕುತ್ತಾರೆ ಎಂಬುವುದು ಕಾದು ನೋಡಬೇಕಿದೆ.

ಶೋಭಾ ಕರಂದ್ಲಾಜೆ ಪುತ್ತೂರಿಲ್ಲಿ ಚುನಾವಣೆಗೆ ನಿಂತರೆ ಇಲ್ಲಿ ಕಾಂಗ್ರೇಸ್ ಗೆ ಕಬ್ಬಿಣದ ಕಡಲೆಯಾಗಲಿದೆ.
ಅಶೋಕ್ ಕುಮಾರ್ ರವರು ಬಿಜೆಪಿಯಲ್ಲಿ ಪಳಗಿದ ಓರ್ವ ನಾಯಕ, ಹಲವಾರು ಬಡವ ಬಲ್ಲಿದರಿಗೆ ತನ್ನಿಂದಾದ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ ಇತ್ತೀಚೆಗಷ್ಟೇ ತನ್ನ ಚಾರಿಟೇಬಲ್ ಟ್ರಸ್ಟ್ ನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಜನತೆಗೆ ಉಡುಪು, ರೇಷನ್, ಇನ್ನಿತರ ಸಾಮಾಜಿಕ ಮುಖ ಸೇವೆಗಳನ್ನು ನೀಡಿ ಮನ ಮಾತಾಗಿದ್ದರು.

ಬಿಜೆಪಿಯ ಧರ್ಮ ದ್ವೇಷಗಳನ್ನು ಅರಿತು ಆ ಪಾರ್ಟಿಗೆ ಗುಡ್ ಬೈ ಹೇಳಿ ಇತ್ತೀಚೆಗೆ ಮಂಗಳೂರುನಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ರವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಬಿಜೆಪಿಯ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಚುಕ್ಕಾನಿ ಹಿಡಿಯಲಿದ್ದು ಮುಂದಿನ ಮುಖ್ಯಮಂತ್ರಿಯಾಗಿ ಶೋಭಾ ಕರಂದ್ಲಾಜೆ ಅವರನ್ನೇ ನೇಮಕ ಮಾಡಲು ಹೈಕಮಾಂಡಿಗೆ ಈಗಾಗಲೇ ಬಲಿಷ್ಟ ಬಿಜೆಪಿ ನಾಯಕರೊಬ್ಬರು ಸೂಚಿಸಿದ್ದಾರೆಂದು ಬಲ್ಲ ಮೂಲಗಳಿಂದ ಮಾಹಿತಿ ಸೋರಿಕೆಯಾಗಿದೆ.
ಆದ್ದರಿಂದ ಬಿಜೆಪಿಯಿಂದ ಪುತ್ತೂರಿನಲ್ಲಿ ಈ ಭಾರಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಲಾಗುವ ಬಗ್ಗೆ ಈಗಾಗಲೇ ಆಲೋಚನೆ ನಡೆಸಿರುವುದರ ಬಗ್ಗೆ ವರದಿಯಾಗಿದೆ.
ಈ ಎರಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಬಿಜೆಪಿ ಮತ್ತು ಕಾಂಗ್ರೆಸ್ ಬಲಿಷ್ಠ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದಂತಾಗುತ್ತದೆ.
ಪುತ್ತೂರಿನ ರಾಜಕೀಯ ಕ್ಷೇತ್ರದಲ್ಲಿ ಈ ನಡೆ ತೀವ್ರ ಕುತೂಹಲ ಕೆರಳಿಸಿದೆ ಎಂಬುವುದು ಮಾತ್ರ ಅಕ್ಷರಶಃ ಸತ್ಯ.


