ಕೇರಳ: ಕಳೆದ ಎಂಟು ತಿಂಗಳ ಹಿಂದೆ ಕೇರಳದಿಂದ ಪವಿತ್ರ ಹಜ್ಜ್ ಯಾತ್ರೆಗೆ ಕಾಲ್ನಡಿಗೆ ಮೂಲಕ ಹೊರಟಿರುವ ಕೇರಳ ಮಲಪ್ಪುರಂ ನಿವಾಸಿ ಶಿಹಾಬ್ ಚೊಟ್ಟೋರು ರವರ ಯಾತ್ರೆ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಪಾಕಿಸ್ತಾನದ ವೀಸಾದ ಅಡಚನೆಯಿಂದ ಪಂಜಾಬ್ ಗಡಿಯಲ್ಲಿ ಬಾಕಿಯಾಗಿದ್ದರು.
ಇದೀಗ ಸತತ ಪ್ರಯತ್ನಗಳ ಬಳಿಕ ಪಾಕಿಸ್ತಾನ ಸರ್ಕಾರ ಅನುಮತಿ ನೀಡಿದ್ದು ಸೋಮವಾರದಿಂದಲೇ ಶಿಹಾಬ್ ರವರು ಪಾಕಿಸ್ತಾನ, ಇರಾನ್,ಇರಾಕ್,ಕುವೈತ್,ಸೌದಿ ಅರೇಬಿಯಾ ಮೂಲಕವಾಗಿ ಕಾಲ್ನಡಿಗೆಯೊಂದಿಗೆ ಮತ್ತೆ ಹೆಜ್ಜೆ ಮುಂದುವರಿಸಲಿದ್ದಾರೆ.
ಡಿ.ಟಿ.ವಿ ಜತೆ ನೇರವಾಗಿ ಮಾತನಾಡಿದ ಶಿಹಾಬ್ ರವರು ನನ್ನ ಅಭಿಲಾಷೆಗೆ ಪಾಕಿಸ್ತಾನ ಸರ್ಕಾರ ಸಹಕಾರ ನೀಡಿದೆ ಸಹಕರಿಸಿದ ಭಾರತ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.ಮತ್ತೆ ತನ್ನ ಯಾತ್ರೆಯನ್ನು ಪಾಕಿಸ್ತಾನ,ಇರಾನ್,ಇರಾಕ್ ದೇಶವಾಗಿ ಕಾಲ್ನಡಿಗೆ ಮೂಲಕ ಮುಂದುವರಿಸುತ್ತಿದ್ದೇನೆ ಎಂದು ಅವರು ಹೇಳಿದರು.
ವೀಸಾ ಸಿಗದೇ ಸತತ ಮೂರ್ನಾಲ್ಕು ತಿಂಗಳಿನಿಂದ ಶಿಹಾಬ್ ರವರು ಪಂಜಾಬ್ ನ ವಾಗಾ ಗಡಿಯಲ್ಲಿ ಉಳಿದುಕೊಂಡಿದ್ದರು.ಇಷ್ಟಾಗುವಾಗಲೇ ಹಲವು ಮಾಧ್ಯಮಗಳು ಯೂಟ್ಯೂಬರ್‌ಗಳು ಹಲವು ರೀತಿಯ ಸುಳ್ಳು ಪ್ರಚಾರದೊಂದಿಗೆ ಶಿಹಾಬ್‌ರವರನ್ನು ನಿಂದನೆಗೆ ಒಳಪಡಿಸಿದ್ದರು.ಎಷ್ಟೋ ಮಂದಿ ಆತ ಜನ್ಮದಲ್ಲಿ ಪಾಕಿಸ್ತಾನ ದೇಶದಲ್ಲಿ ಕಾಲ್ನಡಿಗೆಯಲ್ಲಿ ಸಾಗಲು ಸಾಧ್ಯವೇ ಇಲ್ಲ ಎಂದಿದ್ದ ಒಂದಷ್ಟು ಟೇಕೆಗಾರರಿಗೆ ಉತ್ತರವೆಂಬಂತೆ ಇದೀಗ ಶಿಹಾಬ್‌ರವರು ಪಾಕಿಸ್ತಾನಕ್ಕೆ ಬರಿಗಾಲಲ್ಲೆ ನಡೆದುಕೊಂಡು ಬಾರ್ಡರ್ ದಾಟಲಿದ್ದಾರೆ.
ಒಂದಷ್ಟು ಜನ ಸಾಮಾಜಿಕ ಜಾಲ ತಾಣಗಳಲ್ಲಿ ಬೇಕಾ ಬಿಟ್ಟಿ ಬರೆದು ತಾನೇನೋ ಸಾದಿಸಿರುವಂತೆ ಬೀಗಿಕೊಂಡಿದ್ದರು ಎಲ್ಲರ ಬಾಯಿಮುಚ್ಚಿಸುವಂತೆ ಶಿಹಾಬ್ ಚೊಟ್ಟುರುವರು ಮತ್ತೆ ತಾನು ಹೇಳಿದಂತೆಪಾಕಿಸ್ತಾನದ ಮೂಲಕವೇ ಕಾಲ್ನಡಿಗೆಯಲ್ಲಿ ತನ್ನ ಯಾತ್ರೆ ಮುಂದವರಿಸಲಿದ್ದಾರೆ.ಏನೇ ಆಗಲಿ ಆದಷ್ಟು ಬೇಗ ಮಕ್ಕಾ ಮದೀನ ತಲುಪಿ ಅವರ ಕಾರ್ಯಗಳನ್ನು ಪೊರೈಸಲಿ ಎನ್ನುವುದೇ ಅವರ ಅಭಿಮಾನಿಗಳ ಆಶಯ.. ವೀಡಿಯೋ ನೋಡಿ 👇👇👇
https://youtu.be/DG4nrTxMf1I
https://youtu.be/DG4nrTxMf1I