ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಶಾಸಕ ಸ್ಥಾನಕ್ಕಾಗಿ ಹಲವು ಕಾಂಗ್ರಸ್ ನಾಯಕರು ಅರ್ಜಿ ಸಲ್ಲಿಸಿದ್ದು ಯಾರಗಬಹುದು ಈ ಭಾರಿಯ ಶಾಸಕ ಯಾರಾಗಿರಬಹುದು ವಿಧಾನ ಸಭೆ ಏರಲಿರುವ ಜನನಾಯಕ ಯಾರಿಗೆ ಆಗಿರಬಹುದು ಈ ಬಾರಿ ಹೈಕಮಾಂಡ್ ಟಿಕೆಟ್ ನೀಡಲಿರುವುದು ಎನ್ನುವಂತಹ ಪ್ರಶ್ನೇಯೂ ಎಲ್ಲರನ್ನು ಕುತೂಹಲ ಘಟ್ಟಕ್ಕೆ ತಲುಪಿಸಿದೆ.

ಈಗಾಗಲೇ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ್ ಶೆಟ್ಟಿ, ಸಮಾಜ ಕಲ್ಯಾಣ ನಿಗಮದ ಮಾಜಿ ಅಧ್ಯಕ್ಷೆ ದಿವ್ಯ ಪ್ರಭಾ ಚಿಲ್ತಡ್ಕ, ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಅಮರ್ ಆಳ್ವಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ ಎಸ್ ಮಹಮ್ಮದ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಬ್ಲಾಕ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ, ಡಾ ರಾಜಾರಾಮ್,ಪೂಡಾ ಮಾಜಿ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ಕೆಪಿಸಿಸಿ ಸದಸ್ಯ ಪ್ರವೀಣ್ ಕೆಡೆಂಜಿ ಮತ್ತು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ಮತ್ತು ಇತ್ತೀಚೆಗೆ ಕಾಂಗ್ರೆಸ್ ಸೇರಿದ ಅಶೋಕ್ ರೈ ಹೀಗೆ ಒಟ್ಡು 14 ಜನ ಆಕಾಂಕ್ಷಿಗಳು ಇದ್ದಾರೆ.
ಇದರಲ್ಲಿ ಕಾವು ಹೇಮನಾಥ್ ಶೆಟ್ಟಿ,ಎಂ ಬಿ ವಿಶ್ವನಾಥ ರೈ, ಡಾ ರಾಜಾರಾಮ್, ಕೌಶಲ್ ಪ್ರಸಾದ್, ಎಂ ಎಸ್ ಮಹಮ್ಮದ್, ಅಶೋಕ್ ರೈ ಮಾತ್ರ ಪುತ್ತೂರು ಕ್ಷೇತ್ರದೊಳಗಿನ ಮತದಾರರು ಎಂಬುದು ಉಲ್ಲೇಖನೀಯ.
ಕಾಂಗ್ರೆಸ್ ಸೇರಿದ ಕೂಡಲೇ ಟಿಕೆಟ್ ಪಡೆದು ಶಾಸಕರಾಗಿರುವ ಶಕುಂತಲಾ ಶೆಟ್ಟಿಯವರಿಗೆ ಎರಡು ಬಾರಿ ಅವಕಾಶ ನೀಡಲಾಗಿದ್ದು ಕಳೆದ ಬಾರಿ 5000 ಕ್ಕಿಂತ ಹೆಚ್ಚಿನ ಮತದ ಅಂತರದಲ್ಲಿ ಸೋತಿರುವವರಿಗೆ ಈ ಬಾರಿ ಅವಕಾಶ ಇಲ್ಲ ಎನ್ನುವ ಮಾತು ಒಂದಾದರೆ ಹಿಂದಿನ ವರ್ಚಸ್ಸು ಅವರು ಉಳಿಸಿಕೊಂಡಿಲ್ಲ, ಪಕ್ಷ ಬೆಳೆಸುವಲ್ಲಿ ವಿಫಲರಾಗಿದ್ದಾರೆ ಎನ್ನುವುದು ಒಂದಷ್ಟು ಕಾರ್ಯಕರ್ತರ ಮಾತಾದರೆ ಜೊತೆಗೆ ವಯೋ ಸಹಜ ಸಮಸ್ಯೆ, ಎರಡು ಬಾರಿ ನೀಡಲಾಗಿದ್ದು ಹೊಸಬರಿಗೆ ಅವಕಾಶ ನೀಡಬೇಕು ಎನ್ನುವ ಕಾರಣದಿಂದ ಅವರಿಗೆ ಅವಕಾಶ ಕಡಿಮೆಯೆನ್ನಲಾಗುತ್ತಿದೆ.
ಎಂ.ಬಿ ವಿಶ್ವನಾಥ ರೈ ಪಕ್ಷಕ್ಕೆ ಹೊಸಬರು ಆದರೂ ಕೆಪಿಸಿಸಿ ಸದಸ್ಯ, ಪ್ರಚಾರಸಮಿತಿ ಅಧ್ಯಕ್ಷ, ಬ್ಲಾಕ್ ಅಧ್ಯಕ್ಷ ಸ್ಥಾನ ಹೀಗೆ ಈಗಾಗಲೇ ಅವರ ನಿರೀಕ್ಷೆಗಿಂತಲೂ ಹೆಚ್ಚಿನ ಅವಕಾಶ ನೀಡಲಾಗಿದೆ.ಡಾ ರಾಜಾರಾಮ್, ಕೌಶಲ್ ಪಕ್ಷದಲ್ಲಿ ಹೇಳಿಕೊಳ್ಳುವ ಸಾಧನೆ ಇಲ್ಲದಿದ್ದರೂ ಇವರಿಗೆ ಕೂಡಾ ಅವಕಾಶ ನೀಡಲಾಗಿದೆ ಇವರಿಗೂ ಅವಕಾಶ ಕಡಿಮೆಯೆಂದು ಅಂದಾಜಿಸಲಾಗಿದೆ.
ಅಲ್ಪಸಂಖ್ಯಾತರಿಗೆ ಜಿಲ್ಲೆಯ ಉಳ್ಳಾಲ, ಮಂಗಳೂರು ದಕ್ಷಿಣ, ಸುರತ್ಕಲ್ ಹೀಗೆ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ನೀಡಲಾಗುತ್ತದೆ ಎನ್ನುವ ಕಾರಣದಿಂದ ಎಂ.ಎಸ್ ಮಹಮ್ಮದ್ ಅವರಿಗೂ ಅವಕಾಶ ಕಡಿಮೆಯಾಗಿದ್ದು
ಬಂಟ್ವಾಳ ಕ್ಷೇತ್ರದ ಬೊಂಡಾಲ ಜಗನ್ನಾಥ ಶೆಟ್ಟಿಯವರಿಗೆ ಅವಕಾಶ ನೀಡಿರುವ ಸಂದರ್ಭದಲ್ಲಿ ಕಾಂಗ್ರೆಸ್ ವಾತಾವರಣ ಇದ್ದರೂ ಅವರು ಹೊರಗಿನವರು ಎನ್ನುವ ಮತ್ತು ಶಕುಂತಲಾ ಶೆಟ್ಟಿ ಪಕ್ಷೇತರವಾಗಿ ಸ್ಪರ್ಧಿಸಿ ಕಾಂಗ್ರೆಸ್ ಮತಕ್ಕೆ ಕನ್ನಹಾಕಿರುವುದರಿಂದ ಅವರಿಗೆ ಸೋಲಾಗಿದೆ ಎನ್ನುವ ಕಾರಣದಿಂದ ಕ್ಷೇತ್ರದ ಹೊರಗಿನವರಿಗೆ ಅವಕಾಶ ಸಿಗುವ ಸಾಧ್ಯತೆ ಇಲ್ಲ ಎಂಬುವುದು ಸ್ಪಷ್ಟ ಮಾಹಿತಿ.
ಇನ್ನು ಅಶೋಕ್ ರೈ ಬಿಜೆಪಿ ಪಕ್ಷದಲ್ಲಿ ಹೇಳಿಕೊಳ್ಳುವ ಯಾವುದೇ ಸಾಧನೆಯಾಗಲಿ ಪಕ್ಷದ ಉನ್ನತ ಹುದ್ದೆಗಳಾಗಲಿ ಪಡೆದವರಲ್ಲ, ಅವರು ಕಾಂಗ್ರೆಸ್ ಸೇರುವಾಗ ಸ್ಥಳೀಯ ಯಾವುದೇ ನಾಯಕರ ಸಂಪರ್ಕ ಮಾಡದೇ ನೇರ ಹೈಕಮಾಂಡ್ ಮೂಲಕ ಸೇರ್ಪಡೆಯಾಗಿರುವುದು ಸ್ಥಳೀಯ ನಾಯಕರಿಗೆ ಅಸಮಾಧಾನವಿದೆಯೆಂದು ಬಲ್ಲ ಮೂಲದಿಂದ ತಿಳಿದು ಬಂದಿದೆ. ಅಲ್ಲದೆ ಪಕ್ಷಕ್ಕೆ ಸೇರುವ ಮೊದಲೇ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡಿರುವುದು ಉಳಿದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಲು ಕಾರಣವಾಗಿದೆಯೆಂದು ಆಡಿಕೊಳ್ಳುತ್ತಿದ್ದಾರೆ.
ಜೊತೆಗೆ ಕಾಂಗ್ರೆಸ್ ನಾಯಕ ಜಲೀಲ್ ಕರೋಪಾಡಿ ಯವರ ಕೊಲೆ ಆರೋಪಿಗೆ ಜಾಮೀನು ಖರ್ಚು ನೀಡಿರುವುದು ಅವರನ್ನು ತನ್ನೊಂದಿಗೆ ಇಟ್ಟುಕೊಂಡಿರುವುದರ ಜೊತೆಗೆ ಮೊನ್ನೆ ತಾನೆ ತನ್ನ ಟ್ರಸ್ಟ್ ಮೂಲಕ ಸೀರೆ ಹಂಚುವ ಸಂದರ್ಭದಲ್ಲಿ ಅವರು ಜೊತೆಗೆ ಕಾಣಿಸಿಕೊಂಡಿರುವುದು ಕೂಡ ಅಲ್ಪಸಂಖ್ಯಾತ ಕಾರ್ಯಕರ್ತರಿಗೆ ಅಸಮಾಧಾನ ತಂದಿದೆ.
ಅಲ್ಲದೆ ತಾನು ನಿರ್ಮಿಸಿದ ತನ್ನ ಫ್ಲಾಟ್‌ನಲ್ಲಿ ಮುಸಲ್ಮಾನರಿಗೆ ಫ್ಲಾಟ್ ನೀಡುವುದಿಲ್ಲ ಎಂಬ ಬರಹಗಳು ಒಂದಷ್ಟು ವರ್ಷಗಳ ಮುಂಚೆ ಹರಿದಾಡಿದ್ದು ಅದೇ ರೀತಿ ಯಾರಿಗೂ ತನ್ನ ಫ್ಲಾಟ್ನಲ್ಲಿ ಮನೆ ನೀಡದಿರುವ ಬಗ್ಗೆ ಈಗಾಗಲೇ ಮಾತುಗಳು ಚರ್ಚೆಯಲ್ಲಿದೆ. ಹೊಸತಾಗಿ ಬಂದವರಿಗೆ ಟಿಕೆಟ್ ನೀಡಬಾರದು ಎನ್ನುವ ಕೂಗು ಕಾರ್ಯಕರ್ತರದ್ದಾಗಿದ್ದು ಅದರ ಮಾಹಿತಿ ಕೆಪಿಸಿಸಿ ಈಗಾಗಲೇ ಸಂಗ್ರಹಿಸಿದೆ ಎನ್ನಲಾಗಿದೆ. ಇದರಿಂದಾಗಿ ಹೈಕಮಾಂಡ್ ಇವರಿಗೆ ಮಣೆ ಹಾಕಲಿಕ್ಕಿಲ್ಕ ಎನ್ನುವುದು ತಜ್ಞರ ಅಭಿಪ್ರಾಯ.


ಅನಿತಾ ಹೇಮನಾಥ್ ಶೆಟ್ಟಿ ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತಿನ ಎರಡು ಬಾರಿ ಸದಸ್ಯೆಯಾಗಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆಯಾಗಿ ಹಲವಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಸರಕಾರಿ ಶಾಲೆಗಳ ಅಭಿವೃದ್ದಿಗೆ ಒತ್ತು ಕೊಟ್ಟಿದ್ದಾರೆ. ಕುಡಿಯುವ ನೀರಿಗಾಗಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅನುದಾನ ಪಡೆದ ಸದಸ್ಯೆ ಎಂಬ ಹೆಸರಿಗೆ ಭಾಜನರಾಗಿದ್ದಾರೆ. ಅಜಾತ ಶತ್ರು ಆಗಿರುವ ಇವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಒಲವು ಜಾಸ್ತಿ ಇತ್ತು ಎನ್ನುವ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಆದರೆ ಅವರು ಕೆಪಿಸಿಸಿ ಗೆ ಅರ್ಜಿ ಸಲ್ಲಿಸಿಲ್ಲ ಎನ್ನುವ ಕಾರಣದಿಂದ ಏನು ತೀರ್ಮಾನ ತೆಗೆದುಕೊಳ್ತಾರೆ ಎಂದು ಕಾದುನೋಡಬೇಕಿದೆ. ಕಾಂಗ್ರೆಸಿನಲ್ಲಿ ಕಾರ್ಯಕರ್ತರ ಒಲವು ಇದ್ದು ಗೆಲ್ಲುವವರಿಗೆ ಟಿಕೆಟ್ ನೀಡಲಾಗುವುದು ಅರ್ಜಿಕೊಟ್ಟವರಿಗೆ ಮಾತ್ರ ಅಲ್ಲ ಎನ್ನುವ ಡಿಕೆಶಿ ಒಂದೊಮ್ಮೆ ಹೇಳಿದ್ದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು.



ನಾಲ್ಕು ಬಾರಿ ಟಿಕೆಟ್‌ಗಾಗಿ ಕಾದು ಕುಳಿತು ಕೊನೆಯ ಗಳಿಗೆಯಲ್ಲಿ ಅವಕಾಶ ವಂಚಿತರಾದ ಕಾವು ಹೇಮನಾಥ್ ಶೆಟ್ಟಿ ಯವರಿಗೆ ಈ ಬಾರಿ ಅವಕಾಶ ಜಾಸ್ತಿ ಎನ್ನುವ ಗುಪ್ತಚರ ಮಾಹಿತಿ ಲಭ್ಯವಾಗಿದೆ ಇವರು ಕಳೆದ 35 ವರ್ಷಗಳಿಂದ ಪಕ್ಷಕ್ಕಾಗಿ ನಿಷ್ಠಾವಂತ ಸೇವೆ, ಹಲವಾರು ಬಾರಿ ಹಲವು ರೀತಿ ಅವಕಾಶ ವಂಚಿತರಾಗಿರುವುದು ಮತ್ತು 2018 ರ ಚುನಾವಣಾ ಸಂದರ್ಭದಲ್ಲಿ ರಾಹುಲ್ ಗಾಂಧೀಜಿಯವರು ದಿಲ್ಲಿಗೆ ಕರೆಸಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಉಸ್ತುವಾರಿ ಕೆ ಎಸಿ ವೇಣುಗೋಪಾಲ್ ಮತ್ತು ಪಿ ಸಿ ವಿಷ್ಣುನಾಥನ್ ಅವರ ಎದುರಲಲ್ಲಿ ಚರ್ಚಿಸಿ ಈ ಬಾರಿ ಅವಕಾಶ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಮುಂದಿನ ಬಾರಿ ನಿಮಗೆ ಅವಕಾಶ ನೀಡುವ ಎನ್ನುವ ಭರವಸೆ ನೀಡಿದ್ದರು. ಅದು ಈ ಬಾರಿ ಈಡೇರಲಿದೆ ಎನ್ನುವ ಭರವಸೆ ಅವರದ್ದಾಗಿದ್ದು ಅಲ್ಲದೆ ಈಗಾಗಲೇ ಎಐಸಿಸಿ ನಡೆಸಿದ ಸರ್ವೆಯಲ್ಲಿಯೂ ಪ್ರಥಮ ಸ್ಥಾನದಲ್ಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಾರ್ಯಕರ್ತರ ನಾಡಿಮಿಡಿತ ಅರಿತಿರುವ ಯುವಕರನ್ನು ಬೆಳೆಸುವ ಮನಸ್ಸಿರುವ, ಯಾವುದೇ ಸಂಕಷ್ಟ ಕಾಲದಲ್ಲಿ ಕೈಗೆ ಸಿಗುವ ನಾಯಕ ಕಾವು ಹೇಮನಾಥ್ ಶೆಟ್ಟಿಯಾಗಿದ್ದು ಇವರಿಗೆ ಅವಕಾಶ ಸಿಕ್ಕಿದರೆ ಪುತ್ತೂರಿನಲ್ಲಿ ಕಾಂಗ್ರೆಸ್ ಗತ ವೈಭವ ಮೆರೆಯಲಿದೆ ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರ ಮನದಾಳದ ಮಾತುಗಳು.

