ಉಪ್ಪಿನಂಗಡಿ: ಕೆಲ ವಾರಗಳ ಹಿಂದೆ ಕುಪ್ಪೆಟ್ಟಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮದ್ರಸಾ ವಿದ್ಯಾರ್ಥಿಯೋರ್ವ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ ಗುರುವಾರ ತಡ ರಾತ್ರಿ ಸಂಭವಿಸಿದೆ.ಮೃತಪಟ್ಟ ವಿದ್ಯಾರ್ಥಿಯನ್ನು ಕುಪ್ಪೆಟ್ಟಿ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಎಂದು ಗುರುತಿಸಲಾಗಿದೆ.

ಮದ್ರಸಾಕ್ಕೆ ತೆರಳುವ ವೇಳೆ ಗೆಳೆಯನ ಜೊತೆ ಸ್ಕ್ಯೂಟರ್ ನಲ್ಲಿ ಬಂದಿದ್ದು ಅದೇ ವೇಳೆ ವಿರುದ್ಧ ದಿಕ್ಕಿನಲ್ಲಿ ಬಂದ ರೀಕ್ಷವೊಂದಕ್ಕೆ ಸ್ಕ್ಯೂಟರ್ ಢಿಕ್ಕಿ ಹೊಡೆದಿದ್ದು.
ಅಪಘಾತದ ರಭಸಕ್ಕೆ ವಿದ್ಯಾರ್ಥಿಗಳಿಬ್ಬರು ಗಂಭೀರ ಗಾಯಗೊಂಡಿದ್ದರು.ಇದೀಗ ಸಿದ್ದೀಕ್ ಎಂಬ ಸಣ್ಣ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿನ್ನೆ ತಡ ರಾತ್ರಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಸಣ್ಣ ಬಾಲಕನ ಮರಣಕ್ಕೆ ಉಪ್ಪಿನಂಗಡಿ ಊರೇ ಕಣ್ಣೀರು ಹರಿಸುತ್ತಿದ್ದು ಸಿದ್ದೀಕ್ ಕಲಿಕೆಯಲ್ಲಿ ಮತ್ತು ಊರಿನ ಯಾವುದೇ ಕಾರ್ಯಕ್ರಮಗಳಲ್ಲಿ ನಿಷ್ಠೆಯಿಂದ ಸಹಕಾರಿಯಾಗುತ್ತಿದ್ದ.ಸಣ್ಣ ವಯಸ್ಸಿನಲ್ಲೇ ಬೆಳೆಯ ಬೇಕಾದ ಚಿಗುರೊಂದು ಬಾಡಿ ಹೋಗಿದ್ದು ಹುಟ್ಟೂರು ಕುಪ್ಪೆಟ್ಟಿ ಎಳೆಯ ಉತ್ತಮ ಸ್ವಭಾವದ ಬಾಲಕನೋರ್ವನ ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿದೆ.