dtvkannada

'; } else { echo "Sorry! You are Blocked from seeing the Ads"; } ?>

ಕಾರವಾರ: ನಾಯಿ ಜೊತೆ ಆಟವಾಡುತ್ತಾ ಬಾವಿಗೆ ಬಿದ್ದು ಏಳು ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಇಂದು(ಫೆಬ್ರವರಿ 12) ಹೊನ್ನಾವರ ತಾಲೂಕಿನ ವಂದೂರು ಗ್ರಾಮದ ಬಳಿ ನಡೆದಿದೆ.

ನಾಗಭೂಷಣ ಹೆಗಡೆ(7) ಮೃತ ದುರ್ದೈವಿ ಬಾಲಕ. ಮನೆಯ ನಾಯಿಯೊಂದಿಗೆ ತೋಟದ ಬಳಿ ಆಟವಾಡುತ್ತಿರುವಾಗ ಆಯತಪ್ಪಿ ತೆರೆದ ಬಾವಿಗೆ ಬಿದ್ದಿದ್ದಾನೆ.

'; } else { echo "Sorry! You are Blocked from seeing the Ads"; } ?>

ಸ್ವಲ್ಪ ಹೊತ್ತಿನ ಬಳಿಕ ಮಗು ಕಾಣಿಸದಿದ್ದಾಗ ಮನೆಯವರು ಸುತ್ತಾಮುತ್ತ ಹುಡುಕಾಡಿದ್ದಾರೆ. ಆದ್ರೆ, ಎಲ್ಲೂ ಕಾಣಿಸಿಲ್ಲ. ಕೊನೆಗೆ ಬಾವಿಯೊಳಗೆ ಇಣುಕಿ ನೋಡಿದಾಗ ಮಗು ಬಿದ್ದಿರುವುದು ಬೆಳಕಿಗೆ ಬಂದಿದೆ.

ಇನ್ನು ವಿಷಯ ತಿಳಿದು ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ, ಬಾವಿಯಿಂದ ಬಾಲಕನ ಶವ ಮೇಲಕ್ಕೆತ್ತಿದರು. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'; } else { echo "Sorry! You are Blocked from seeing the Ads"; } ?>

ಹೀಗೆ ಆಟವಾಡುತ್ತ ಮಕ್ಕಳು ಪ್ರಾಣ ಕಳೆದುಕೊಂಡ ಉದಾಹರಣೆಗಳು ಸಾಕಷ್ಟು ಇವೆ. ಇದರಿಂದ ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಎಚ್ಚರಿಕೆವಹಿಸಬೇಕು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!