ಪುತ್ತೂರು: ಸಂಟ್ಯಾರು ಮತ್ತು ಕೈಕಾರ ರಸ್ತೆಯ ಮಧ್ಯದಲ್ಲಿ ಇದೀಗ ಭೀಕರ ರಸ್ತೆ ಅಪಘಾತ ವಾಗಿದ್ದು ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಜೊತೆಗೆ ಐದಾರು ಲೈಟ್ ಕಂಬಕ್ಕೂ ಹಾನಿಯಾಗಿದ್ದು ಕಾರನ್ನು ಇದೀಗ ಕ್ರೈನ್ ಮುಖಾಂತರ ಮೆಲಕ್ಕೆತ್ತಲಾಗಿದ್ದು ಸ್ಥಳಕ್ಕೆ ಸಂಪ್ಯ ಪೊಲೀಸರು ಬೇಟಿ ನೀಡಿ ಪ್ರಕರಣದ ಬಗ್ಗೆ ಕಾರ್ಯ ಪ್ರಗತಿಯಲ್ಲಿದೆಯೆಂದು ತಿಳಿದು ಬಂದಿದೆ.





ಮೃತಪಟ್ಟ ವ್ಯಕ್ತಿಯನ್ನು ನಿಡ್ಪಳ್ಳಿ ಪಂಚಾಯತಿನ ಬಿಜೆಪಿ ಬೆಂಬಲಿತ ಸದಸ್ಯ,ಗೋ ರಕ್ಷಕ್ ಪ್ರಮುಖ್ ಆಗಿರುವ ಮುರಳಿ ಭಟ್ ಮುಂಡೂರು ಎಂದು ತಿಳಿದು ಬಂದಿದೆ
ಕಾರು ಪುತ್ತೂರಿನಿಂದ ಇರ್ದೆ ಕಡೆ ಚಲಿಸುತ್ತಿದ್ದ ಸಂದರ್ಭ ಆಯ ತಪ್ಪಿ ರಸ್ತೆ ಬದಿ ಇದ್ದ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು ಐವತ್ತಡಿಯ ತೋಟಕ್ಕೆ ಉರುಳಿ ಬಿದ್ದಿದ್ದು ಚಾಲಕರಾಗಿದ್ದ ಮುರಳಿ ಭಟ್ ಸಾವನ್ನಪ್ಪಿದ್ದು ಉಳಿದ ಇಬ್ಬರಿಗೆ ಗಾಯವಾಗಿದ್ದು ಆಸ್ಪತ್ರೆಗೆ ಸಾಗಿಸಿದ್ದು ಇನ್ನೊಬ್ಬರು ಅಲ್ಪ ಸ್ವಲ್ಪ ಗಾಯದೊಂದಿಗೆ ಪಾರಾಗಿದ್ದಾರೆಂದು ತಿಳಿದು ಬಂದಿದೆ. ವೀಡಿಯೋ ನೋಡಿ 👇