ಉಪ್ಪಿನಂಗಡಿ: ಮೂಡಡ್ಕ ತೆಕ್ಕಾರು ಸರಳಿಕಟ್ಟೆಯಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಮೂಡಡ್ಕ ಉರೂಸು ಕಾರ್ಯಕ್ರಮ ಇಂದಿನಿಂದ ಚಾಲನೆ ದೊರಕಲಿದೆ.
ಹಲವಾರು ಪವಾಡಗಳಿಗೆ ಸಾಕ್ಷಿಯಾದ ಐತಿಹಾಸಿಕ ಮೂಡಡ್ಕ ದರ್ಗಾ ಶರೀಫ್ ಜಾತಿ, ಮತ ಭೇದವಿಲ್ಲದೆ ಈ ಮಹಾನರ ಸನ್ನಿಧಿಯನ್ನು ಹಲವಾರು ವಿಶ್ವಾಸಿಗಳು ಸಮೀಪಿಸುತ್ತಿದ್ದು ಕಷ್ಟ, ಕಾರ್ಪಣ್ಯಗಳಿಗೆ ಪರಿಹಾರ ಕೇಳಿಕೊಂಡು ಸಾವಿರಾರು ಮಂದಿ ಈ ಸನ್ನಿಧಿಯನ್ನು ಸಮೀಪಿಸುತ್ತಾರೆ.
ಐತಿಹಾಸಿಕ ಮೂಡಡ್ಕ ದರ್ಗಾ ಶರೀಫ್ ಉರೂಸ್ ಮುಬಾರಕ್ ಇಂದಿನಿಂದ (ಫೆಬ್ರವರಿ 15 ರಿಂದ 19) ರ ವರೆಗೆ ಮೂಡಡ್ಕದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಹಲವಾರು ಮಂದಿ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ.
ಇಂದಿನಿಂದ ಐದು ದಿನಗಳ ಕಾಲ ಐತಿಹಾಸಿಕ ಕಾರ್ಯಕ್ರಮ ನಡೆಯಲಿದ್ದು ಸ್ವಲಾತ್ ಮಜ್ಲೀಸ್ ಶೈಖುನಾ ಟಿ.ಹೆಚ್ ಉಸ್ತಾದ್ ಆಂಡ್ ನೇರ್ಚೆ ಉರೂಸ್ ಸಮಾರೋಪ ಕಾರ್ಯಕ್ರಮ ನಡೆಯಲಿದೆ.
ಐತಿಹಾಸಿಕ ಕಾರ್ಯಕ್ರಮದಲ್ಲಿ ಸೆಯ್ಯದ್ ಕೂರತ್ ತಂಙಳ್, ಸೆಯ್ಯದ್ ವಿ.ಪಿ.ಎ ತಂಙಳ್ ಆಟರಿ, ಸೆಯ್ಯದ್ ಇಸ್ಮಾಯಿಲ್ ತಂಙಳ್ ಉಜಿರೆ. ಸೆಯ್ಯದ್ ಪಾಟ್ರಕೋಡಿ ತಂಙಳ್.
ನೌಫಲ್ ಸಖಾಫಿ ಕಳಸ, ಕಬೀರ್ ಹಿಮಮಿ ಕಾಸರಗೋಡು, ಕೆ.ಬಿ ಅಬ್ಬಾಸ್ ಸಹದಿ, ಸ್ವಲಾಹುದ್ದೀನ್ ಸಖಾಫಿ, ಅತಾವುಲ್ಲ ಹಿಮಮಿ ಕುಪ್ಪೆಟ್ಟಿ, ಅಶ್ರಫ್ ಸಖಾಫಿ ಮಾಡವು, ಉಸ್ಮಾನ್ ಸಹದಿ ತೆಕ್ಕಾರು ಸಹಿತ ಹಲವಾರು ಉಲಮಾ ಉಮರಾ ನಾಯಕರು ಬಾಗವಹಿಸಲಿದ್ದಾರೆ ಎಂದು ಮಾಧ್ಯಮಕ್ಕೆ SSF ತೆಕ್ಕಾರು ಯೂನಿಟ್ ಅಧಿಕೃತವಾಗಿ ತಿಳಿಸಿದೆ.
ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಹಕರಿಸುವಂತೆ SSF ತೆಕ್ಕಾರು ಯೂನಿಟ್ ಕಾರ್ಯದರ್ಶಿ ಶಕೀರ್ ಮಾಸ್ಟರ್ ಮನವಿ ಮಾಡಿದ್ದಾರೆ.