ಕೇರಳ: ಹಲವು ತಿಂಗಳ ಹಿಂದೆ ಕಾಲ್ನಡಿಗೆ ಯಾತ್ರೆಯ ಮೂಲಕ ಹಜ್ಜ್‌ಗೆ ತೆರಳಬೇಕೆಂಬ ಶಿಹಾಬ್ ಚೊಟ್ಟೂರು ಕನಸಿಗೆ ಪಾಕಿಸ್ತಾನ ತಡೆ ನೀಡಿದೆ.
ಪಾಕಿಸ್ತಾನದ ಅನುಮತಿ ನಿರಾಕರಣೆಯ ನಂತರ ತಾತ್ಕಾಲಿಕ ಕಾಲ್ನಡಿಗೆಯನ್ನು ನಿಲ್ಲಿಸಿ ವಿಮಾನದ ಮೂಲಕ ಇರಾನ್ ತೆರಳಿದ ಶಿಹಾಬ್ ಚೊಟ್ಟೊರು ಇದೀಗ ಇರಾನ್‌ನಿಂದ ಕಾಲ್ನಡಿಗೆ ಮುಂದುವರಿಸಿದ್ದರೆ ಎಂದು ತಿಳಿದುಬಂದಿದೆ.
ಕೇರಳದ ಮಲಪ್ಪುರನಿಂದ ಕಳೆದ ಕೆಲವು ತಿಂಗಳ ಹಿಂದೆ ಯಾತ್ರೆ ಆರಂಭಿಸಿದ್ದ ಶಿಹಾಬ್ ಚೊಟ್ಟೊರು ಕೇರಳ ಕರ್ನಾಟಕ ಹೀಗೆ ಭಾರತದ ಹಲವು ರಾಜ್ಯಗಳಲ್ಲಿ ಕಾಲ್ನಡಿಗೆ ಮೂಲಕ ಸಂಚರಿಸಿ, ಪಾಕಿಸ್ತಾನ ತೆರಳಲು ಅಲ್ಲಿನ ವೀಸಾಕ್ಕಾಗಿ ಕಳೆದ ನಾಲ್ಕು ತಿಂಗಳಿನಿಂದ ಪಂಜಾಬ್ ಗಡಿಯಲ್ಲಿ ತಂಗಿದ್ದರು. ಇತ್ತೀಚೆಗೆ ಪಾಕಿಸ್ತಾನ ಸರಕಾರ ಅನುಮತಿ ನೀಡಿದ ನಂತರ ವಾಘಾ ಗಡಿ ಮೂಲಕ ಪಾಕಿಸ್ತಾನ ತೆರಳಿ, ಅಲ್ಲಿನ ಶಸ್ತ್ರಸಜ್ಜಿತ ಪೋಲಿಸರ ರಕ್ಷಣೆಯೊಂದಿಗೆ ನಾಲ್ಕು ದಿನಗಳ ಕಾಲ್ನಡಿಗೆ ಮೂಲಕ ನಡೆದುಕೊಂಡು ಹೋಗಿದ್ದರು. ಆದರೆ ನಾಲ್ಕು ದಿನಗಳ ನಂತರ ಭದ್ರತೆಯ ಕಾರಣ ನೀಡಿ ಅನುಮತಿ ರದ್ದುಗೊಳಿಸಿ ಪಾಕಿಸ್ತಾನದಿಂದ ತೆರಳಲು ಅಲ್ಲಿನ ಸರಕಾರ ಸೂಚಿಸಿ ಅನುಮತಿ ರದ್ದುಗೊಳಿಸಿದೆ ಎನ್ನಲಾಗಿದೆ.
ಅನುಮತಿ ನಿರಾಕರಿಸಿದ ಪಾಕಿಸ್ತಾನ ಅಲ್ಲಿಂದ ಶಿಹಾಬ್‌ನನ್ನು ಲಾಹೋರ್ ವಿಮಾನ ನಿಲ್ದಾಣಕ್ಕೆ ತಲುಪಿಸಿ ದೇಶತೊರೆಯಲು ಸೂಚಿಸಿದ ಕಾರಣ
ಅಲ್ಲಿಂದ ನೇರವಾಗಿ ವಿಮಾನದ ಮೂಲಕ ಇರಾನ್ ದೇಶಕ್ಕೆ ತೆರಳಿದ ಶಿಹಾಬ್ ಚೊಟ್ಟುರು ಇದೀಗ ಅಲ್ಲಿಂದ ಕಾಲ್ನಡಿಗೆ ಆರಂಭಿಸಿದ್ದಾರೆ ಎನ್ನಲಾಗಿದೆ.