ಚಂಡೀಗಢ: ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಇಬ್ಬರು ಕೈದಿಗಳನ್ನ ಪಂಜಾಬ್ ರಾಜ್ಯದ ತರಣ್ ಜಿಲ್ಲೆಯ ಗೋಯಿಂದ್ವಾಲ್ ಸಾಹಿಬ್ ಸೆಂಟ್ರಲ್ ಜೈಲಿನಲ್ಲಿ ಹತ್ಯೆಗೈದ ಬಗ್ಗೆ ವರದಿಯಾಗಿದೆ.

ಜೈಲಿನಲ್ಲಿರುವ ಕೈದಿಗಳ ನಡುವಿನ ಘರ್ಷಣೆಯಲ್ಲಿ ಇಬ್ಬರು ಆರೋಪಿಗಳು ಸಾವನ್ನಪ್ಪಿದ್ದು ಈ ಇಬ್ಬರು ಕೈದಿಗಳೂ ಖ್ಯಾತ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಗಳು ಎಂದು ಪೊಲೀಸರು ವರದಿ ಮಾಡಿದ್ದಾರೆ.
ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಗಳಾದ ದುರಾನ್ ಮಂದೀಪ್ ತೂಫಾನ್, ಮನಮೋಹನ್ ಸಿಂಗ್ ಮತ್ತು ಕೇಶವ್ ಅವರ ನಡುವೆ ಘರ್ಷಣೆ ನಡೆದಿದ್ದು, ಮಂದೀಪ್, ಮನಮೋಹನ್ ಸಿಂಗ್ ಸಾವನ್ನಪ್ಪಿದ್ದವರಾಗಿದ್ದಾರೆ.
ಜಗಳದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಆರೋಪಿ ಕೇಶವ್ನನ್ನು ಪೊಲೀಸರು ಅಮೃತ್ಸಾರಿನ ಗುರುನಾನಕ್ ದೇವ್ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ವರದಿಯಾಗಿದೆ.
ಮೂಸೆವಾಲಾವರನ್ನು ಕಳೆದ ಮೇ 29 ರಂದು ಮಾನ್ಸಾ ಜಿಲ್ಲೆಯಲ್ಲಿ ಶೂಟ್ ಮಾಡಿ ಬರ್ಬರವಾಗಿ ಹತ್ಯೆಗೈದಿದ್ದರು.ಈ ಒಂದು ಹತ್ಯೆಗೆ ಇಡೀ ಪಂಜಾಬಿನ ಜನಗಳು ಕಣ್ಣಿರಿನೊಂದಿಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.