ಕಾಸರಗೋಡು: ಕಾಸರಗೋಡು ಜಿಲ್ಲೆಯ ಪೆರ್ಲದ ಬನ್ಪುತ್ತಡ್ಕ ಎಂಬಲ್ಲಿ ಹಲವಾರು ವರ್ಷಗಳಿಂದ ಕಶ್ಫ್ ಕರಾಮತ್ತುಗಳಿಂದ ಪ್ರಸಿದ್ಧಿಯಾಗಿರುವ “ಬದ್ರಿಯಾ ಜುಮ್ಮಾ ಮಸ್ಜಿದ್ ಹಾಗೂ ಬನ್ಪುತ್ತಡ್ಕ ದರ್ಗಾ ಶರೀಫ್” ಇದರ 22 ನೇ ವರ್ಷದ ಉರೂಸ್ ಸಮಾರಂಭವು ಮಾರ್ಚ್ 17 ರಂರು ನಡೆಯಲಿದೆ.
ಉದ್ಯಾವರ ಕರೋಡಂ ಕರ್ತೋರ್ ಎಂದೇ ಹೆಸರುವಾಸಿಯಾಗಿರುವ ಅಸ್ಯಯ್ಯದ್ ಅಬೂಬಕ್ಕರ್ ಜಲಾಲಿಯ್ಯಿಲ್ ಬುಖಾರಿ ಕರ್ತೋರ್ (ಖ.ಅ) ಮಹಾನರ ಮೊಮ್ಮಗರಾಗಿರುವ ಬಣ್ಪತ್ತಡ್ಕದಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಅಸ್ಯಯ್ಯದ್ ಮುಹಮ್ಮದ್ ಅಶ್ರಫ್ ಪೂಕೋಯ ತಂಙಳ್ ಅಲ್‌ಬುಖಾರಿರವರ ದರ್ಗಾ ಇಲ್ಲಿದ್ದು ವರ್ಷ ವರ್ಷ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಈ ವರ್ಷಕ್ಕೆ 22 ನೇ ವರ್ಷ ಆಗುತ್ತಿದ್ದು ಈ ಒಂದು ಉರೂಸ್ ಸಮಾರಂಭವು ಮಾರ್ಚ್ 17 ರಂದು ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಮಗ್ರಿಬ್ ನಮಾಝಿನ ಬಲಿಕ ನಡೆಯಲಿದೆ ಎಂದು ತಿಳಿದು ಬಂದಿದೆ.
ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಮುಖರಾದ ಅಸ್ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ,ಅಸ್ಯಯ್ಯದ್ ಇಸ್ಮಾಯಿಲ್ ತಂಙಳ್ ಅಲ್‌ಬುಖಾರಿ ಮಾಡಾವು, ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಅಲ್‌ಬುಖಾರಿ ಎಣ್ಮೂರು, ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಅಲ್‌ಬುಖಾರಿ ಉಕಿನಡ್ಕ, ಅಸ್ಸಯ್ಯದ್ ಆಟಕೋಯ ತಂಙಳ್ ಅಲ್‌ಬುಖಾರಿ, ಅಸ್ಸಯ್ಯದ್ ಕುಂಞಿಕೋಯ ತಂಙಳ್ ಅಲ್‌ಬುಖಾರಿ ಬಣ್ಪತ್ತಡ್ಕ, ಅಸ್ಸಯ್ಯದ್ ಸಂಶುದ್ದೀನ್ ತಂಙಳ್ ಅಲ್‌ಬುಖಾರಿ ಬಣ್ಪತ್ತಡ್ಕ, ಅಸ್ಸಯ್ಯದ್ ಜಾಫರ್ ಸ್ವಾದಿಖ್ ತಂಙಳ್ ಅಲ್‌ಬುಖಾರಿ ಬಣ್ಪತ್ತಡ್ಕ, ಅಬ್ದುಲ್ ಗಫೂರ್ ಅಮಾನಿ ಖತೀಬರು ಬದ್ರಿಯಾ ಜುಮ್ಮಾ ಮಸ್ಜಿದ್ ಬಣ್ಪತ್ತಡ್ಕ, ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು, ಅಬ್ದುಲ್ ಹಮೀದ್ ಅಹ್ಸನಿ, ಅಟ್ಟಗೋಳಿ ಮುದರ್ರಿಸ್ RJM ಮುಚ್ಚಿಲ, ಜನಾಬ್ ಶರೀಫ್ ಹಾಜಿ ಕೆ.ಪಿ ಅಧ್ಯಕ್ಷರು ಬದ್ರಿಯಾ ಜುಮ್ಮಾ ಮಸ್ಜಿದ್ ಬಣ್ಪತ್ತಡ್ಕ, ಸಂಶುದ್ದೀನ್ ಬಿ ಕಾರ್ಯದರ್ಶಿ ಬದ್ರಿಯಾ ಜುಮ್ಮಾ ಮಸ್ಜಿದ್ ಬಣ್ಪತ್ತಡ್ಕ ಹಾಗು ಹಲವಾರು ಉಮಾರ ಉಲಮಾ ನೇತಾರರು ಭಾಗವಹಿಸಲಿದ್ದಾರೆಂದು ತಿಳಿಸಿದ್ದಾರೆ.
ಈ ಒಂದು ಕಾರ್ಯಕ್ರಮವನ್ನು ಸುಂದರವಾಗಿಸಲು ಎಲ್ಲಾ ಕಡೆ ಪ್ರಸಿದ್ದಿಗಳಿಸಿರುವಂತಹ ಮಸ್ಹೂದ್ ಸಅದಿ ಗಂಡಿಬಾಗಿಲು ಮತ್ತು ಸಂಗಡಿಗರಿಂದ ಬೃಹತ್ ಬುರ್ದಾ ಮಜ್ಲಿಸ್ ಮತ್ತು ಮೌಲಿದ ಪಾರಾಯಣ ಕಾರ್ಯಕ್ರಮವು ನಡೆಯಲಿದೆ.
ಈ ಒಂದು ಕಾರ್ಯಕ್ರಮದಲ್ಲಿ ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಿದ್ದು ಕಾರ್ಯಕ್ರಮದ ಕೊನೆಯಲ್ಲಿ ತಬರುಕ್ ವಿತರಣೆ ಕೂಡ ನಡೆಯಲಿದೆಯೆಂದು ತಿಳಿದು ಬಂದಿದೆ.