ಮಂಗಳೂರು: ದೇಶದಲ್ಲೇ ದಾಖಲೆಯ ಗರಿಷ್ಠ ತಾಪಮಾನ ಮಂಗಳೂರುನಲ್ಲಿ ದಾಖಲಾಗಿದ್ದು ಜನ ಸಾಮಾನ್ಯರಲ್ಲಿ ಆತಂಕ ಹೆಚ್ಚಾಗಿದೆ.
ಬಿಸಿಲ ದಗೆಗೆ ಕಾಡ್ಗಿಚ್ಚುಗಳು ಹೆಚ್ಚಾಗುತ್ತಿತ್ತು.
ಇತ್ತ ತೀವ್ರವಾದ ತಾಪಮಾನದಿಂದಾಗಿ ಅನಾರೋಗ್ಯವೂ ಹೆಚ್ಚಾಗುತ್ತಿದೆ.
ಮಾ, 2ರಂದು ದೇಶದಲ್ಲೇ ಗರಿಷ್ಠ ಎನಿಸಿಕೊಂಡ ಸರಿ ಸುಮಾರು 37 ಡಿ.ಸೆ ನಷ್ಟು ತಾಪಮಾನ ಮಂಗಳೂರುನಲ್ಲಿ ದಾಖಲಾಗಿದ್ದು.
ಬುಧವಾರ ನಿನ್ನೆ 38.8 ಡಿ.ಸೆ ತಾಪಮಾನ ದಾಖಲಾಗಿದೆ.
2010 ರಿಂದ ಇಲ್ಲಿಯವರೆಗೆ ದಾಖಲೆಯಾದ ಉಷ್ಣತೆಯಲ್ಲಿ ಅತೀ ಹೆಚ್ಚು ಉಷ್ಣತೆ ಇದಾಗಿದೆ.
ದೇಶದಲ್ಲೇ ಅತೀ ಹೆಚ್ಚು ತಾಪಮಾನ ಮಂಗಳೂರುನಲ್ಲಿ ದಾಖಲಾಗಿದೆ.
ಅತೀ ಹೆಚ್ಚು ತಾಪಮಾನದಿಂದ ಜನರೆಡೆಯಲ್ಲಿ ಆತಂಕ ಹೆಚ್ಚಾಗುತ್ತಿದ್ದು.
ಹಲವಾರು ಮಂದಿಗಳಿಗೆ ಅನಾರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ.
ಇನ್ನು ಹಲವು ಕಾಡುಗಳು ಕಾಡ್ಗಿಚ್ಚಿನಿಂದ ಹೊತ್ತಿ ಉರಿಯುತ್ತಿದೆ.
ಬಿಸಿಲ ಬೇಗೆ ಮತ್ತೆ ಮತ್ತೆ ಹೆಚ್ಚಾಗುತ್ತಲೇ ಇದ್ದು ಇನ್ನು ತಾಪಮಾನ 2 ರಿಂದ 3 ಡಿ.ಸೆ ನಷ್ಟು ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಏರುತ್ತಿರುವ ತಾಪಮಾನ ಮಕ್ಕಳ ಮೇಲೆ ಬಾರಿ ಪರಿಣಾಮ ಬಿರುತ್ತಿದ್ದು ಪ್ರತಿಯೊಬ್ಬರು ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆಯನ್ನು ಪಾಲಿಸಬೇಕಾಗಿದೆ.