dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ಪೊಲೀಸ್ ಸೋಗಿನಲ್ಲಿ ಬಂದು ಮಹಿಳೆಯೋರ್ವಳನ್ನು ಬೆದರಿಸಿ 38 ಸಾವಿರ ರೂಪಾಯಿ ಸುಲಿಗೆ ಮಾಡಿದ ನಕಲಿ ಪೊಲೀಸನನನ್ನು ಅಸಲಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಕಾವೂರು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮಂಗಳೂರಿನ ಕಾವೂರು ಈಶ್ವರ ನಗರದ ಸರಕಾರಿ ಗುಡ್ಡೆಯ ನಿವಾಸಿ ಶಿವರಾಜ್ ದೇವಾಡಿಗ ಬಂಧಿತನಾಗಿರುವ ಆರೋಪಿ.

'; } else { echo "Sorry! You are Blocked from seeing the Ads"; } ?>

45 ವರ್ಷ ಪ್ರಾಯದ ಮಹಿಳೆ ಈ ಹಿಂದೆ ಮಸಾಜ್‌ ಪಾರ್ಲರ್‌ ನಡೆಸುತ್ತಿದ್ದು, ಕೆಲವು ಸಮಯದ ಬಳಿಕ ಅದನ್ನು ಮುಚ್ಚಿದ್ದರು.
ಆರೋಪಿ ಶಿವರಾಜ್‌ ಇತ್ತೀಚೆಗೆ ಪೊಲೀಸ್‌ ಯೂನಿಫಾರಂ ವೇಷದಲ್ಲಿ ಮಹಿಳೆಯ ಮನೆಗೆ ತೆರಳಿ ತಾನು ಪಾಂಡೇಶ್ವರ ಠಾಣೆಯ ಪೊಲೀಸ್ ಎಂಬುದಾಗಿ ಪರಿಚಯಿಸಿಕೊಂಡು ‘ನೀವು ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ. ದಂಧೆ ನಡೆಸುತ್ತಿರುವುದು ಸಾಹೇಬರಿಗೆ ಗೊತ್ತಾಗಿದೆ. ಸಾಹೇಬರ ಜತೆ ಸಹಕರಿಸಿದರೆ ದಂಧೆಗೆ ತೊಂದರೆ ಆಗುವುದಿಲ್ಲ. ಗೂಗಲ್‌ ಪೇ ಮಾಡಿದರೆ ರೈಡ್‌ ಮಾಡುವುದಿಲ್ಲ’ ಎಂದು ಹೇಳಿ ಹೋಗಿದ್ದ.

ಬಳಿಕ ಮಹಿಳೆಗೆ ಕರೆ ಮಾಡಿದ ಆರೋಪಿ ‘ನಿಮ್ಮ ಮನೆಯಲ್ಲಿ ಚಿನ್ನಾಭರಣ, ಹಣ ಇದೆ ಎಂದು ದೂರು ಬಂದಿದೆ. ಪ್ರಕರಣ ಮುಚ್ಚಿಹಾಕಲು ಹಣ ಕೊಡ ಬೇಕು. ಇಲ್ಲವಾದರೆ ಪೊಲೀಸರು ದಾಳಿ ನಡೆಸುತ್ತಾರೆ’ ಎಂದು ಬೆದರಿಕೆ ಹಾಕಿದ್ದಾನೆ.

'; } else { echo "Sorry! You are Blocked from seeing the Ads"; } ?>

ಇದರಿಂದ ಹೆದರಿದ ಮಹಿಳೆ ಸಮೀಪದ ಮೊಬೈಲ್‌ ಶಾಪ್‌​ಗೆ ತೆರಳಿ ಗೂಗಲ್‌ ಪೇ ಮೂಲಕ 18 ಸಾವಿರ ರೂ. ವರ್ಗಾಯಿಸಿದ್ದಾರೆ.
ಬಳಿಕ ಪುನ: ಕರೆ ಮಾಡಿದ ಅದೇ ವ್ಯಕ್ತಿ, ‘ಫೈಲ್‌ ಪೊಲೀಸ್‌ ಆಯುಕ್ತರ ಕಚೇರಿಗೂ ಹೋಗಿದೆ, ಪ್ರಕರಣವನ್ನು ಮುಚ್ಚಿ ಹಾಕಲು ಹಣ ನೀಡಬೇಕು.
ಇಲ್ಲವಾದರೆ ಆಯುಕ್ತರು ಮಾಧ್ಯಮದವರೊಂದಿಗೆ ಮನೆಗೆ ಬರುತ್ತಾರೆ’ ಎಂದು ಬೆದರಿಕೆ ಹಾಕಿದ್ದಾನೆ.

ಗಾಬರಿಗೊಂಡ ಮಹಿಳೆ ಮತ್ತೊಮ್ಮೆ ಮೊಬೈಲ್‌ ಶಾಪ್‌​ಗೆ ಹೋಗಿ 20 ಸಾವಿರ ರೂ.ಗಳನ್ನು ಗೂಗಲ್‌ ಪೇ ಮಾಡಿದ್ದಾರೆ.
ಹೀಗೆ ಒಟ್ಟು 38 ಸಾವಿರ ರೂ. ಹಣವನ್ನು ನಕಲಿ ಪೊಲೀಸ್‌ ನೀಡಿದ ಸಂಖ್ಯೆಗೆ ವರ್ಗಾಯಿಸಿದ್ದಾರೆ.

ಇದೀಗ ತನ್ನನ್ನು ಬೆದರಿಸಿ ಹಣ ವಸೂಲಿ ಮಾಡಿದ ವ್ಯಕ್ತಿ ನಕಲಿ ಪೊಲೀಸ್‌ ಎಂದು ಗೊತ್ತಾದ ಬಳಿಕ ಮಹಿಳೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರು
ಈ ಬಗ್ಗೆ ದೂರು ದಾಖಲು ಮಾಡಿದ್ದ ಕಾವೂರಿನ ಅಸಲಿ ಪೊಲೀಸರು ಬಲೆ ಬೀಸಿ ಆರೋಪಿ ನಕಲಿ ಪೊಲೀಸನ್ನು ಬಂಧಿಸಿ ಜಾತಕ ಬಿಡಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!