';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಪ್ರಥಮ ಪಿಯುಸಿ ವಿದ್ಯಾರ್ಥಿನಿಯೋರ್ವಳು ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾಗಿ ಮೃತಪಟ್ಟ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ.
ಮೃತಪಟ್ಟ ವಿಧ್ಯಾರ್ಥಿನಿ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಜ್ಯೋತಿನಗರ ನಿವಾಸಿ, ಮಿಸ್ರಿಯಾ (17) ಎಂದು ತಿಳಿದು ಬಂದಿದೆ.
ಬಿಳಿ ರಕ್ತ ಕಣಗಳ ಕುಸಿತ ಕಂಡುಬಂದಿರುವುದರಿಂದ ಮಿಸ್ರಿಯಾ ಸಾವು ಸಂಭವಿಸಿದ್ದು, ಇದು ಡೆಂಗ್ಯೂ ಪ್ರಕರಣ ಎಂದು ಶಂಕಿಸಲಾಗಿದೆ.
ಜ್ಯೋತಿನಗರದ ಮುಹಿಯದ್ದಿ -ರಮ್ಲತ್ ದಂಪತಿಯ ದ್ವಿತೀಯ ಪುತ್ರಿ ಮಿಸ್ರಿಯಾ ಆಳ್ವಾಸ್ ಪ.ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದರೆಂದು ವರದಿಯಾಗಿದೆ.
ಕೆಲವು ದಿನಗಳಿಂದ ಆಕೆ ವಿಪರೀತ ಜ್ವರದಿಂದ ಬಳಲುತ್ತಿದ್ದ ಮಿಸ್ರಿಯಾಳನ್ನು ಖಾಸಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೇ ಇದೀಗ ಕೊನೆಯುಸಿರು ಎಳೆದಿದ್ದಾಳೆಂದು ತಿಳಿದು ಬಂದಿದೆ.