';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬಂದಿ ಪುತ್ತೂರು ಮುಕ್ರಂಪಾಡಿಯ ಬಸ್‍ತಂಗುದಾಣದಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ 40 ಸಾವಿರ ರೂಪಾಯಿ ಮೌಲ್ಯದ 1.020 ಕೆ.ಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಲ್ನಾಡು ಗ್ರಾಮದ ಬುಳ್ಳೇರಿಕಟ್ಟೆ ನಿವಾಸಿ 35 ವರ್ಷ ಪ್ರಾಯದ ಇಕ್ಬಾಲ್ ಪಿ. ಯಾನೆ ಇಕ್ಕು ಬಂಧಿತ ಆರೋಪಿ.
ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಸುನಿಲ್ ಕುಮಾರ್, ಎಸ್.ಐ ಶ್ರೀಕಾಂತ್ ರಾಥೋಡ್, ಎ.ಎಸ್ ಐ ಲೋಕನಾಥ್ ಮತ್ತು ಸಿಬಂದಿಯನ್ನು ಒಳಗೊಂಡ ತಂಡ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮುಕ್ರಂಪಾಡಿಯ ಬಸ್ ತಂಗುದಾಣದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಇಕ್ಬಾಲ್ ಪಿ. ಯಾನೆ ಇಕ್ಕು ಕೈಯಲ್ಲದ್ದ ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.