';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ವಿಟ್ಲ; ಹೆರಿಗೆಯಾಗಿದ್ದ ಪತ್ನಿಯನ್ನು ನೋಡಲು ಆಸ್ಪತ್ರೆಗೆ ತೆರಲುತ್ತಿದ್ದಾಗ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಮಾಣಿ ಬುಡೋಳಿಯಲ್ಲಿ ನಡೆದಿದೆ.
ಬುಡೋಳಿ ನಿವಾಸಿ ಪ್ರಸ್ತುತ ಪಾಟ್ರಕೋಡಿಯಲ್ಲಿ ವಾಸವಿರುವ ಫಾರೂಕ್(35) ಮೃತರು ಯುವಕ.
ಫಾರೂಕ್ ಅವರಿಗೆ 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಮಕ್ಕಳಾಗಿರಲಿಲ್ಲ. 10 ವರ್ಷಗಳ ಬಳಿಕ ಮೊನ್ನೆಯಷ್ಠೇ ಅವರ ಪತ್ನಿಗೆ ಹೆರಿಗೆಯಾಗಿತ್ತು.
10 ವರ್ಷದ ನಂತರ ಹುಟ್ಚಿದ ಕಂದಮ್ಮನನ್ನು ನೋಡಲು ಕಾತುರದಿಂದ ಬೈಕ್ ಏರಿ ಬಂದ ಫಾರೂಕ್’ನಿಗೆ ಆಸ್ಪತ್ರೆಗೆ ತಲುಪುವ ಮುನ್ನವೇ ಅಪಘಾತವಾಗಿತ್ತು.
ಘಟನೆಯಲ್ಲಿ ಫಾರೂಕ್ ಗಂಭೀರ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ನಿನ್ನೆ(ಶುಕ್ರವಾರ) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಫಾರೂಕ್ ನಿಧನದಿಂದ ಕುಟುಂಬದ ರೋಧನ ಮುಗಿಲು ಮುಟ್ಟಿದೆ.