';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಳ್ತಂಗಡಿ: ಮಹಿಳೆಯೊಬ್ಬರು ಅಂಬುಲೆನ್ಸ್’ನಲ್ಲೇ ಗಂಡು ಮಗುವಿಗೆ ಜನ್ಮವಿತ್ತ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ವೇಣೂರು ಸಮೀಪದ ಗೋಳಿಯಂಗಡಿ ನಿವಾಸಿ ಭಾಸ್ಕರ ಅವರ ಪತ್ನಿ ಗೀತಾ(24) ಅವರನ್ನು ಪ್ರಸವ ವೇದನೆಯ ವೇಳೆ ಆಸ್ಪತ್ರೆಗೆ ಸಾಗಿಸುವ ಮಧ್ಯೆ 108 ಅಂಬುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ತುರ್ತು ಕರೆ ಸ್ಪಂಧಿಸಿ 108 ಅಂಬುಲೆನ್ಸ್ ನಲ್ಲಿ ಅವರನ್ನು ಆಸ್ಪತ್ರೆಗೆ ಕರೆತರುವ ಪ್ರಯತ್ನದ ಮಧ್ಯೆಯೇ ಅವರು ಪಡಂಗಡಿ ತಲುಪುತ್ತಿದ್ದಂತೆ ಅಪರಾತ್ರಿ 2.57 ಗಂಟೆಗೆ ವಾಹನದಲ್ಲೇ ಮಗುವಿಗೆ ಜನ್ಮವಿತ್ತಿದ್ದಾರೆ ಎನ್ನಲಾಗಿದೆ.
ನಾರಾವಿ ಕೇಂದ್ರದ ಅಂಬುಲೆನ್ಸ್ ಇದಾಗಿದ್ದು ಆರೋಗ್ಯ ಶುಶ್ರೂಷಕಿ ಪೂರ್ಣಿಮಾ ಅವರು ಈ ಸಂದರ್ಭ ಸಕಾಲಿಕ ಆರೋಗ್ಯ ಸ್ಪಂದನ ನೀಡಿದ್ದಾರೆ. ವಾಹನ ಚಾಲಕ(ಪೈಲೆಟ್) ಭೂದೇವಪ್ಪ ಪೂರಕ ಸಹಕಾರ ನೀಡಿದ್ದಾರೆ. ಆರಂಭಿಕ ಚಿಕಿತ್ಸೆ ನೀಡಿದ ಬಳಿಕ ತಾಯಿ ಮಗು ಇಬ್ಬರನ್ನೂ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಇಬ್ಬರೂ ಕ್ಷೇಮವಾಗಿದ್ದಾರೆ