';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕೊಚ್ಚಿ: ಅಪಾರ ಪಾತ್ರಗಳ ಮೂಲಕ ಜಗತ್ತಿನಾದ್ಯಂತ ಇರುವ ಮಲಯಾಳಿಗಳನ್ನು ನಗೆಗಡಲಲ್ಲಿ ತೇಲಿಸಿದ್ದ ಖ್ಯಾತ ನಟ ಇನೋಸೆಂಟ್ (75) ವಿಧಿವಶರಾಗಿದ್ದಾರೆ.
ಇವರು ಎರಡು ವಾರಗಳಿಗೂ ಹೆಚ್ಚು ಕಾಲ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶದ ಸಮಸ್ಯೆಯಿಂದಾಗಿ, ಅವರ ಸ್ಥಿತಿ ಹದಗೆಟ್ಟಿದ್ದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಚಿಕಿತಾಸೆ ಫಲಕಾರಿಯಾಗದೇ ಇಂದು (ಭಾನುವಾರ) ರಾತ್ರಿ 10.45 ರ ಸುಮಾರಿಗೆ ನಿಧನರಾದರು.
600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇನ್ನೋಸೆಂಟ್ ಮಲಯಾಳಂ ಚಿತ್ರರಂಗದ ಶ್ರೇಷ್ಠ ಹಾಸ್ಯನಟರಲ್ಲಿ ಒಬ್ಬರು. ಇನ್ನೋಸೆಂಟ್ ಅವರ ವಿಶಿಷ್ಟವಾದ ದೇಹಭಾಷೆ ಮತ್ತು ತ್ರಿಶೂರ್ ಶೈಲಿಯ ಸಂಭಾಷಣೆಯು ಇನ್ನೋಸೆಂಟ್ ಅವರ ವಿಶಿಷ್ಟ ಶೈಲಿಯಾಗಿತ್ತು. ಸತ್ಯನ್ ಅಂತಿಕ್ಕಾಡ್, ಫಾಸಿಲ್, ಪ್ರಿಯದರ್ಶನ್ ಮತ್ತು ಸಿದ್ದಿಕ್-ಲಾಲ್ ಅವರ ಇನ್ನೋಸೆಂಟ್ ಪಾತ್ರಗಳು ಬಹಳ ಜನಪ್ರಿಯವಾಗಿವೆ.