ಬೆಂಗಳೂರು: ಕರ್ನಾಟಕ ವಿಧಾನ ಸಭಾ ಚುನಾವಣಾ ಕಾವು ಏರುತ್ತಲೇ ಇದ್ದು ಬಿಜೆಪಿ ಅಖಾಡ ಗೆಲ್ಲಲು ತಂತ್ರ ಪೂರ್ವಕವಾಗಿ ಬಲಿಷ್ಠ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುತ್ತಿದ್ದು ಹಿಂದುತ್ವದ ಮುಖಗಳಿಗೆ ಈ ಬಾರಿ ಬಿಜೆಪಿ ಬಹು ಮುಖ್ಯ ಆದ್ಯತೆ ನೀಡಲಿದೆ.
ಇನ್ನು ಚುನಾವಣಾ ಕಣದಿಂದ ಹಲವಾರು ಶಾಸಕರನ್ನು ಹೊರಗಿಡಲಿದ್ದು ಹೊಸ ಮುಖಗಳಿಗೆ ಈ ಬಾರಿ ಬಿಜೆಪಿ ಟಿಕೇಟ್ ನೀಡಲಿದೆ.ಈ ನಿಟ್ಟಿನಲ್ಲಿ ಸುಳ್ಯದ ಶಾಸಕ ರಾಜ್ಯ ಸಚಿವರೂ ಆಗಿರುವ ಸೋಲಿಲ್ಲದ ಸರದಾರ ಅಂಗಾರರಿಗೆ ಈ ಬಾರಿ ಟಿಕೇಟ್ ಬಹುತೇಕ ಡೌಟ್ ಎಂದು ಹೇಳಲಾಗುತ್ತಿದೆ.
ಇನ್ನು ಪುತ್ತೂರಿನ ಹಾಲಿ ಶಾಸಕ ಸಂಜೀವ ಮಠಂದೂರನ್ನು ಕೂಡ ಈ ಬಾರಿ ಚುನಾವಣಾ ಕಣದಿಂದ ಕೈ ಬಿಡಲಿದ್ದು ಹೊಸ ಹಿಂದುತ್ವದ ಮುಖಗಳಿಗೆ ಮಣೆ ಹಾಕಲಿದೆ ಬಿಜೆಪಿ ಹೈಕಮಾಂಡ್. ಉಡುಪಿ, ಕಾರ್ಕಳ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಬದಲಾವಣೆ ಬಹಳಷ್ಟು ಹೆಚ್ಚಿದೆ.
ಇನ್ನು ಮಾಜಿ ಸಚಿವರು ಬಿಜೆಪಿಯ ಹಿರಿಯ ನಾಯಕರಾಗಿರುವ ಈಶ್ವರಪ್ಪ ರವರಿಗೆ ಬಹುತೇಕ ಟಿಕೇಟ್ ಡೌಟ್ ಎಂದೇ ಹೇಲಾಲಾಗುತ್ತಿದು.
ಇವರ ಬಾಷಣಗಳಿಂದ ಮತ್ತು ಭ್ರಷ್ಟಾಚಾರದ ಆರೋಪದಿಂದ ಪಕ್ಷಕ್ಕೆ ಬಹಳಷ್ಟು ಹಿನ್ನಡೆಯಾಗಿದ್ದು ಈ ದೃಷ್ಟಿಯಿಂದ ಬಿಜೆಪಿ ಹೈಕಮಾಂಡ್ ಈಶ್ವರಪ್ಪರಿಗೆ ಟಿಕೇಟ್ ನೀಡುವುದಿಲ್ಲ ಎಂದು ಹೇಳಲಾಗುತ್ತಿದೆ.
ಬಿಜೆಪಿ ಯ ಮೊದಲ ನೂರು ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು ಇನ್ನೇನು ಕೆಲವೇ ಕ್ಷಣಗಳಲ್ಲಿ ಬಿಡುಗಡೆಯಾಗಲಿದೆ.ಈ ಬಾರಿ ಬಿಜೆಪಿ ಹೈಕಮಾಂಡ್ ನ ತಂತ್ರಗಾರಿಕೆ ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುವುದು ಕಾದು ನೋಡಬೇಕಿದೆ.