ಪುತ್ತೂರು: ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮೀನಾ ಮೇಷ ನೋಡುತ್ತಿರುವ ಎರಡು ಪಕ್ಷಗಳ ಹೈಕಮಾಂಡಿನ ಈ ಒಂದು ನಡವಳಿಕೆ ಅಭ್ಯರ್ಥಿಗಳ ಎದೆಯಲ್ಲಿ ಡವಡವ ಎನ್ನುವಂತೆ ಮಾಡಿದೆ.
ಈಗಾಗಲೇ ಎರಡು ಪಟ್ಟಿಗಳನ್ನು ಪ್ರಕಟಿಸಿರುವ ಕಾಂಗ್ರೆಸ್ ಮೂರನೇ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಹೆಸರನ್ನು ತಿಳಿಸಲು ಹಿಂದೆ ಮುಂದೆ ನೋಡುತ್ತಿದೆ.ಆದರೆ ಇದೆಲ್ಲದರ ನಡುವೆ ಬಿಜೆಪಿ ಇನ್ನೂ ಅಭ್ಯರ್ಥಿಗಳ ಹೆಸರನ್ನು ಗೌಪ್ಯವಾಗಿಟ್ಟುಕೊಂಡು ಮಾಸ್ಟರ್ ಪ್ಲಾನಿಂಗ್ ಮೂಲಕ ಕಾಂಗ್ರೆಸಿನ ಎಲ್ಲಾ ಪಟ್ಟಿ ಬಿಡುಗಡೆ ಗೊಂಡ ನಂತರವೇ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಲು ನಿರ್ಧರಿಸಿದೆ ಎಂದು ಅನ್ನಿಸಿದೆ.
ಅದರಲ್ಲೂ ನಮ್ಮ ಪುತ್ತೂರು ಕ್ಷೇತ್ರವು ಎರಡು ಪಕ್ಷದ ಹೈಕಮಾಂಡಿಗೆ ಕಗ್ಗಂಟಾಗಿ ಪರಿಣಮಿಸಿದ್ದರಿಂದ ಇದುವರೆಗೆ ಎರಡೂ ಪಕ್ಷದ ಅಭ್ಯರ್ಥಿಗಳ ಹೆಸರು ಇನ್ನೂ ನಿರ್ಧಾರವಾಗಿಲ್ಲ ಎಂದು ತಿಳಿದು ಬಂದಿದೆ.
ಈಗಾಗಲೇ ಪುತ್ತೂರು ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂವರ ಹೆಸರಿದ್ದು ಅದು ಫೈನಲ್ ಗಟ್ಟಕ್ಕೆ ತಲುಪಿದೆ ಎಂದು ತಿಳಿದು ಬಂದಿದೆ.ಅದೇರೀತಿ ಬಿಜೆಪಿಯಲ್ಲೂ ಮೂವರ ಹೆಸರು ಹೈಕಮಾಂಡ್ ಆರಿಸಿದ್ದು ಇದರಲ್ಲಿ ಎರಡು ಪಕ್ಷ ಈ ಬಾರಿ ಯಾರನ್ನು ಕಣಕ್ಕೆ ಇಳಿಸಲಿದೆ ಎನ್ನುವುದು ಕಾದು ನೋಡಬೇಕಾಗಿದೆ.ಆದರೆ ಇದುವರೆಗೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಯಾವುದೇ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಅಧಿಕೃತವಾಗಿ ಘೋಷಣೆ ಮಾಡಿರುವುದಿಲ್ಲ.