ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಗೆ ತೆರೆ ಬಿದ್ದಿದ್ದು ಸುಮಾರು 189 ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಬಿಜೆಪಿ ಹೈಕಮಾಂಡ್ ದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ.
ಈ ಪಟ್ಟಿಯಲ್ಲಿ ಹಲವಾರು ಶಾಸಕರು ಮತ್ತು ಸಚಿವರಿಗೆ ಕೋಕ್ ನೀಡಲಾಗಿದ್ದು ಹೊಸ ಮುಖಗಳಿಗೆ ಬಿಜೆಪಿ ಆದ್ಯತೆ ನೀಡಿದೆ.ಬಿಜೆಪಿ ಈ ಬಾರಿ ಸ್ವತಂತ್ರವಾಗಿ ಗದ್ದುಗೆಗೇರಲು ಬಾರೀ ಹರಸಾಹಸ ಪಡುತ್ತಿದೆ ಎನ್ನಬಹುದು.
ಬಿಜೆಪಿಯ ಮೊದಲ ಪಟ್ಟಿಯಲ್ಲಿ ಸುಮಾರು 189 ಅಭ್ಯರ್ಥಿಗಳಿದ್ದು 52 ಹೊಸ ಮುಖಗಳಿಗೆ ಬಿಜೆಪಿ ಈ ಬಾರಿ ಆದ್ಯತೆ ನೀಡಿದೆ.ಇನ್ನು 35 ಮಂದಿಗಳ ಪಟ್ಟಿಯನ್ನು ಎರಡನೇ ಪಟ್ಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಇವಾಗ ಘೋಷಿಸಿದ ಅಭ್ಯರ್ಥಿಗಳ ಪಟ್ಟಿಗಳಲ್ಲಿ 32 ಸೀಟುಗಳನ್ನು ಓಬಿಸಿ ಗೆ 16 ಸೀಟುಗಳನ್ನು ಎಸ್ಟಿಗೆ ಹಂಚಿಕೆ ಮಾಡಲಾಗಿದೆ.ಕಣದಲ್ಲಿ ಈ ಬಾರಿ 9 ಡಾಕ್ಟರ್ ಗಳು, ಓರ್ವ ನಿವೃತ ಐ,ಎ,ಎಸ್ ಓರ್ವ ಐಪಿಎಸ್, ಐವರು ವಕೀಲರು ಸಹಿತ 8 ಮಹಿಳೆಯರಿಗೆ ಚುನಾವಣೆ ಟಿಕೇಟ್ ನೀಡಲಾಗಿದೆ.ಬಿಜೆಪಿ ಈ ಬಾರಿ ಸ್ವತಂತ್ರವಾಗಿ ಕರ್ನಾಟಕದಲ್ಲಿ ಗದ್ದುಗೆಗೇರಲು ಬಾರಿ ಕಸರತ್ತನ್ನೇ ನಡೆಸುತ್ತಿದೆ.ಬಿಜೆಪಿ ಘೋಷಿಸಿದ ಅಭ್ಯರ್ಥಿಗಳ ಪಟ್ಟಿ ಇಂತಿವೆ