ದೆಹಲಿ: ಕೆಲ ದಿನಗಳ ಹಿಂದೆ ರಾಜಕೀಯದಲ್ಲಿ ನಡೆದ ಬಲುದೊಡ್ಡ ಬ್ರೇಕಿಂಗ್ ನ್ಯೂಸ್ ಆಗಿತ್ತು ರಾಹುಲ್ ಗಾಂಧಿಯನ್ನು ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿ ಇಡೀ ಭಾರತದ ಜನತೆಯನ್ನೇ ಮಂಕಾಂಗುವಂತೆ ಮಾಡಿತ್ತು.
ಅದೇ ಮೋದಿ ಉಪನಾಮಕ್ಕೆ ಸಂಬಂಧಿಸಿದಂತೆ ಅನರ್ಹಗೊಂಡ ಸಂಸದ ರಾಗಾ ಸರ್ಕಾರವು ತನಗೆ ನೀಡಿದ್ದ ನಿವಾಸವನ್ನು ಖಾಲಿ ಮಾಡಿದ ಬಗ್ಗೆ ವರದಿಯಾಗಿದೆ.
ಇತ್ತೀಚೆಗೆ ರಾಹುಲ್ ಗಾಂಧಿ ಅವರ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹಾಕಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್ ಕೋರ್ಟ್ ರಾಹುಲ್ ಗಾಂಧಿ ಅವರಿಗೆ ದೋಷಿ ಎಂದು 2 ವರ್ಷಗಳ ಕಾಲ ಶಿಕ್ಷೆಯನ್ನು ವಿಧಿಸಿ, ಜಾಮೀನು ನೀಡಿತ್ತು, ನಂತರ ಲೋಕಸಭೆ ಸದಸ್ಯತ್ವದಿಂದ ಅನರ್ಹ ಕೂಡ ಮಾಡಲಾಗಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾದ ನ್ಯಾಯಾಲಯವೊಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು.
ಅಪರಾಧ ಸಾಬೀತಾದ ಕಾರಣ ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಂಡ ನಂತರ, ಏಪ್ರಿಲ್ 22 ರೊಳಗೆ ಅವರ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಲೋಕಸಭೆಯ ಕಾರ್ಯದರ್ಶಿಯು ರಾಹುಲ್ ಗಾಂಧಿಯರಿಗೆ ಹೇಳಲಾಗಿತ್ತು. ತುಘಲಕ್ ಲೇನ್ ಬಂಗಲೆಯನ್ನು ರಾಹುಲ್ ಗಾಂಧಿಯವರಿಗೆ 2005ರಲ್ಲಿ ಉತ್ತರ ಪ್ರದೇಶದ ಅಮೇಥಿನಿಂದ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಅವರಿಗೆ ಮಂಜೂರು ಮಾಡಲಾಯಿತು.
ಇಂದು ದೆಹಲಿಯ 12 ತುಘಲಕ್ ಲೇನ್ ಬಂಗಲೆಯಿಂದ ರಾಹುಲ್ ಗಾಂಧಿ ಅವರ ವಸ್ತುಗಳನ್ನು ಖಾಲಿ ಮಾಡಲಾಗಿದೆ ಹಲವು ಗೃಹೋಪಯೋಗಿ ವಸ್ತುಗಳನ್ನು ಹೊತ್ತ ಟ್ರಕ್‌ಗಳ ಯುಪಿಎ ಅಧ್ಯಕ್ಷೆ ಮತ್ತು ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿ ಅವರ 10 ಜನಪಥ್ ನಿವಾಸಕ್ಕೆ ಸಾಗಿಸಿರುವ ಬಗ್ಗೆ ವರದಿಯಾಗಿದೆ.