dtvkannada

'; } else { echo "Sorry! You are Blocked from seeing the Ads"; } ?>

ಬಂಟ್ವಾಳ : ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಭಾಗವಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಅವರು ಬೃಹತ್ ಕಾಲ್ನಡಿಗೆಯ ಜಾಥಾ ಮೂಲಕ ನಾಮಪತ್ರ ಸಲ್ಲಿಸಿದರು.

ಕಾಲ್ನಡಿಗೆ ಜಾಥಾ ಕ್ಕೂ ಮುನ್ನ ಮಾಧ್ಯಮದವರ ಸಮ್ಮುಖದಲ್ಲಿ ಎಸ್ ಡಿ ಪಿ ಐ ಬಯಸಿರುವ ‘ಜನಮಿಡಿತ ಪ್ರಣಾಳಿಕೆ’ ಯನ್ನು ಎಸ್ ಡಿ ಪಿ ಐ ಬಂಟ್ವಾಳ ಕ್ಷೇತ್ರದ ರಾಷ್ಟ್ರೀಯ ಚುನಾವಣಾ ವೀಕ್ಷಕರಾದ ವಿ ಎಮ್ ಫೈಝಲ್ ಬಿಡುಗಡೆಗೊಳಿದರು.

'; } else { echo "Sorry! You are Blocked from seeing the Ads"; } ?>

ಬಳಿಕ ಮಾತನಾಡಿದ ವಿ ಎಮ್ ಫೈಝಲ್ ‘ ಈ ಬಾರಿ ಬಂಟ್ವಾಳದಲ್ಲಿ ಇಲ್ಯಾಸ್ ತುಂಬೆ ಅವರನ್ನು ಜನತೆ ಗೆಲ್ಲಿಸುವ ಮೂಲಕ ಹೊಸ ಸಂಚಲನವನ್ನು ಸೃಷ್ಟಿ ಮಾಡಬೇಕಾಗಿದೆ. ಇಲ್ಲಿ ಅರಾಜಕತೆಯನ್ನು ಸೃಷ್ಟಿ ಮಾಡುವ ಬಿಜೆಪಿ ಮತ್ತು ನಕಲಿ ಜಾತ್ಯಾತೀತರೆನ್ನುವ ಕಾಂಗ್ರೆಸ್,ಜೆಡಿಎಸ್ ಪಕ್ಷಗಳಿಗೆ ಇಲ್ಲಿನ ಜನತೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಹೇಳಿದರು.

ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ್ದ ಉಳ್ಳಾಲ ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಮಾತನಾಡಿ ‘ ಇಲ್ಲಿ ಈ ಹಿಂದೆ ಆಳಿದ ಎರಡೂ ಪಕ್ಷಗಳ ತಾರತಮ್ಯದ ರಾಜಕಾರಣಕ್ಕೆ ಬೇಸತ್ತ ಬಂಟ್ವಾಳದ ಜನತೆ ಪರ್ಯಾಯ ಪಕ್ಷವನ್ನಾಗಿ ಎಸ್ ಡಿ ಪಿ ಐ ಯನ್ನು ಆರಿಸಲಿದ್ದಾರೆ ಎಂಬ ಭರವಸೆ ನನ್ನಲ್ಲಿದೆ ಎಂದಿದ್ದಾರೆ.

'; } else { echo "Sorry! You are Blocked from seeing the Ads"; } ?>

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿ ಇಲ್ಯಾಸ್ ತುಂಬೆ ಮಾತನಾಡಿ ‘ ಬಂಟ್ವಾಳದಲ್ಲಿ ರಾಜಕೀಯ ಧೋರಣೆಯಿಂದ ಕೂಡಿರುವ ಅಳುಕನ್ನು ಶುದ್ಧಿಗೊಳಿಸಲು ಎಸ್ ಡಿ ಪಿ ಐ ಸನ್ನದ್ಧವಾಗಿದೆ. ನಿಮ್ಮೆಲ್ಲಾ ಆಶಿರ್ವಾದದಿಂದ ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ. ನನ್ನನ್ನು ಹರಸಿ ಗೆಲ್ಲಿಸಿ. ನಾನು ಗೆದ್ದರೂ ಸೋತರೂ ಸದಾ ನಿಮ್ಮೊಂದಿಗೆ ಜನಸೇವೆಯಲ್ಲಿ ತೊಡಗಿರುತ್ತೇನೆ ಎಂದು ನೆರೆದಿರುವ ಮತದಾರರನ್ನುದ್ದೇಶಿಸಿ ಮಾತನಾಡಿದರು.

ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ್ದ ಎಸ್ ಡಿ ಪಿ ಐ ರಾಜ್ಯ ಸಮಿತಿ ಸದಸ್ಯ ಅಡ್ವಕೇಟ್ ಮಜೀದ್ ಖಾನ್ ‘ ಬಂಟ್ವಾಳ ಕ್ಷೇತ್ರವನ್ನಿ ಇಡೀ ರಾಜ್ಯಕ್ಕೆ ಮಾದರಿಯಾಗುವ ತಾಲೂಕನ್ನಾಗಿ ಮಾಡಲು ಇಲ್ಯಾಸ್ ತುಂಬೆ ಅವರಿಗೆ ಮತ ನೀಡಿ. ಇಲ್ಲಿನ ಸಮಾನ ಮನಸ್ಕ ಜನರು ಒಮ್ಮತದ ತೀರ್ಮಾನ ಮಾಡವೇಕಾಗಿದೆ. ಎಸ್ ಡಿ ಪಿ ಐ ಗೆದ್ದರೆ ನಿಮ್ಮೊಂದಿಗೆ ನಿರೀಕ್ಷೆಗೂ ಮೀರಿ ಜನಸ್ಪಂದನೆ ನೀಡಲಿದೆ ಎಂದು ಹೇಳಿದರು.

ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದ ಬಳಿಕ ಕಾಲ್ನಡಿಗೆ ಜಾಥಾ ಕ್ಕೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಮಹಿಳೆಯರು, ವಯಸ್ಕರು, ಯುವಕರು ಸೇರಿ ಸಾವಿರಾರು ಜನರು ಸಾಕ್ಷಿಯಾದರು.

ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ನಾಯಕರಾದ ಅಕ್ಬರ್ ಅಲಿ ಪೊನ್ನೋಡಿ, ಎಸ್ ಡಿ ಪಿ ಐ ರಾಜ್ಯ ಸಮಿತಿ ಸದಸ್ಯೆ ಹಾಗೂ ಬಂಟ್ವಾಳ ಪುರಸಭಾ ಸಮಿತಿ ಸದಸ್ಯೆ ಝೀನತ್ ಬಂಟ್ವಾಳ, ರಾಜ್ಯ ನಾಯಕಿಯರುಗಳಾದ ಶಾಹಿದಾ, ನಸ್ರಿಯಾ, ಎಸ್ ಡಿ ಪಿ ಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಜಿಲ್ಲಾ ಸಮಿತಿ ಸದಸ್ಯರುಗಳಾದ ಅಶ್ರಫ್ ಅಡ್ಡೂರು,ಯೂಸುಫ್ ಆಲಡ್ಕ, ಶಾಹಿದಾ ತಸ್ನೀಮ್, ಎಸ್ ಡಿ ಪಿ ಐ ಬಂಟ್ವಾಳ ಕ್ಷೇತ್ರಾಧ್ಯಕ್ಷ ಮೂನಿಷ್ ಆಲಿ, ಎಸ್ ಡಿ ಪಿ ಐ ಬಂಟ್ವಾಳ ಕ್ಷೇತ್ರ ಚುನಾವಣಾ ಉಸ್ತುವಾರಿ ಶಾಹುಲ್ ಎಸ್ ಎಚ್, ಪಕ್ಷದ ಕ್ಷೇತ್ರ ಕಾರ್ಯದರ್ಶಿ ಕಲಂದರ್ ಪರ್ತಿಪಾಡಿ, ಕ್ಷೇತ್ರ ಉಪಾಧ್ಯಕ್ಷ ಅನ್ವರ್ ಬಡಕಬೈಲ್, ಕ್ಷೇತ್ರ ಸಮಿತಿ ಸದಸ್ಯೆ ಝಹನಾ, ಎಸ್ ಡಿ ಪಿ ಐ ಬೆಳ್ತಂಗಡಿ ಕ್ಷೇತ್ರ ಉಪಾಧ್ಯಕ್ಷ ಹನೀಫ್ ಪುಂಜಾಲಕಟ್ಟೆ, ಎಸ್ ಡಿ ಪಿ ಐ ನಾಯಕ ಇಕ್ಬಾಲ್ ಐ ಎಮ್ ಆರ್, ಬಂಟ್ವಾಳ ಪುರಸಭಾ ಸದಸ್ಯರುಗಳಾದ ಇದ್ರೀಸ್ ಪಿ ಜೆ, ಶಂಶಾದ್ ಗೂಡಿನಬಳಿ,ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಬೀನಾ ನಂದಾವರ, ಮತ್ತಿತರ ಪಂಚಾಯತ್ ಸದಸ್ಯರುಗಳು, ಕಾರ್ಯಕರ್ತರು, ಹಿತೈಷಿಗಳು, ಬೆಂಬಲಿಗರು ಉಪಸ್ಥಿತರಿದ್ದರು.

ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಅಶ್ರಫ್ ತಲಪಾಡಿ ಕಾರ್ಯಕ್ರಮವನ್ನು ನಿರೂಪಿಸಿ,ಧನ್ಯವಾದಗೈದರು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!