ಪುತ್ತೂರು: ಕಡಬದ ನೆಟ್ಟಣದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು ಗಂಭೀರ ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ.
ಹೆಚ್ಚಿನ ಮಂದಿಗಳನ್ನು ಹಾಸನ ಬೇಲೂರು ನಿವಾಸಿಗಳು ಎಂದು ತಿಳಿದು ಬಂದಿದ್ದು ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಬಂದವರಾಗಿದ್ದರು ಎಂದು ತಿಳಿದು ಬಂದಿದೆ.
ಇನ್ನು ಅಪಘಾತದಲ್ಲಿ ಗಾಯಗೊಂಡವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಆದರೆ ತುರ್ತು ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲು ಹಿಂದೇಟು ಹಾಕಿದ ಆಂಬ್ಯುಲೆನ್ಸ್ ಚಾಲಕನನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆಯು ನಡೆಯಿತು.
ಅದರಲ್ಲೂ ಸಣ್ಣ ಎರಡು ವಯಸ್ಸಿನ ಮಗು ಮತ್ತು ತಾಯಿ ಗಂಭೀರವಾಗಿದ್ದು ತನ್ನ ಪತಿಯೂ ಅಪಘಾತದಲ್ಲಿ ಮೃತಪಟ್ಟಿದ್ದು ಇದನ್ನರಿಯದ ಪತ್ನಿ ತನ್ನ ಪತಿಯನ್ನು ವಿಚಾರಿಸುತ್ತಿದ್ದ ಆ ದೃಶ್ಯ ಕಣ್ಣೀರು ತರಿಸುವಂತ್ತಿತ್ತು.
ಗಂಭೀರವಾಗಿ ಗಾಯಗೊಂಡವರನ್ನು 3 ಆಂಬ್ಯುಲೆನ್ಸ್ ಗಳ ಮೂಲಕ ಮಂಗಳೂರು ಆಸ್ಪತ್ರೆಗೆ ರವಾಣಿಸಿದ್ದು.
ಕೆಲವು ಗಾಯಾಳುಗಳಿಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಈ ಸಂದರ್ಭದಲ್ಲಿ ಪುತ್ತೂರು,ಪರ್ಲಡ್ಕ,ಸವಣೂರು ಮುಂತಾದ ಕಡೆಯ ಸಾಮಾಜಿಕ ಕಾರ್ಯಕರ್ತರು ಗಾಯಾಳುಗಳನ್ನು ಸಾಗಿಸಲು ನೆರವಾದರು. ಇನ್ನು ಹಾಸನ, ಸಕಲೇಶಪುರ, ಬೇಲೂರು ವ್ಯಾಪ್ತಿಯ ಗಾಯಳುಗಳ ಕುಟುಂಬಸ್ಥರ ಗುರುತು ಪತ್ತೆಗೆ ಮನವಿ ಮಾಡಲಾಗಿದೆ.ವೀಡಿಯೋ ನೋಡಿ 👇