ಮಂಗಳೂರು: ಸಜಿಪನಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ, ದೇಶದಲ್ಲೇ ಎಸ್ಡಿಪಿಐನ ಮೊದಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಎಸ್ಡಿಪಿಐ ದ.ಕ ಜಿಲ್ಲಾ ಮಾಜಿ ಕಾರ್ಯದರ್ಶಿಗಳೂ ಆಗಿದ್ದ ನಾಸಿರ್ ಸಜಿಪ ಇಂದು ಯು.ಟಿ ಖಾದರ್ ಸಮ್ಮುಖದಲ್ಲಿ ಮಂಗಳೂರಿನಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.

ಇನ್ನು ಮುಂದಿನ ವಾರ ನಡೆಯುವ ಕಾರ್ಯಕ್ರಮದಲ್ಲಿ ಇವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದು ಅದೇ ಸಮಯದಲ್ಲಿ ಎಸ್ಡಿಪಿಐ ನಿಂದ ಈ ಹಿಂದೆ ಲೋಕಸಭೆಗೆ ಸ್ಪರ್ಧಿಸಿದ್ದ, ಎಸ್ಡಿಪಿಐ ದ.ಕ ಜಿಲ್ಲಾ ಮಾಜಿ ಅಧ್ಯಕ್ಷರಾಗಿದ್ದ ಹನೀಫ್ ಖಾನ್ ಕೊಡಾಜೆ ಸಹ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆಂದು ವರದಿಯಾಗಿದೆ. ಇದೇ ವೇಳೆ ಇವರ ನೂರಾರು ಬೆಂಬಲಿಗರೂ,ಅಭಿಮಾನಿಗಳು ಸಹ ಎಸ್ಡಿಪಿಐ ತೊರೆದು ಕಾಂಗ್ರೆಸ್ ಸೇರಲಿದ್ದು ಇದೀಗ ಈ ಸೇರ್ಪಡೆಯಿಂದ ಎಸ್ಡಿಪಿಐ ಪಕ್ಷಕ್ಕೆ ಚುನಾವಣೆಗೂ ಮುನ್ನ ಇದೊಂದು ದೊಡ್ಡ ಹಿನ್ನಡೆ ಎಂದೇ ಜನ ಆಡಿಕೊಳ್ಳುತ್ತಾರೆ.

ಮಂಗಳೂರು ಹಾಗೂ ಬಂಟ್ವಾಳ ಕ್ಷೇತ್ರದಲ್ಲಿ ಈಗಾಗಲೇ ಹಲವಾರು ಮಂದಿ ಎಸ್ಡಿಪಿಐ ತೊರೆದು ಕಾಂಗ್ರೆಸ್ ಸೇರಿದ್ದು ಬೇರೆ ಪಕ್ಷಗಳಿಂದಲೂ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿರುವುದು ಕಾಂಗ್ರೆಸಿನ ದಿಟ್ಟ ಆಡಳಿತಕ್ಕೆ ಉದಾಹರಣೆ ಎಂದು ನಾಯಕರ ಅಭಿಪ್ರಾಯ.