dtvkannada

'; } else { echo "Sorry! You are Blocked from seeing the Ads"; } ?>

ಇದೇ ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ರಾಜಕೀಯ ನಾಯಕರು ಅಬ್ಬರ ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಮಧ್ಯೆ ವಿವಿಧ ಪಕ್ಷಗಳ ನಾಯಕರಿಗೆ ಗಾಳ ಹಾಕಿತ್ತಿದ್ದು, ಪಕ್ಷಾಂತರಗಳು ಸಹ ಜೋರಾಗಿವೆ. ಅದರಂತೆ ಕನಕಪುರದಲ್ಲಿ ಈ ಹಿಂದೆ ತಮ್ಮ ವಿರುದ್ಧ ಸೆಣಸಿದ್ದವರನ್ನೇ ಕಾಂಗ್ರೆಸ್​ಗೆ ಸೆಳೆಯುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಕಳೆದ ವಾರ ಡಿಕೆ ಶಿವಕುಮಾರ್​ ಆಪ್ತರಿಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಗಾಳ ಹಾಕಿದ್ದರು. ಪ್ರಭಾಕರ್ ರೆಡ್ಡಿ ಬದಲು ಡಿಕೆ ಶಿವಕುಮಾರ್​ ಆಪ್ತೆ ಸುಷ್ಮಾ ರಾಜಗೋಪಾಲ್ ರೆಡ್ಡಿ ಅವರಿಗೆ ಕುಮಾರಸ್ವಾಮಿ ಟಿಕೆಟ್​ ನೀಡಿದ್ದರು. ಇದೀಗ ಡಿಕೆ ಬ್ರದರ್ಸ್ , ಕುಮಾರಸ್ವಾಮಿ ಆಪ್ತರನ್ನು ಕಾಂಗ್ರೆಸ್​​ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನಾರಾಯಣಗೌಡ ಹಾಗೂ ಪ್ರಭಾಕರ್ ರೆಡ್ಡಿ ಅವರು ಜೆಡಿಎಸ್​ ತೊರೆದು ಇಂದು(ಏಪ್ರಿಲ್ 27) ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ನಾರಾಯಣಗೌಡ ಅವರು ಕಳೆದ ಬಾರಿ ಅಂದರೆ 2018ರಲ್ಲಿ ಕನಕಪುರ ಜೆಡಿಎಸ್ ಅಭ್ಯರ್ಥಿಯಾಗಿ ಡಿಕೆ ಶಿವಕುಮಾರ್​ ವಿರುದ್ಧ ಸ್ಪರ್ಧಿಸಿದ್ದರು. ಇದೀಗ ಅವರನ್ನು ಡಿಕೆ ಶಿವಕುಮಾರ್​ ಕಾಂಗ್ರೆಸ್​ಗೆ​ ಸೇರಿಕೊಂಡಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಜೆಡಿಎಸ್​ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಭಾಕರ್ ರೆಡ್ಡಿ ಅವರು ಸಹ ಇಂದು ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.

'; } else { echo "Sorry! You are Blocked from seeing the Ads"; } ?>

ಈ ಬಾರಿ ಡಿಕೆ ಶಿವಕುಮಾರ್​ ಅವರಿಗೆ ಪ್ರಬಲ ಪೈಪೋಟಿ ಕೊಡಲೇಬೇಕೆಂದು ಸಚಿವ ಆರ್ ಅಶೋಕ್​ ಅವರನ್ನು ಕನಕಪುರದಲ್ಲಿ ಕಣಕ್ಕಿಳಿಸಿದೆ. ಇದರ ಮಧ್ಯೆ ಈ ಹಿಂದೆ ತಮ್ಮ ವಿರುದ್ಧ ಸ್ಪರ್ಧಿಸಿ 47,643 ಮತಗಳನ್ನು ಪಡೆದುಕೊಂಡಿದ್ದ ನಾರಾಯಣಗೌಡ ಅವರು ಕಾಂಗ್ರೆಸ್​ ಸೇರಿದ್ದರಿಂದ ಡಿಕೆ ಶಿವಕುಮಾರ್ ಅವರಿಗೆ ಆನೆ ಬಲಬಂದಂತಾಗಿದೆ.

ರಾಜ್ಯದ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರನ್ನು ತವರು ಕ್ಷೇತ್ರದಲ್ಲಿ ಕಟ್ಟಿಹಾಕಬಲ್ಲ ಸಮರ್ಥ ಎದುರಾಳಿ ಪ್ರತಿಪಕ್ಷಗಳಿಗೆ ಇನ್ನೂ ಸಿಕ್ಕಿಲ್ಲ. 2008 ರ ಚುನಾವಣೆಯಲ್ಲಿ ಶಿವಕುಮಾರ್‌ಗೆ ಸೋಲಿನ ಭೀತಿ ಹುಟ್ಟಿಸಿ ಕೇವಲ 8 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದ ಡಿ.ಎಂ. ವಿಶ್ವನಾಥ್‌ ಡಿಕೆಶಿ ಪಾಳಯ ಸೇರಿದ್ದರು. ಕಳೆದ ಬಾರಿಯ ಜೆಡಿಎಸ್​ ಪರಾಜಿತ ಅಭ್ಯರ್ಥಿ ನಾರಾಯಣ ಗೌಡ ಸಹ ಇದೀಗ ಡಿಕೆ ಶಿವಕುಮಾರ್​ಗೆ ಜೈ ಎಂದಿದ್ದು, ಈ ಮೂಲಕ ಕನಕಪುರದಲ್ಲಿ ತಮ್ಮ ಹಾದಿಯನ್ನು ಮತ್ತಷ್ಟು ಸುಗಮ ಮಾಡಿಕೊಂಡಿದ್ದಾರೆ.

'; } else { echo "Sorry! You are Blocked from seeing the Ads"; } ?>

ಕನಕಪುರ ಕ್ಷೇತ್ರದ ಜಾತಿವಾರು ಲೆಕ್ಕಚಾರ ಹೀಗಿದೆ:
ಒಕ್ಕಲಿಗ- ಒಂದು ಲಕ್ಷದ ಹತ್ತು ಸಾವಿರ, ಎಸ್ ಸಿ-ಎಸ್ ಟಿ- 45 ಸಾವಿರ, ಮುಸ್ಲಿಂಮರು 15 ಸಾವಿರ, ಲಿಂಗಾಯತ- 10 ಸಾವಿರ, ಕುರುಬ- 6 ಸಾವಿರ, ಕ್ರಿಶ್ಚಿಯನ್- 4 ಸಾವಿರ, ಲಂಬಾಣಿ- 5 ಸಾವಿರ, ಕುಂಬಾರ 4 ಸಾವಿರ, ಬಣಜಿಗ- 3 ಸಾವಿರ, ಇತರೆ- 20 ಸಾವಿರ ಮತದಾರರು ಇದ್ದಾರೆ

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!