ಪುತ್ತೂರು: ಉ.ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುತ್ತೂರಿಗೆ ಆಗಮಿಸಿದ್ದು ಕೇವಲ ಮೂರು ನಿಮಿಷಗಳ ಭಾಷಣದೊಂದಿಗೆ ತನ್ನ ಕಾರ್ಯಕ್ರಮಕ್ಕೆ ವಿರಾಮ ಹಾಡಿದ್ದಾರೆ.
ಮೊಟ್ಟೆತ್ತಡ್ಕದಲ್ಲಿ ಹೆಲಿಕಾಪ್ಟರ್ ಮೂಲಕ ಬಂದು ಲ್ಯಾಂಡ್ ಆದ ಯೋಗಿಯವರು ತದನಂತರ ಪುತ್ತೂರಿನ ಹತ್ತೂರ ಓಡೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದ ತೆರೆದ ವಾಹನದ ಮೂಲಕ ಸಾವಿರಾರು ಮಂದಿ ಕಾರ್ಯಕರ್ತರ ಜತೆಗೂಡಿ ತೆರೆದ ವಾಹನದಲ್ಲಿ ರೋಡ್ ಶೋದಲ್ಲಿ ಭಾಗವಹಿಸಿದ್ದರು.
ತದನಂತರ ಕಿಲ್ಲೆ ಮೈದಾನದಲ್ಲಿ ಕೇವಲ ಮೂರರಿಂದ ನಾಲ್ಕು ನಿಮಿಷಗಳ ಕಾಲ ಭಾಷಣಗೈದು ತಮ್ಮ ಪ್ರವಾಸವನ್ನು ಮುಂದುವರಿಸಿದ್ದಾರೆ.ಈ ಒಂದು ಕಾರ್ಯಕ್ರಮದಲ್ಲಿ ಹಲವಾರು ರಾಜ್ಯ,ಜಿಲ್ಲಾ ಬಿಜೆಪಿ ನಾಯಕರುಗಳಾದ ನಳಿನ್ ಕುಮಾರ್ ಕಟೀಲ್, ಪ್ರಭಾಕರ ಭಟ್ ಕಲ್ಲಡ್ಕ, ಸಂಜೀವ ಮಠಂದೂರು, ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮುಂತಾದ ಹಲವು ನಾಯಕ,ನಾಯಕಿಯರು ಭಾಗವಹಿಸಿದ್ದರು. ರೋಡ್ ಶೋ ಮತ್ತು ಯೋಗಿಯವರು ಪುತ್ತೂರಿಗೆ ಆಗಮಿಸುವ ವಿಹಂಗಮನೋಟದ ವೀಡಿಯೋ ವೀಕ್ಷಿಸಿ 👇👇