';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬಂಟ್ವಾಳ: ಮನೆಯವರು ಪ್ರೀತಿ ನಿರಾಕರಿಸಿದ ಕಾರಣ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಬಂಟ್ವಾಳ ಲೊರೆಟ್ಟೊ ಪದವು ಬರೆಕಾಡು ನಿವಾಸಿ ನಿಯಾನ್ (22) ಮತ್ತು ಕಂಕನಾಡಿ ನಿವಾಸಿ ಸಫ್ರೀನಾ(22) ಮೃತಪಟ್ಟವರು.
ಮನೆಯವರು ಪ್ರೀತಿ ನಿರಾಕರಿಸಿದರು ಎಂಬ ಕಾರಣಕ್ಕೆ ಮೇ.07 ರಂದು ನಿಯಾನ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಇಂದು ಬೆಳಗ್ಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.
ಪ್ರಿಯಕರ ಮೃತಪಟ್ಟ ವಿಷಯ ತಿಳಿದ ಪ್ರಿಯತಮೆ ಸಫ್ರೀನಾ, ಇಂದು ಸಂಜೆ ವೇಳೆ ಕಂಕನಾಡಿಯ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.