dtvkannada

'; } else { echo "Sorry! You are Blocked from seeing the Ads"; } ?>

ಬೆಂಗಳೂರು: ಕರ್ನಾಟಕ ಅಸೆಂಬ್ಲಿಗೆ ಮೇ 10 ರಂದು ನಡೆದಿದ್ದ ಮಹಾ ಚುನಾವಣೆಯ ಫಲಿತಾಂಶ ಇದೀಗ ನಿಧಾನಕ್ಕೆ ಒಂದೊಂದಾಗಿ ಹೊರಬೀಳುತ್ತಿದೆ. ಸದ್ಯಕ್ಕೆ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲವಾದರೂ ಬೆಳೆಗ್ಗೆ 10 ಗಂಟೆ ವೇಳೆಗೆ ಮೊದಲ ಚಿತ್ರಣ ಸಿಗುವ ಸಾಧ್ಯತೆಯಿದೆ.

ಈ ಹಿಂದೆ ಮತ ಎಣಿಕೆ ಕಾರ್ಯವು ಅಂಚೆ ಮತಗಳ ಎಣಿಕೆ ಮೂಲಕ ಆರಂಭವಾಗುತ್ತಿತ್ತು. ಹಾಗಾಗಿ 9 ಗಂಟೆ ವೇಳೆಗೆ ಮತದಾರರ ನಾಡಿ ಮಿಡಿತಕ್ಕೆ ಒಂದಷ್ಟು ಸ್ಪಷ್ಟ ದಿಕ್ಕು ಸಿಗುತ್ತಿತ್ತು. ಅದಾದ ಮೇಲೆ ಇವಿಎಂ ಮತಯಂತ್ರಗಳಲ್ಲಿನ ಮತಗಳ ಎಣಿಕೆ ಶುರುವಾಗುತ್ತಿತ್ತು. ಆದರೆ ಈ ಬಾರಿ ವೃದ್ಧರೂ ಸಹ ಮತದಾನದಲ್ಲಿ ಪಾಲ್ಗೊಳ್ಳಲಿ ಎಂಬ ಆಶಯದೊಂದಿಗೆ ಚುನಾವಣೆ ಆಯೋಗವು ಅಂತಹವರಿಗೆ ಅನುಕೂಲವಾಗುವಂತೆ ಮಹಾ ಮತದಾನಕ್ಕೂ ಮುನ್ನವೇ ಅವರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಮೊದಲು ಅಂಚೆ ಮತ ಯಂತ್ರ ಆ ಬಳಿಕ, ಹಿರಿಯರ ಮತ ಎಣಿಕೆ ಕಾರ್ಯ ನಡೆಯಲಿದೆ. ಸದ್ಯಕ್ಕೆ ಅಂಚೆ ಮತ ಎಣಿಕೆ ಬಹುತೇಕ ಮುಕ್ತಾಯವಾಗಿದ್ದು, ಹಿರಿಯರ ಮತ ಎಣಿಕೆ ಶುರುವಾಗಬೇಕಿದೆ. ಅದಾದ ಮೇಲಷ್ಟೆ ಇವಿಎಂ ಮತ ಯಂತ್ರ ಎಣಿಕೆ ಶುರುವಾಗಲಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!