';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಚಿಕ್ಕಬಳ್ಳಾಪುರ : ರಾಜ್ಯವನ್ನೇ ಗಮನ ಸೆಳೆದ ಚಿಕ್ಕಬಳ್ಳಾಪುರ ನೂತನ ಶಾಸಕ ಪ್ರದೀಪ್ ಈಶ್ವರ್ ರವರ ಸಾಕು ತಾಯಿ ವಯೋಸಹಜ ಕಾಯಿಲೆಯಿಂದ ಇಂದು ಮೃತಪಟ್ಟಿದ್ದಾರೆ.
ಶಾಸಕರ ಸಾಕು ತಾಯಿ ರತ್ನಮ್ಮ ರವರಿಗೆ 72 ವರ್ಷ ವಯಸ್ಸಾಗಿದ್ದು ವಯೋ ಸಹಜ ಕಾಯಿಲೆಯಿಂದ ಪೇರೆಂಸಂದ್ರ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ.
ಇಂದು ಮುಖ್ಯಮಂತ್ರಿ ಮತ್ತು ಸಚಿವರ ಪದಗ್ರಹಣ ನಡೆಯಲಿದ್ದು ಈ ನಿಟ್ಟಿನಲ್ಲಿ ಪ್ರದೀಪ್ ರವರು ಬೆಂಗಳೂರುನಲ್ಲಿದ್ದು ತಾಯಿಯ ಅಂತ್ಯಕ್ರಿಯೆಗೆ ಇಂದು ಪ್ರೆಸೆಂದ್ರ ಗ್ರಾಮಕ್ಕೆ ತೆರಳಲಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ತನ್ನ ತಂದೆ ತಾಯಿಯನ್ನು ಕಳೆದುಕೊಂಡ ದುಃಖಕರ ಸಂಗತಿಗಳನ್ನು ಹೇಳಿ ಕಣ್ಣೀರು ಹಾಕಿದ್ದರು.
ಇದು ಚಿಕ್ಕಬಳ್ಳಾಪುರ ಜನತೆಗೆ ಬಾರೀ ನೋವು ತಂದಿತ್ತು.
ಇದೀಗ ತಂದೆ ತಾಯಿಯಿಲ್ಲದ ಬೆನ್ನಲ್ಲೇ ಸಾಕು ತಾಯಿಯ ಮರಣ ಈಶ್ವರ್ ಪ್ರದೀಪ್ ಗೆ ದೊಡ್ಡ ಆಘಾತವೇ ಸರಿ.