dtvkannada

'; } else { echo "Sorry! You are Blocked from seeing the Ads"; } ?>

ಹೈದರಾಬಾದ್: ಪಾರ್ಕಿಂಗ್‌ ಏರಿಯಾದಲ್ಲಿ ಮಲಗಿದ್ದ 3 ವರ್ಷದ ಮಗುವಿನ ಮೇಲೆ ಎಸ್ ಯುವಿ ಕಾರು ಹರಿದು ಮಗು ಮೃತಪಟ್ಟಿರುವ ಘಟನೆ ಹೈದರಬಾದ್‌ ನಲ್ಲಿ ನಡೆದಿರುವುದು ವರದಿಯಾಗಿದೆ.

ಕಲಬುರಗಿಯ ಶಹಬಾದ್‌ ಮೂಲದ ಮಹಿಳೆಯಾಗಿರುವ ಕವಿತಾ ತನ್ನ ಎರಡು ಮಕ್ಕಳೊಂದಿಗೆ ಕೆಲಸ ಹುಡುಕಿಕೊಂಡು ಹೈದರಬಾದ್‌ ಗೆ ಬಂದಿದ್ದಾರೆ. ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಹಯತ್‌ನಗರದ ಲೆಕ್ಚರ್ಸ್‌ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಕೆಲಸ ಮಾಡಲು ತೆರಳಿದ್ದಾರೆ. ಮಧ್ಯಾಹ್ನ ಊಟವಾದ ಬಳಿಕ ತನ್ನ 3 ವರ್ಷದ ಮಗು ಲಕ್ಷ್ಮೀಯನ್ನು ಸೆಕೆಯೆಂದು ಅಪಾರ್ಟ್‌ ಮೆಂಟ್‌ ನ ಬೇಸ್‌ ಮೆಂಟ್‌ ನಲ್ಲಿ ಮಲಗಿಸಿದ್ದಾರೆ.

ಪಾರ್ಕಿಂಗ್‌ ಏರಿಯಾದಲ್ಲಿ ಮಗು ಮಲಗಿದ್ದು ಈ ವೇಳೆ ಎಸ್ ಯುವಿ ಕಾರು ಪಾರ್ಕ್‌ ಮಾಡುವ ನಿಟ್ಟಿನಲ್ಲಿ ಬಂದು ಮಲಗಿದ್ದ ಮಗುವಿನ ಮೇಲೆ ಹರಿದು ಮತ್ತೆ ಹಿಂದಕ್ಕೆ ಹೋಗಿದೆ. ತಲೆಗೆ ತೀವ್ರತರದ ಏಟಾಗಿ ಮಗು ಸ್ಥಳದಲ್ಲೇ ಮೃತಪಟ್ಟಿದೆ. ವೀಡಿಯೋ ವೀಕ್ಷಿಸಿ 👇👇

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

ಘಟನೆ ಸಂಬಂಧ ಮಗುವಿನ ತಾಯಿ ಕವಿತಾ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿಯಲ್ಲಿ ಘಟನೆಯ ವಿಡಿಯೋ ರೆಕಾರ್ಡ್‌ ಆಗಿದೆ. ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

You missed

error: Content is protected !!