ಪುತ್ತೂರು: ಕಳೆದ ವರ್ಷ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಅವರು ಪತ್ನಿಗೆ ಬಿಜೆಪಿ ಸರ್ಕಾರದಿಂದ ಮುಖ್ಯಮಂತ್ರಿಯ ಅಧಿಕಾರದಲ್ಲಿ ವಿಶೇಷ ದರ್ಜೆಯ ಅಡಿಯಲ್ಲಿ ನೀಡಿದ್ದ ಸರ್ಕಾರಿ ಕೆಲಸದ ಸಮಯದ ಅವಧಿ ಮುಗಿದಿದ್ದು ಇದೀಗ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಬಿಜೆಪಿ ಸರ್ಕಾರವು ಅಂದು ತಮ್ಮ ಸರಕಾರ ಇರುವ ತನಕ ಈ ಹುದ್ದೆ ಮುಂದುವರಿಯಲಿದ್ದು ತದನಂತರ ಆದೇಶ ಪ್ರಕಾರದಂತೆ ನಡೆಯಲು ಸೂಚನೆಯನ್ನು ನೀಡಿತ್ತು ಎನ್ನಲಾಗಿದೆ.ಈ ಒಂದು ಯಡವಟ್ಟಿನಿಂದ ನೂತನರವರು ಉದ್ಯೋಗ ಕಳೆದುಕೊಳ್ಳುವಂತಾಗಿದ್ದು ಅಂದು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರು ನೂತನರವರಿಗೆ ಸರ್ಕಾರದಲ್ಲಿ ಶಾಶ್ವತವಾಗಿ ಉದ್ಯೋಗ ನೀಡುವಲ್ಲಿ ವಿಫಲವಾಗಿರುವುದು ಕಂಡು ಬಂದಿದೆ.
ಇದೀಗ ಅದರ ಅವಧಿ ಮುಗಿದಿದ್ದು ಪ್ರವೀಣ್ ನೆಟ್ಟಾರ್ ರವರ ಪತ್ನಿ ನೂತನ ಕುಮಾರಿ ಕೆಲಸದಿಂದ ವಜಾ ಗೊಳಿಸಿ ಆದೇಶ ಹೊರಡಿಸಿದೆ.
ಪ್ರವೀಣ್ ನೆಟ್ಟಾರ್ ಅವರ ಪತ್ನಿ ಕುಮಾರಿ ಅವರಿಗೆ ಮುಖ್ಯಮಂತ್ರಿ ಸಚಿವಾಲಯದಲ್ಲಿನ ಗ್ರೂಪ್ ಸಿ ಹುದ್ದೆಗೆ ನೇಮಕಗೊಳಿಸಿ ನಿರ್ಗಮಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022ರ ಸೆ. 29ರಂದು ಆದೇಶ ಹೊರಡಿಸಿದ್ದರು.ದಕ್ಷಿಣ ಕನ್ನಡ ಜಿಲ್ಲಾಡಳಿತ ಕಚೇರಿಯ ಪ್ರಾಕೃತಿಕ ವಿಕೋಪ ವಿಭಾಗದಲ್ಲಿ ನೂತನ ಕಾರ್ಯ ನಿರ್ವಹಿಸುತ್ತಿದ್ದರು.