dtvkannada

ವ್ಯಕ್ತಿಯೊಬ್ಬ 25 ಬಾರಿ ಚಾಕುವಿನಿಂದ ಇರಿದು ತನ್ನ ಮಗಳನ್ನು ಹತ್ಯೆ ಮಾಡಿರುವ ವಿಚಿತ್ರ ಘಟನೆ ಸೂರತ್​ನಲ್ಲಿ ನಡೆದಿದೆ. ಕೌಟುಂಬಿಕ ಕಲಹದಲ್ಲಿ ಕೋಪಗೊಂಡ ವ್ಯಕ್ತಿ ಮಗಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ, ಪತ್ನಿಯ ಮೇಲೂ ಹಲ್ಲೆ ನಡೆಸಿದ್ದಾನೆ.

ಮೇ 18 ರ ರಾತ್ರಿ ಸೂರತ್‌ನ ಕಡೋದರಾ ಪ್ರದೇಶದಲ್ಲಿ ನಡೆದ ಭೀಕರ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ರಾಮಾನುಜ ಎಂದು ಗುರುತಿಸಲಾದ ಆರೋಪಿ ತನ್ನ ಕುಟುಂಬದೊಂದಿಗೆ ಸೂರತ್‌ನ ಸತ್ಯ ನಗರ ಸೊಸೈಟಿಯಲ್ಲಿ ಬಾಡಿಗೆ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದ. ತನಿಖಾಧಿಕಾರಿಗಳು ಮಾಹಿತಿ ನೀಡಿದಂತೆ, ತಮ್ಮ ಮಗಳು ಟೆರೇಸ್ ಮೇಲೆ ಮಲಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಪತ್ನಿಯೊಂದಿಗೆ ನಡೆದ ಸಣ್ಣ ಜಗಳದಲ್ಲಿ ಆರೋಪಿಯು ತಾಳ್ಮೆ ಕಳೆದುಕೊಂಡಿದ್ದಾನೆ. ನಂತರ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿರುವಂತೆ, ಸರಿಸುಮಾರು ರಾತ್ರಿ 11.20ಕ್ಕೆ, ರಾಮಾನುಜ ಮೊದಲು ತನ್ನ ಮಕ್ಕಳ ಮುಂದೆ ತನ್ನ ಹೆಂಡತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಮಹಿಳೆ ಗಾಯಗೊಂಡಿರುವಾಗ, ಆಕೆಯ ಮಕ್ಕಳು ತಂದೆಯನ್ನು ಹಿಡಿಯಲು ಮುಂದಾಗಿ, ಕೋಪ ನಿಯಂತ್ರಿಸಲು ಪ್ರಯತ್ನಿಸಿದರು. ಆಗ ಕೋಪಗೊಂಡ ವ್ಯಕ್ತಿ ತನ್ನ ಮಗಳನ್ನು ಹಿಡಿದುಕೊಂಡು 25 ಬಾರಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ.

ಆಕೆ ತಪ್ಪಿಸಿಕೊಂಡು ಕೋಣೆಗೆ ಓಡಿ ಹೋಗಿದ್ದಾಳೆ, ಆದರೂ ಆತ ಬಿಡದೆ ಅಲ್ಲಿಯೂ ಹೋಗಿ ಹಲವು ಬಾರಿ ಚಾಕುವುನಿಂದ ಇರಿದಿದ್ದ, ಬಳಿಕ ಆಕೆ ಸಾವನ್ನಪ್ಪಿದ್ದಾಳೆ.

ತನ್ನ ಮಗಳ ಮೇಲೆ ಮಾರಣಾಂತಿಕ ಹಲ್ಲೆಯ ನಂತರವೂ, ಆರೋಪಿ ರಾಮಾನುಜನು ತನ್ನ ಹೆಂಡತಿಗೆ ಹಲ್ಲೆಗೆ ಮುಂದಾಗಿದ್ದಾನೆ. ಹೆಂಡತಿ ಆತನಿಂದ ತಪ್ಪಿಸಲು ಟೆರೇಸ್​ ಹತ್ತಿದ್ದಳು.

ಈ ಬಗ್ಗೆ ಸೂರತ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ಕ್ರೂರಿ ತಂದೆಯನ್ನು ಬಂಧಿಸಿದ್ದಾರೆೆ. ಕೊಲೆಗೆ ಬಳಸಿದ್ದ ಆಯುಧವನ್ನೂ ವಶಪಡಿಸಿಕೊಂಡಿದ್ದಾರೆ. ಆತನ ವಿರುದ್ಧ ಕೊಲೆ, ಕೊಲೆಯತ್ನ ಸೇರಿದಂತೆ ಐಪಿಸಿಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!