dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಕಳೆದ ಎಂಟು ತಿಂಗಳ ಹಿಂದೆ ಪುತ್ತೂರಿನ ಹೃದಯ ಭಾಗದಲ್ಲಿ ‌ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಅಂಗಡಿಯೊಂದರಿಂದ ಬರೋಬ್ಬರಿ 15 ಲಕ್ಷ ನಗದು ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಾದ ದಾವಣಗೆರೆ ದೇವರಾಜ ಅರಸ್ ಬಡವಾಣೆಯ ಸಮೀರ್(ಕಪ್ಪ) ಹಾಸನ ಶಂಕರಿಪುರಂನ ಚಂದ್ರಶೇಖರ್ (ಚಂದು) ಎಂದು ತಿಳಿದು ಬಂದಿದೆ.

ಪುತ್ತೂರಿನ ಮಾಯಿದೆ ದೇವುಸ್ ಚರ್ಚ್ ಸಮೀಪವಿರುವ ಪ್ರಕಾಶ್ ಫೂಟ್‌ವೇರ್‌ನಿಂದ ಕಳೆದ ಸೆ.೧೬,೨೦೨೨ ರಂದು ಅಂಗಡಿಗೆ ನುಗ್ಗಿ ಸುಮಾರು 15 ಲಕ್ಷರೂ ಕಳ್ಳತನ ಗೈದು ಪರಾರಿಯಾಗಿದ್ದು ಈ ಬಗ್ಗೆ ಅಂಗಡಿ ಮಾಲೀಕ ಸಮೀರ್ ಪುತ್ತೂರು ನಗರ ಠಾಣೆಯಲ್ಲಿ ಕೇಸು ನೀಡಿದ್ದು ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದರು.

ಪ್ರಕರಣದ ಬೆಂಬೆತ್ತಿದ ಪೊಲೀಸರು ಖತರ್ನಾಕ್ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!