ಬೆಂಗಳೂರು: ತಾಯಿಯ ಪಾದದಲ್ಲಿ ಸ್ವರ್ಗವಿದೆ, ತಾಯಿಯೇ ದೇವರು ಎಂಬೆಲ್ಲಾ ಮಾತಿದೆ. ಆದ್ರೆ, ಬೆಂಗಳೂರಿನಲ್ಲಿ ಕ್ರೂರಿ ಮಗಳೊಬ್ಬಳು ತನ್ನ ಹೆತ್ತ ತಾಯಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ಪ್ಯಾಕ್ ಮಾಡಿ ನೇರವಾಗಿ ಪೊಲೀಸ್ ಠಾಣೆಗೆ ತಂದಿದ್ದಾಳೆ. ಮಗಳು ಸೇನಾಲಿ ಸೇನ್ ತನ್ನ ತಾಯಿ ಬೀವಾಪಾಲ್ (70) ಎಂಬಾಕೆಯನ್ನು ಕೊಲೆ ಮಾಡಿ, ಸೂಟ್ಕೇಸ್ನಲ್ಲಿ ತಂದೆಯ ಫೋಟೋ ಜತೆಗೆ ತಾಯಿ ಶವವಿಟ್ಟು, ಮೈಕೊಲೇಔಟ್ ಪೊಲೀಸ್ ಠಾಣೆಗೆ ಹೊತ್ತು ತಂದು ಶರಣಾಗಿದ್ದಾಳೆ. ಈ ಪ್ರಕರಣದ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲಿಗೆ ಬಂದಿದೆ. ಇನ್ನು ಆರೋಪಿ ಸೆನಾಲಿ ಸೇನ್ ಮಾತಿಗೆ ಪೊಲೀಸರೇ ಶಾಕ್ ಆಗಿದ್ದಾರೆ.
ಸೋನಾಲಿ ಸೇನ್ ಕುಟುಂಬ ಕೊಲ್ಕತ್ತಾ (Kolkata) ಮೂಲದವರಾಗಿದ್ದು, ಕಳೆದ 6 ವರ್ಷಗಳಿಂದ ನಗರದ ಬಿಳೆಕಳ್ಳಿಯ ಎನ್ಎಸ್ ಆರ್ ಗ್ರೀನ್ ಅಪಾರ್ಟ್ಮೆಂಟ್ನ 106 ಫ್ಲಾಟ್ನಲ್ಲಿ ವಾಸವಾಗಿದ್ದರು. ಫ್ಲಾಟ್ನಲ್ಲಿ ಸೋನಾಲಿ ಸೇನ್, ಸೋನಾಲಿ ಸೇನ್ ಪತಿ, ಮಗ, ಅತ್ತೆ ಮತ್ತು ಸೋನಾಲಿ ಸೇನ್ ತಾಯಿ ವಾಸವಾಗಿದ್ದರು.
ನಿನ್ನೆ (ಜೂ.12) ಬೆಳಿಗ್ಗೆ 7 ಗಂಟೆಗೆ ಸೋನಾಲಿ ಸೇನ್ ತಾಯಿಗೆ ನಿದ್ದೆ ಮಾತ್ರೆ ನೀಡಿದ್ದರು. ಬಳಿಕ ಬೆಳಿಗ್ಗೆ 11 ಗಂಟೆಗೆ ತಾಯಿ ಹೊಟ್ಟೆ ನೊವ್ವು ಎಂದಿದ್ದರು. ಈ ವೇಳೆ ಸೋನಾಲಿ ಸೇನ್ ತಾಯಿದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಸೂಟ್ಕೇಸ್ನಲ್ಲಿ ತಾಯಿಯ ಶವ ಹಾಕಿಕೊಂಡು ಮಧ್ಯಾಹ್ನ 1 ಗಂಟೆಗೆ ಊಬರ್ ಕ್ಯಾಬ್ನಲ್ಲಿ ಠಾಣೆಗೆ ಬಂದಿದ್ದರು.
ಸೂಟ್ಕೇಸ್ನಲ್ಲಿ ಮೃತದೇಹ ತಂದದ್ದನ್ನು ಕಂಡ ಪೊಲೀಸರು ಶಾಕ್ ಆಗಿದ್ದು, ಕೂಡಲೆ ಆರೋಪಿ ಸೋನಾಲಿ ಸೇನ್ ಅವರನ್ನು ವಶಕ್ಕೆ ಪಡೆದರು. ಬಳಿಕ ಸೋನಾಲಿ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅಚ್ಚರಿ ಸಂಗತಿಗಳನ್ನು ಬಾಯಿ ಬಿಟ್ಟಿದ್ದಾರೆ.
ಪೊಲೀಸರು ಶಾಕ್!:
ತಾಯಿಯೇ ಮಗಳ ಬಳಿ ನಿದ್ರೆ ಮಾತ್ರೆ ಕೊಟ್ಟು ಸಾಯಿಸುವಂತೆ ಹೇಳಿದ್ದಳು. ಅದರಂತೆ ನನ್ನ ತಾಯಿಗೆ ಮುಕ್ತಿ ಕೊಡಿಸಿದ್ದೇನೆ ಎಂದು ಪುತ್ರಿ ಸೆನಾಲಿ ಸ್ಫೋಟಕ ಅಂಶವನ್ನು ಬಿಚ್ಚಿಟ್ಟಿದ್ದಾಳೆ. ಈಕೆಯ ಮಾತುಗಳು ಕೇಳಿ ಮೈಕ್ರೋ ಲೇಔಟ್ ಪೊಲೀಸರೇ ಶಾಕ್ ಆಗಿದ್ದಾರೆ. ಕೆಲವು ವರ್ಷಗಳ ಹಿಂದೆ ಸೆನಾಲಿ ತಂದೆ ತೀರಿ ಹೋಗಿದ್ದಾರೆ. ನೀನು ನನ್ನ ತಂದೆ ಬಳಿ ಹೋಗು, ನಾನು ಜೈಲಿಗೆ ಹೋಗುತ್ತೇನೆ ಎಂದು ಕೊಲೆ ಮಾಡುವ ಮುಂಚೆಯೇ ತಾಯಿ-ಮಗಳು ಮಾತನಾಡಿದ್ದರು ಎಂಬ ಸಂಗತಿ ಈ ಪ್ರಕರಣದ ವಿಚಾರಣೆ ವೇಳೆ ಬಯಲಾಗಿದೆ.
ಆರೋಪಿ ಸೆನಾಲಿ ಸೇನ್, ತಾಯಿ ಬೀವಾಪಾಲ್ ಮತ್ತು ಸೆನಾಲಿ ಅತ್ತೆ ಒಂದೇ ಮನೆಯಲ್ಲಿ ವಾಸವಿದ್ದರು. ಇಬ್ಬರು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದರಂತೆ. ತಾಯಿ ಮತ್ತು ಅತ್ತೆ ಜಗಳದಿಂದ ಬೇಸತ್ತು ಸೆನಾಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಸೆನಾಲಿ ಮಗನಿಗೂ ಕೂಡ ಮಾನಸಿಕ ತೊಂದರೆ ಕಾಡುತ್ತಿತ್ತು. ಒಂದು ಕಡೆ ಮಗನ ಚಿಂತೆ, ಇನ್ನೊಂದು ಕಡೆ ಅತ್ತೆ-ತಾಯಿಯ ಜಗಳ. ಇದರಿಂದ ಜೀವನದಲ್ಲಿ ಬೇಸತ್ತು ಹೋಗಿದ್ದ ಸೆನಾಲಿ ಈ ದುಷ್ಕ್ರತ್ಯ ಎಸಗಿದ್ದಾಳೆ ಎಂದು ತಿಳಿದುಬಂದಿದೆ.
ಮೂಲತಃ ಕೊಲ್ಕತ್ತಾ- ಅಸ್ಸಾಂ ಮೂಲದ ಸೆನಾಲಿ, ಸುಬ್ರತ್ ಸೇನ್ ದಂಪತಿ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ಕುಟುಂಬ ನಿಶ್ಚಯದಂತೆ ಇಬ್ಬರ ವಿವಾಹ ನಡೆದಿತ್ತು. ಸುಬ್ರತ್ ಸೇನ್, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದು, ಬಿಳೇಕಳ್ಳಿಯಲ್ಲಿ ಸ್ವಂತ ಪ್ಲ್ಯಾಟ್ ಹೊಂದಿದ್ದಾರೆ. ಇನ್ನು ಸುಬ್ರತ್ ಆತನ ತಾಯಿ, ಸೆನಾಲಿ ಹಾಗೂ ಒಂಬತ್ತು ವರ್ಷದ ಮಗ ವಾಸವಿದ್ದರು. ಇನ್ನು ಕೊಲ್ಕತ್ತಾದಲ್ಲಿ ಕ್ಲರ್ಕ್ ಆಗಿದ್ದ ಸೊನಾಲಿ ತಂದೆ 2018ರಲ್ಲಿ ಸಾವನಪ್ಪಿದ್ದರು. ಪತಿ ಸಾವಿನ ಬಳಿಕ ಬೀವಾಪಾಲ್ ಮಗಳ(ಸೊನಾಲಿ) ಮನೆಗೆ ಬಂದ ನೆಲೆಸಿದ್ದಳು. ಆದ್ರೆ, ನಿನ್ನೆ ತಾಯಿಯನ್ನು ಕೊಲೆ ಮಾಡಿ ಉಬರ್ ಮುಖಾಂತರ ಆಟೋ ಬುಕ್ ಮಾಡಿ ಮೈಕ್ರೋಲೇಔಟ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಳು.
ಈ ಸಂಬಂಧ ಪ್ರತಿಕ್ರಿಯಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ, ಸೋಮವಾರ (ಜೂ.12) ಮಧ್ಯಾಹ್ನ ಮಹಿಳೆಯೊಬ್ಬರು ಮೈಕೋ ಲೇಔಟ್ ಠಾಣೆಗೆ ಸೂಟ್ ಕೇಸ್ ಸಮೇತ ಬಂದಿದ್ದರು. ಸಬ್ ಇನ್ಸ್‌ಪೆಕ್ಟರ್ ಬಳಿ ನಾನು ನನ್ನ ತಾಯಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿ ಶವ ತೋರಿಸಿದ್ದಾರೆ. ಕೂಡಲೇ ನಮ್ಮ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.