ಮಂಗಳೂರು: ದಕ್ಷಿಣ ಕನ್ನಡ ಸುನ್ನೀ ಸೆಂಟರ್ ಜಿಲ್ಲಾ ಸಮಿತಿ ಮಂಗಳೂರು ಇದರ ಸುಳ್ಯ ಘಟಕದ ಪ್ರಥಮ ವಾರ್ಷಿಕ ಮಹಾಸಭೆಯು ದಿನಾಂಕ 17-06-2023ರಂದು ಸುಳ್ಯದ ಸುನ್ನೀ ಸೆಂಟರ್ ಕಚೇರಿಯಲ್ಲಿ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆ ಘಟಕದ ಅಧ್ಯಕ್ಷರಾದ ಅಬ್ದುಲ್ ಖಾದರ್ ಪಟೇಲ್ ವಹಿಸಿದ್ದರು. ಅಬ್ದುಲ್ ಹಮೀದ್ ಬೀಜಕೊಪ್ಪ ದುವಾ ನೆರವೇರಿಸಿದರು.
ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಮೊಗರ್ಪಣೆ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿ ಸಭೆಯಲ್ಲಿ ಅಂಗೀಕಾರ ಪಡೆದರು.
ಡಿ. ಕೆ. ಎಸ್. ಸಿ. ಇದರ ಸ್ಥಾಪಕ ಸದಸ್ಯರೂ, ಜಿಲ್ಲಾ ಸಮಿತಿಯ ಕೋಶಧಿಕಾರಿಯೂ ಆಗಿರುವ ಝಯ್ನುದ್ದೀನ್ ಮುಕ್ವೆ ಯವರ ನೇತೃತ್ವದಲ್ಲಿ 2023-24ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಪಟೇಲ್ ಮರು ಆಯ್ಕೆಯಾದರು. ನೂತನ ಪ್ರಧಾನ ಕಾರ್ಯದರ್ಶಿಯಾಗಿ ಕಮಲ್ ಅಜ್ಜಾವರ, ಕೋಶಧಿಕಾರಿಯಾಗಿ ಇಸ್ಮಾಯಿಲ್ ಹಾಜಿ,
ಉಪಾಧ್ಯಕ್ಷರುಗಳಾಗಿ ಅಬ್ದುಲ್ ಲತೀಫ್ ಅರ್ಲಡ್ಕ, ಅಬ್ದುಲ್ ಹಮೀದ್ ಬೇಜಾಕೊಪ್ಪ, ಎಸ್. ಪಿ. ಅಬೂಬಕ್ಕರ್,
ಕಾರ್ಯದರ್ಶಿಯಾಗಿ ಬದ್ರುದ್ದೀನ್ ಪಟೇಲ್, ಸಂಘಟನಾ ಕಾರ್ಯದರ್ಶಿಗಳಾಗಿ ಮೊಯಿದಿನ್ ಫ್ಯಾನ್ಸಿ, ಸಿದ್ದೀಕ್ ಕಟ್ಟೆಕಾರ್, ಸಲಹೆಗರರಾಗಿ ಎ. ಬಿ. ಹಸನುಲ್ ಫೈಝಿ, ಹಾಜಿ ಮಜೀದ್ ಜಿ. ಎಸ್., ಮುಸ್ತಫಾ ಜಿ. ಎಸ್., ಅಬ್ದುಲ್ ಹಮೀದ್ ಎಸ್. ಎಂ., ಕೆ. ಎಂ. ಉಮರ್ ಮೆಟ್ರೋ ಹಾಜಿ, ರಝಕ್ ಹಾಜಿ ಶೀತಲ್ ಆಯ್ಕೆಯಾದರು. ಸದಸ್ಯರುಗಳಾಗಿ ಮೊಯಿದಿನ್ ಕೆ. ಎಂ. ಜಟ್ಟಿಪಳ್ಳ, ತಾಜುದ್ದೀನ್ ಆರಂತೋಡು, ಸಿದ್ದೀಕ್ ಮೊಗರ್ಪಣೆ,ಅಶ್ರಫ್ ಮೆಟ್ರೋ, ಹಸೈನಾರ್ ಜಯನಗರ, ಇಬ್ರಾಹಿಂ ಜಾಲ್ಸೂರ್ ಆಯ್ಕೆಯಾದರು.
ಜಿಲ್ಲಾ ಸಮಿತಿಯ ಕಾರ್ಯಧ್ಯಕ್ಷರಾದ ಹುಸೈನಾಜಿ ಕಿನ್ಯ, ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಬಳ್ಕುಂಜೆ, ಆರ್ಗನೈಝರ್ ಮನ್ಸೂರ್ ವೆಲ್ಕಮ್ ನೂತನ ಸಮಿತಿಗೆ ಶುಭ ಹಾರೈಸಿದರು.
ಸಿದ್ದೀಕ್ ಮೊಗರ್ಪಣೆ ಸ್ವಾಗತಿಸಿದರು. ಸಿದ್ದೀಕ್ ಮಾಂಬ್ಳಿ ಧನ್ಯವಾದಗೈದರು.