dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖ ಎಂಬಲ್ಲಿ ಜನವಸತಿ ಪ್ರದೇಶದಲ್ಲಿ ಅಕ್ರಮವಾಗಿ ವೈನ್ ಶಾಪ್ ತೆರೆಯಲು ಹುನ್ನಾರ ನಡೆಸುತ್ತಿದ್ದು ಇದರ ವಿರುದ್ದ ಸ್ಥಳೀಯ ನಿವಾಸಿಗಳು ರಾಜ್ಯ ಅಬಕಾರಿ ಸಚಿವರಿಗೆ ದೂರು ನೀಡಿದ್ದು ಯಾವುದೇ ಕಾರಣಕ್ಕೂ ಅಲ್ಲಿ ವೈನ್ ಶಾಪ್ ತೆರೆಯಲು ಅನುಮತಿ ನೀಡಬಾರದು ನೀಡಿದಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಗಾಳಿಮುಖ ನಿವಾಸಿ ಸುಹೈಬ್ ಎಂಬವರು ಈಗಾಗಲೇ ದೂರು ನೀಡಿದವರಾಗಿದ್ದು ದೂರಿನಲ್ಲಿ ತಿಳಿಸಿರುವಂತೆ ಗಾಳಿಮುಖದಲ್ಲಿ ವೈನ್ ಶಾಪ್ ಪ್ರಾರಂಭ ಮಾಡಲು ಉದ್ದೇಶಿಸಿದ ಸ್ಥಳದಲ್ಲಿ ಈಗಾಗಲೇ ಅಕ್ರಮವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಗ್ರಾಪಂ ಅನುಮತಿ ಇಲ್ಲದೆ, ಫ್ಲಾಟಿಂಗ್ ಆಗದ ಜಾಗದಲ್ಲಿ ಈ ಕಟ್ಟಡ ನಿರ್ಮಾಣ ನಡೆಸಲಾಗುತ್ತಿದೆ. ಸ್ಥಳದ ಸುತ್ತಮುತ್ತಲಿನಲ್ಲಿ ಮುಸ್ಲಿಂರ ಮನೆಗಳೇ ಅಧಿಕವಾಗಿದ್ದು ಪಕ್ಕದಲ್ಲಿ ಅಂಗನವಾಡಿಯೂ ಇರುತ್ತದೆ. ಈ ಸ್ಥಳದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿ ಅದರಲ್ಲಿ ವೈನ್ ಶಾಪ್ ತೆರೆಯಲು ಹುನ್ನಾರ ನಡೆಸಿದ್ದಾರೆ.

ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿಯ ಮೂಲಕ ನೆಟ್ಟಣಿಗೆ ಮುಡ್ನೂರು ಪಿಡಿಒ ರವರು ಗ್ರಾಪಂ ಅನುಮತಿಯಿಲ್ಲದೆ ಕಟ್ಟಡಕ್ಕೆ ಪರವಾನಿಗೆಯನ್ನು ನೀಡಿದ್ದಾರೆ. ಪರವಾನಿಗೆ ನೀಡಿದ ಬಗ್ಗೆ ನಾವು ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿರುತ್ತೇವೆ. ನೆಟ್ಟಣಿಗೆ ಮುಡ್ನೂರು ಗ್ರಾಪಂ ಕಟ್ಟಡ ಪರವಾನಿಗೆ ಮತ್ತು ವೈನ್ ಶಾಪ್‌ಗೆ ಪರವಾನಿಗೆ ನೀಡದಂತೆ ನಿರ್ಣಯವನ್ನೂ ಕೈಗೊಂಡಿದ್ದು ಗ್ರಾಪಂ ನಿರ್ಣಯವನ್ನು ಮೀರಿ ಪಿಡಿಒರವರು ಅಸಿಂದು ಪರವಾನಿಗೆಯನ್ನು ನೀಡಿರುತ್ತಾರೆ ಎಂದು ಸಚಿವರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ವೈನ್ ಶಾಪ್ ಮಾಡಿದರೆ ಉಗ್ರ ಪ್ರತಿಭಟನೆ-
ನಿಗದಿತ ಕಟ್ಟಡದಲ್ಲಿ ವೈನ್ ಶಾಪ್ ಮಾಡಿದ್ದಲ್ಲಿ ಗ್ರಾಮಸ್ಥರು ಸೇರಿ ಉಗ್ರ ಹೋರಾಟವನ್ನು ನಡೆಸುತ್ತೇವೆ. ಕೇರಳ ಗಡಿಪ್ರದೇಶವಾಗಿರುವ ಗಾಳಿಮುಖದಲ್ಲಿ ಯಾವುದೇ ಕಾರಣಕ್ಕೂ ವೈನ್ ಶಾಪ್ ಆರಂಭ ಮಾಡಬಾರದು ಎಂದು ಗಾಳಿಮುಖ ನಾಗರಿಕರು ದ ಕ ಜಿಲ್ಲಾಧಿಕಾರಿ, ಅಬಕಾರಿ ಜಿಲ್ಲಾಧಿಕಾರಿ, ಪುತ್ತೂರು ಶಾಸಕರಿಗೆ ಮನವಿಯನ್ನು ಮಾಡಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!