ಪುತ್ತೂರು: ಬೆಟ್ಟಂಪಾಡಿಯಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಸಪ್ತಾಹ ಮತ್ತು ಉಚಿತ ನೋಂದಣಿ ಶಿಬಿರ ಕಾರ್ಯಕ್ರಮವು ಇದೇ ಬರುವ (24.06.2023) ಶನಿವಾರದಂದು ಬೆಳಿಗ್ಗೆ 9.30ಕ್ಕೆ ಸರಿಯಾಗಿ ಉದ್ಘಾಟನೆ ನಡೆಯಲಿದೆ.


ಈ ಒಂದು ಕಾರ್ಯಕ್ರಮವು ಬೆಟ್ಟಂಪಾಡಿ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಲಿದ್ದು ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಪುತ್ತೂರು ತಾಲೂಕಿನ ನೂತನ ಶಾಸಕರಾಗಿ ಆಯ್ಕೆಯಾದ ಅಶೋಕ್ ಕುಮಾರ್ ರೈಯವರಿಗೆ ಅಭಿನಂದನೆ ಹಾಗೂ ಕೃತಜ್ಞತೆ ಕಾರ್ಯಕ್ರಮ ನಡೆಯಲಿದೆ ಎಂದು ಬೆಟ್ಟಂಪಾಡಿ ಕಾಂಗ್ರೆಸ್ ಗ್ರಾಮೀಣ ವಲಯ ಅಧ್ಯಕ್ಷರಾದ ನವೀನ್ ರೈ ಚೆಲ್ಯಡ್ಕರವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕರು ಸಹಿತ ಹಲವು ಕಾಂಗ್ರೆಸ್ ನಾಯಕರು,ಮುಖಂಡರು ಭಾಗವಹಿಸಲಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರ ಜೊತೆಗೆ ಕಾಂಗ್ರೆಸ್ ಗ್ಯಾರೆಂಟಿ ಸಪ್ತಾಹದ ಉಚಿತ ನೋಂದಣಿ ಶಿಬಿರದ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಕಾಂಗ್ರೆಸ್ ಗ್ರಾಮೀಣ ವಲಯಾಧ್ಯಕ್ಷರು ಹಾಗೂ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ರೈ ಚೆಲ್ಯಡ್ಕರವರು ಪತ್ರಿಕಾ ವರದಿಯ ಮೂಲಕ ಮನವಿ ಮಾಡಿದ್ದಾರೆ.